ನಿರೀಕ್ಷೆಗೂ ಮೀರಿ ಕಲೆಕ್ಷನ್​ ಮಾಡಿದ ‘ಗದರ್​ 2’; ದುಬೈನಲ್ಲಿ ಸನ್ನಿ ಡಿಯೋಲ್​ ಪಾರ್ಟಿ

ಭಾರತದ ಮಾರುಕಟ್ಟೆಯಲ್ಲೇ ‘ಗದರ್​ 2’ ಸಿನಿಮಾದ ಕಲೆಕ್ಷನ್​ 336 ಕೋಟಿ ರೂಪಾಯಿ ದಾಟಿದೆ. ಎರಡನೇ ವೀಕೆಂಡ್​ನಲ್ಲೂ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ. ಈಗಾಗಲೇ ಅನೇಕ ಸ್ಟಾರ್​ ನಟರ ಸಿನಿಮಾಗಳ ದಾಖಲೆಯನ್ನು ‘ಗದರ್​ 2’ ಚಿತ್ರ ಉಡೀಸ್​ ಮಾಡಿದೆ.

ನಿರೀಕ್ಷೆಗೂ ಮೀರಿ ಕಲೆಕ್ಷನ್​ ಮಾಡಿದ ‘ಗದರ್​ 2’; ದುಬೈನಲ್ಲಿ ಸನ್ನಿ ಡಿಯೋಲ್​ ಪಾರ್ಟಿ
ಸನ್ನಿ ಡಿಯೋಲ್​, ಅಮೀಷಾ ಪಟೇಲ್​
Follow us
ಮದನ್​ ಕುಮಾರ್​
|

Updated on: Aug 20, 2023 | 1:52 PM

ಈಗ ಎಲ್ಲೆಲ್ಲೂ ‘ಗದರ್​ 2’ ಸಿನಿಮಾ (Gadar 2 Movie) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಚಿತ್ರ ಇಷ್ಟು ಕಲೆಕ್ಷನ್​ ಮಾಡಬಹುದು ಎಂದು ಯಾರೂ ಊಹಿಸಿರಲಿಲ್ಲ. ಬಿಡುಗಡೆಯಾಗಿ ಒಂದು ವಾರ ಕಳೆದರೂ ಈ ಸಿನಿಮಾದ ಅಬ್ಬರ ನಿಲ್ಲುತ್ತಿಲ್ಲ. ನಟ ಸನ್ನಿ ಡಿಯೋಲ್​ (Sunny Deol) ಅವರಿಗೆ ‘ಗದರ್ 2’ ಸಿನಿಮಾದ ಯಶಸ್ಸಿನಿಂದ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ನಾಗಾಲೋಟ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್​ ಪ್ರಿಯರಿಗೆ ಈ ಚಿತ್ರ ಇಷ್ಟವಾಗಿದೆ. ಬಹುವರ್ಷಗಳ ಬಳಿಕ ಸನ್ನಿ ಡಿಯೋಲ್​ ಅವರು ಇಷ್ಟು ದೊಡ್ಡ ಸಕ್ಸಸ್​ ಕಂಡಿದ್ದಾರೆ. ಆ ಖುಷಿಯನ್ನು ಅವರು ವಿದೇಶದಲ್ಲಿ ಸೆಲೆಬ್ರೇಟ್​ ಮಾಡಿದ್ದಾರೆ. ಚಿತ್ರದ ನಾಯಕಿ ಅಮೀಷಾ ಪಟೇಲ್​ (Ameesha Patel) ಜೊತೆ ಅವರು ದುಬೈಗೆ ತೆರಳಿದ್ದಾರೆ. ಅಲ್ಲಿ ‘ಗದರ್​ 2’ ಸಕ್ಸಸ್​ ಮೀಟ್​ ನಡೆದಿದೆ. ಆ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ಈ ಗೆಲುವಿಗಾಗಿ ಸನ್ನಿ ಡಿಯೋಲ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಬಾಲಿವುಡ್​ ಸಿನಿಮಾಗಳಿಗೆ ದುಬೈನಲ್ಲಿ ಮಾರುಕಟ್ಟೆ ಇದೆ ಎಂಬುದು ನಿಜ. ಆದರೆ ಈವರೆಗೂ ಬೇರೆ ಯಾವುದೇ ಸಿನಿಮಾ ಕೂಡ ಮಾಡಿರದಂತಹ ಒಂದು ಸಾಧನೆಯನ್ನು ‘ಗದರ್​ 2’ ಚಿತ್ರ ಮಾಡಿದೆ. ದುಬೈನ ಸ್ಟಾರ್​ ಸಿನಿಮಾಸ್​ ಮಲ್ಟಿಪ್ಲೆಕ್ಸ್​ನಲ್ಲಿರುವ ​ಎಲ್ಲ 10 ಪರದೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಪ್ರದರ್ಶನ ಆಗಿದೆ. ಅಲ್ಲಿನ ಪ್ರೇಕ್ಷಕರಿಂದ ಈ ಪರಿ ರೆಸ್ಪಾನ್ಸ್​ ಸಿಕ್ಕಿರುವುದಕ್ಕೆ ಚಿತ್ರತಂಡ ಫುಲ್​ ಖುಷಿ ಆಗಿದೆ. ನಟಿ ಅಮೀಷಾ ಪಟೇಲ್​ ಜೊತೆ ಸನ್ನಿ ಡಿಯೋಲ್​ ಅವರು ನಗು ನಗುತ್ತಾ ಪೋಸ್​ ನೀಡಿದ್ದಾರೆ.

ಮತ್ತೊಂದು ಸಿನಿಮಾಗೆ ರೆಡಿ ಆದ ಸನ್ನಿ ಡಿಯೋಲ್; 90ರ ದಶಕದ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್

ಭಾರತದ ಮಾರುಕಟ್ಟೆಯಲ್ಲೇ ‘ಗದರ್​ 2’ ಸಿನಿಮಾದ ಕಲೆಕ್ಷನ್​ 336 ಕೋಟಿ ರೂಪಾಯಿ ದಾಟಿದೆ. ಎರಡನೇ ವೀಕೆಂಡ್​ನಲ್ಲೂ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ. ಈಗಾಗಲೇ ಅನೇಕ ಸ್ಟಾರ್​ ನಟರ ಸಿನಿಮಾಗಳ ದಾಖಲೆಯನ್ನು ‘ಗದರ್​ 2’ ಚಿತ್ರ ಉಡೀಸ್​ ಮಾಡಿದೆ. ಅಂತಿಮವಾಗಿ ಈ ಸಿನಿಮಾದ ಕಲೆಕ್ಷನ್​ ಎಷ್ಟಾಗಲಿದೆ ಎಂದು ತಿಳಿಯಲು ಸಿನಿಪ್ರಿಯರು ಕಾತರರಾಗಿದ್ದಾರೆ. ‘ಒಎಂಜಿ 2’, ‘ಜೈಲರ್​’ ಮುಂತಾದ ಸಿನಿಮಾಗಳ ಕಠಿಣ ಪೈಪೋಟಿ ಇದ್ದರೂ ಕೂಡ ‘ಗದರ್​ 2’ ಸಿನಿಮಾ ಬ್ಲಾಕ್​ಬಸ್ಟರ್​ ಆಗಿದೆ.

ಅಮೀಷಾ ಪಟೇಲ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

ಆಗಸ್ಟ್​ 11ರಂದು ಬಿಡುಗಡೆಯಾದ ‘ಗದರ್​ 2’ ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿತು. ಅಂದು ಈ ಚಿತ್ರಕ್ಕೆ ಹರಿದು ಬಂದ ಆದಾಯ ಬರೋಬ್ಬರಿ 40.10 ಕೋಟಿ ರೂಪಾಯಿ. ಅಂದಿನಿಂದ ಸತತ 10 ದಿನಗಳ ಕಾಲವೂ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಚಿತ್ರದ ಪ್ರತಿದಿನದ ಗಳಿಕೆಯ ವಿವರ ಇಲ್ಲಿದೆ..

‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ

ಮೊದಲ ದಿನ: 40.10 ಕೋಟಿ ರೂ. ಎರಡನೇ ದಿನ: 43.08 ಕೋಟಿ ರೂ. ಮೂರನೇ ದಿನ: 51.70 ಕೋಟಿ ರೂ. ನಾಲ್ಕನೇ ದಿನ: 38.70 ಕೋಟಿ ರೂ. ಐದನೇ ದಿನ: 55.40 ಕೋಟಿ ರೂ. ಆರನೇ ದಿನ: 32.37 ಕೋಟಿ ರೂ. ಏಳನೇ ದಿನ: 23.28 ಕೋಟಿ ರೂ. ಎಂಟನೇ ದಿನ: 20.50 ಕೋಟಿ ರೂ. ಒಂಬತ್ತನೇ ದಿನ: 31.07 ಕೋಟಿ ರೂ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ