ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್

Dulquer Salmaan: ತಮ್ಮ ಸಿನಿಮಾ ಕಾರ್ಯಕ್ರಮದಲ್ಲಿ ನಟ ರಾಣಾ ದಗ್ಗುಬಾಟಿ, ಬಾಲಿವುಡ್ ನಟಿ ಸೋನಂ ಕಪೂರ್ ಬಗ್ಗೆ ನೀಡಿದ್ದ ಹೇಳಿಕೆ ಕುರಿತಾಗಿ ದುಲ್ಕರ್ ಸಲ್ಮಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್
ದುಲ್ಕರ್ ಸಲ್ಮಾನ್
Follow us
ಮಂಜುನಾಥ ಸಿ.
|

Updated on: Aug 19, 2023 | 5:24 PM

ರಾಣಾ ದಗ್ಗುಬಾಟಿಯ (Rana Daggubati) ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು, ಸ್ಟಾರ್ ನಟ ದುಲ್ಕರ್ ಸಲ್ಮಾನ್​ರ (Dulquer Salmaan) ‘ಕಿಂಗ್ ಆಫ್ ಕೋಟಾ’ (King of Kota) ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ರಾಣಾ ದಗ್ಗುಬಾಟಿ, ತಮ್ಮ ಗೆಳೆಯ ದುಲ್ಕರ್ ಅನ್ನು ಹೊಗಳುವ ಭರದಲ್ಲಿ ಬಾಲಿವುಡ್ ನಟಿಯೊಬ್ಬರನ್ನು ಟೀಕಿಸಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಣಾ ದಗ್ಗುಬಾಟಿ ಕ್ಷಮಾಪಣೆಯನ್ನೂ ಸಹ ಕೇಳಿದರು. ಇದೀಗ ಆ ವಿವಾದದ ಬಗ್ಗೆ ದುಲ್ಕರ್ ಸಲ್ಮಾನ್ ಪ್ರತಿಕ್ರಿಯೆ ನೀಡಿದ್ದಾರೆ.

”ಅವರ ಹೇಳಿಕೆ ಸರಿ-ತಪ್ಪು ಎಂದು ನಾನು ಚರ್ಚಿಸುವುದಿಲ್ಲ. ಆದರೆ ನನಗೆ ಎಲ್ಲರೂ ಬಹಳ ಒಳ್ಳೆಯ ಗೆಳೆಯರೇ. ವಿವಿಧ ಚಿತ್ರರಂಗಗಳಲ್ಲಿ ನಾನು ಬಹಳ ಒಳ್ಳೆಯ ಗೆಳೆಯರು, ಸಹನಟರನ್ನು ಹೊಂದಿದ್ದೇನೆ. ನನಗೆ ಎಲ್ಲರೂ ಇಷ್ಟ. ನಾನು ಬಹಳ ಸರಳ ವ್ಯಕ್ತಿ, ಯಾವುದರ ಬಗ್ಗೆಯೂ ಕಂಪ್ಲೆಂಟ್ ಮಾಡುವುದಿಲ್ಲ. ಅಂದು ರಾಣಾ ದಗ್ಗುಬಾಟಿ ಹೇಳಿದ ಮಾತು ಉದ್ದೇಶಪೂರ್ವಕವಾಗಿಲ್ಲ ಅನ್ನಿಸುತ್ತದೆ, ಅದೇ ಕಾರಣಕ್ಕೆ ಅವರು ಕ್ಷಮೆಯನ್ನೂ ಕೇಳಿದ್ದಾರೆ. ರಾಣಾ ನನ್ನ ಬಹು ಆತ್ಮೀಯ ಗೆಳೆಯ, ಅವರ ಹೇಳಿಕೆಯಿಂದ ನಮಗೇನಾದರೂ ತೊಂದರೆ ಆಯಿತೆ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಕ್ಷಮೆಯನ್ನೂ ಕೇಳಿದ್ದಾರೆ” ಎಂದಿದ್ದಾರೆ ದುಲ್ಕರ್ ಸಲ್ಮಾನ್.

‘ಕಿಂಗ್ ಆಫ್ ಕೋಟ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್​ರ ಸರಳತೆ ಬಗ್ಗೆ ಮಾತನಾಡುತ್ತಾ, ದುಲ್ಕರ್ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ನಿರ್ಮಾಪಕರು ನನ್ನ ಗೆಳೆಯರಾಗಿದ್ದ ಕಾರಣ ನಾನೂ ಚಿತ್ರೀಕರಣಕ್ಕೆ ಹೋಗಿದ್ದೆ. ನಾನು ಹೋಗುವ ವೇಳೆಗೆ ಎರಡು ಮೂರು ಟೇಕ್ ಆಗಿದ್ದವು, ಮುಂದಿನ ಟೇಕ್​ಗೆ ದುಲ್ಕರ್ ಸಹಿತ ಎಲ್ಲರೂ ತಯಾರಾಗಿದ್ದರು. ಒಂದು ಮೂಲೆಯಲ್ಲಿ ದುಲ್ಕರ್ ಸಲ್ಮಾನ್, ಕೇರಳದ ಯಾವುದೋ ಸ್ಪಾಟ್ ಬಾಯ್ ಜೊತೆ ಸರಳವಾಗಿ ಮಾತನಾಡುತ್ತಾ ಕೂತಿದ್ದರು, ಆದರೆ ನಾಯಕಿ, ಲಂಡನ್​ನಲ್ಲಿರುವ ತಮ್ಮ ಪತಿ ಜೊತೆ ಮಾತನಾಡುತ್ತಾ ಇದ್ದರೂ ಅದೂ ಶಾಟ್​ನ ಮಧ್ಯೆ” ಎಂದು ಹೇಳಿದ್ದರು.

ಇದನ್ನೂ ಓದಿ:ಸೋನಂ ನಟನೆ ಟೀಕೆ ಮಾಡಿದ ರಾಣಾ ದಗ್ಗುಬಾಟಿ; ಹೇಳಿಕೆ ವೈರಲ್ ಆದ ಬಳಿಕ ಕ್ಷಮೆ ಕೇಳಿದ ಹೀರೋ

ಮುಂದುವರೆದು, ”ಆಕೆ ಆ ಕಾಲ್ ಮುಗಿಸಿ ನನ್ನೊಟ್ಟಿಗೆ ಪರಿಚಯ ಮಾಡಿಕೊಂಡರು, ನಾನು ಶಾಟ್ ರೆಡಿ ಇದೆ ಹೋಗಿ ಎಂದೆ. ಹೋಗಿ ಆಕ್ಟ್ ಮಾಡುವಾಗ ಮತ್ತೆ ಡೈಲಾಗ್ ಮರೆಯುವುದು ಶಾಟ್ ಸರಿಯಾಗಿ ನೀಡದೇ ಇರುವುದು ಮಾಡುತ್ತಲೇ ಇದ್ದರು. ಆ ನಂತರವೂ ಒಂದು ಫೋನ್ ಕಾಲ್ ಅಟೆಂಡ್ ಮಾಡಿದರು. ಆದರೆ ಅಷ್ಟೂ ಸಮಯ ದುಲ್ಕರ್ ಸಮಾಧಾನದಿಂದ ಬಿಸಿನಲ್ಲಿ ಸುಮ್ಮನೆ ನಿಂತಿದ್ದರು. ಅದೇ ನಾನಾಗಿದ್ದರೆ ಬಾಟಲಿ ಎತ್ತಿ ನೆಲಕ್ಕೆ ಒಡೆಯುತ್ತಿದ್ದೆ” ಎಂದು ರಾಣಾ ದಗ್ಗುಬಾಟಿ ಹೇಳಿದ್ದರು.

ರಾಣಾ ದಗ್ಗುಬಾಟಿ ಹೇಳಿದ ಸಿನಿಮಾ ನಟಿ ಸೋನಂ ಕಪೂರ್, ದುಲ್ಕರ್ ಸಲ್ಮಾನ್ ಹಾಗೂ ಸೋನಂ ಕಪೂರ್ ‘ದಿ ಜೋಯಾ ಫ್ಯಾಕ್ಟರ್’ ಹೆಸರಿನ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಸೋನಂ ಕಪೂರ್​ರ ಪತಿ ಲಂಡನ್​ನಲ್ಲಿದ್ದರು. ಇದೀಗ ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಣಾ ದಗ್ಗುಬಾಟಿ, ಸೋನಂ ಕಪೂರ್ ಬಳಿ ಕ್ಷಮೆ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!