ಅಕ್ಷಯ್​ ಕುಮಾರ್​ಗಿಂತ ಪಂಕಜ್​ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್​ ಎಷ್ಟು?

ಪ್ರತಿ ಸಿನಿಮಾಗೆ ಅಕ್ಷಯ್​ ಕುಮಾರ್​ ಅವರು 50ರಿಂದ 100 ಕೋಟಿ ರೂಪಾಯಿ ತನಕ ಸಂಭಾವನೆ ಪಡೆಯುತ್ತಾರೆ. ಆದರೆ ‘ಒಎಂಜಿ 2’ ಸಿನಿಮಾದಲ್ಲಿ ಅವರು ಹಾಗೆ ಮಾಡಿಲ್ಲ. ಅವರ ಈ ನಿರ್ಧಾರದಿಂದ ಸಿನಿಮಾದ ಬಜೆಟ್​ ಕಡಿಮೆ ಆಗಿದೆ. ಸದ್ಯ ಈ ಚಿತ್ರ 90 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗತ್ತಿದೆ.

ಅಕ್ಷಯ್​ ಕುಮಾರ್​ಗಿಂತ ಪಂಕಜ್​ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್​ ಎಷ್ಟು?
ಪಂಕಜ್​​ ತ್ರಿಪಾಠಿ, ಅಕ್ಷಯ್​ ಕುಮಾರ್​, ಯಾಮಿ ಗೌತಮ್​
Follow us
ಮದನ್​ ಕುಮಾರ್​
|

Updated on: Aug 20, 2023 | 9:15 AM

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಕಾಣುತ್ತಿಲ್ಲ. ಯಾವ ರೀತಿಯ ಸಿನಿಮಾ ಮಾಡಿದರೂ ಅವರಿಗೆ ಯಶಸ್ಸು ದಕ್ಕುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ‘ಒಎಂಜಿ 2’ ಸಿನಿಮಾ ಬಿಡುಗಡೆಯಾಗಿ ಸಾಧಾರಣ ಗಳಿಕೆ ಮಾಡಿದೆ. ಈ ಸಿನಿಮಾದ ಕಲೆಕ್ಷನ್​ (OMG 2 Box Office Collection) ಈಗ 100 ಕೋಟಿ ರೂಪಾಯಿ ಗಡಿ ಮುಟ್ಟುವ ಹಂತದಲ್ಲಿದೆ. ಮೇಲ್ನೋಟಕ್ಕೆ ಇದು ದೊಡ್ಡ ಮೊತ್ತ ಎನಿಸಿದರೂ ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್​ ನಟರ ಸಿನಿಮಾಗೆ ಇದು ಸಾಧಾರಣ ಕಲೆಕ್ಷನ್​ ಅಷ್ಟೇ. ಯಾಕೆಂದರೆ ಇಂಥ ಸಿನಿಮಾಗಳ ಬಜೆಟ್​ ಕೂಡ ದೊಡ್ಡದಾಗಿ ಇರುತ್ತದೆ. ಹಾಗಾದರೆ, ‘ಒಎಂಜಿ 2’ ಸಿನಿಮಾದ ಬಜೆಟ್​ ಎಷ್ಟು? ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ (Pankaj Tripathi) ಮುಂತಾದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ..

2012ರಲ್ಲಿ ‘ಒಎಂಜಿ’ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಅದರ ಸೀಕ್ವೆಲ್​ ಆಗಿ ‘ಒಎಂಜಿ 2’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಮುಂತಾದ ಸ್ಟಾರ್​ ಕಲಾವಿದರ ನಟಿಸಿದ್ದಾರೆ. ಈ ಸಿನಿಮಾದ ಒಟ್ಟು ಬಜೆಟ್​ 65 ಕೋಟಿ ರೂಪಾಯಿ. ಅದ್ದೂರಿತನಕ್ಕೆ ಹೆಚ್ಚು ಮಹತ್ವ ನೀಡದೇ ಕಂಟೆಂಟ್​ ಮೇಲೆ ನಿರ್ದೇಶಕ ಅಮಿತ್​ ರೈ ಒತ್ತು ನೀಡಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮುಗಿಸಲು ಅವರು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​; ಸುತ್ತುವರಿದ ಅಭಿಮಾನಿಗಳು

‘ಒಎಂಜಿ 2’ ಸಿನಿಮಾದ ಬಜೆಟ್​ ಕಡಿಮೆ ಆಗಲು ಮುಖ್ಯ ಕಾರಣವೇ ಅಕ್ಷಯ್​ ಕುಮಾರ್​ ಅವರ ನಿರ್ಧಾರ. ಬೇರೆ ಸಿನಿಮಾಗಳಿಗೆ ಅವರು 50ರಿಂದ 100 ಕೋಟಿ ರೂಪಾಯಿ ತನಕವೂ ಸಂಭಾವನೆ ಪಡೆಯುತ್ತಾರೆ. ಆದರೆ ‘ಒಎಂಜಿ 2’ ಸಿನಿಮಾದಲ್ಲಿ ಅವರು ಹಾಗೆ ಮಾಡಿಲ್ಲ. ಈ ಸಿನಿಮಾದಲ್ಲಿ ತಮ್ಮದು ಮುಖ್ಯ ಪಾತ್ರ ಅಲ್ಲ ಎಂಬ ಕಾರಣಕ್ಕಾಗಿ ಅವರು ಉಚಿತವಾಗಿ ನಟಿಸಿದ್ದಾರೆ. ಚಿತ್ರತಂಡಕ್ಕೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ. ಹಾಗಾಗಿ ಸಿನಿಮಾದ ಬಜೆಟ್​ ಬಹಳಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್​ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್​ ಆದ ಅಕ್ಷಯ್​ ಕುಮಾರ್​

ನಟ ಪಂಕಜ್​ ತ್ರಿಪಾಠಿ ಅವರಿಗೆ ಬಹಳ ಬೇಡಿಕೆ ಇದೆ. ಪೋಷಕ ಪಾತ್ರಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಸಾಮಾನ್ಯವಾಗಿ ಅವರು ಪ್ರತಿ ಸಿನಿಮಾಗೆ 2ರಿಂದ 3 ಕೋಟಿ ರೂಪಾಯಿ ಪಡೆಯುತ್ತಾರೆ. ಆದರೆ ‘ಒಎಂಜಿ 2’ ಸಿನಿಮಾದಲ್ಲಿ ಅವರಿಗೆ ಸಿಕ್ಕಿರುವುದು ಬರೋಬ್ಬರಿ 5 ಕೋಟಿ ರೂಪಾಯಿ. ಇನ್ನು, ನಟಿ ಯಾಮಿ ಗೌತಮ್​ ಅವರು 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಿರಿಯ ನಟ ಅರುಣ್​ ಗೋವಿಲ್​ ಅವರಿಗೆ ಈ 50 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ.

ಇದನ್ನೂ ಓದಿ: ಸೋಲಿನ ನೋವು ಮರೆತು ಪೊಲೀಸರ ಜೊತೆ ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

ಆಗಸ್ಟ್​ 11ರಂದು ‘ಒಎಂಜಿ 2’ ಸಿನಿಮಾ ಬಿಡುಗಡೆ ಆಯಿತು. ಅದೇ ದಿನ ಸನ್ನಿ ಡಿಯೋಲ್​ ನಟನೆಯ ‘ಗದರ್​ 2’ ಚಿತ್ರ ಕೂಡ ತೆರೆಕಂಡಿತು. ಆಗಸ್ಟ್​ 10ರಂದು ರಜನಿಕಾಂತ್​ ಅಭಿನಯದ ‘ಜೈಲರ್​’ ರಿಲೀಸ್​ ಆಯಿತು. ಹಾಗಾಗಿ ಬಾಕ್ಸ್ ಆಫೀಸ್​ನಲ್ಲಿ ಪೈಪೋಟಿ ಜೋರಾಗಿದೆ. 8 ದಿನಗಳ ಯಶಸ್ವಿ ಪ್ರದರ್ಶನದ ಬಳಿಕ ‘ಒಎಂಜಿ 2’ ಸಿನಿಮಾ 90 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಶೀಘ್ರದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್​ ಸೇರುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್