Dulquer Salmaan: ದುಲ್ಕರ್​ ಸಲ್ಮಾನ್​ ಬಗ್ಗೆ ಬಂದಿತ್ತು ಕೆಟ್ಟ ವಿಮರ್ಶೆ; ‘ಸೀತಾ ರಾಮಂ’ ನಟನ ಆ ನೋವಿನ ದಿನಗಳು ಹೇಗಿತ್ತು?

Sita Ramam | Chup: ‘ತಂದೆ ರೀತಿ ಇವರು ಆಗಲು ಸಾಧ್ಯವಿಲ್ಲ. ನಟನೆ ಮಾಡದೇ ಇರುವುದೇ ಉತ್ತಮ’ ಎಂದೆಲ್ಲ ದುಲ್ಕರ್​ ಸಲ್ಮಾನ್ ಬಗ್ಗೆ ಟೀಕೆ ಮಾಡಲಾಗಿತ್ತು. ಅದು ​ಅವರಿಗೆ ಸಖತ್​​ ಬೇಸರ ಮೂಡಿಸಿತ್ತು.

Dulquer Salmaan: ದುಲ್ಕರ್​ ಸಲ್ಮಾನ್​ ಬಗ್ಗೆ ಬಂದಿತ್ತು ಕೆಟ್ಟ ವಿಮರ್ಶೆ; ‘ಸೀತಾ ರಾಮಂ’ ನಟನ ಆ ನೋವಿನ ದಿನಗಳು ಹೇಗಿತ್ತು?
ದುಲ್ಕರ್ ಸಲ್ಮಾನ್
TV9kannada Web Team

| Edited By: Madan Kumar

Sep 15, 2022 | 9:04 AM

ನಟ ದುಲ್ಕರ್​ ಸಲ್ಮಾನ್ (Dulquer Salmaan)​ ಅವರು ಈಗ ಯಶಸ್ಸಿ ಖುಷಿಯಲ್ಲಿ ತೇಲುತ್ತಿದ್ದಾರೆ. ಬಹುಭಾಷೆಯಲ್ಲಿ ಅವರು ಸ್ಟಾರ್​ ಆಗಿದ್ದಾರೆ. ಮೂಲತಃ ಮಲಯಾಳಿ ನಟನಾದ ಅವರು ತಮಿಳು, ಹಿಂದಿ, ತೆಲುಗು ಚಿತ್ರರಂಗದಲ್ಲೂ ಹವಾ ಸೃಷ್ಟಿಸಿದ್ದಾರೆ. ಅವರು ನಟಿಸಿರುವ ‘ಸೀತಾ ರಾಮಂ’ (Sita Ramam) ಸಿನಿಮಾ ಸೂಪರ್​ ಹಿಟ್​ ಆಗಿದೆ. ಚಿತ್ರಮಂದಿರದಲ್ಲಿ ಕೋಟ್ಯಂತರ ರೂಪಾಯಿ ಬಾಚಿಕೊಂಡಿದ್ದು ಮಾತ್ರವಲ್ಲದೇ ಒಟಿಟಿಯಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ದುಲ್ಕರ್​ ಸಲ್ಮಾನ್​, ರಶ್ಮಿಕಾ ಮಂದಣ್ಣ (Rashmika Mandanna), ಮೃಣಾಲ್​ ಠಾಕೂರ್​ ಮುಂತಾದವರು ನಟಿಸಿದ್ದಾರೆ. ಎಲ್ಲರ ನಟನೆ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಚ್ಚರಿ ಎಂದರೆ ವೃತ್ತಿಜೀವನದ ಆರಂಭದ ದಿನಗಳಲ್ಲಿ ದುಲ್ಕರ್​ ಸಲ್ಮಾನ್​ ಅವರ ಅಭಿನಯದ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಲಾಗಿತ್ತು.

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮೂಟಿ ಅವರ ಪುತ್ರ ದುಲ್ಕರ್​ ಸಲ್ಮಾನ್​. ತಂದೆಗಿಂತಲೂ ಭಿನ್ನವಾಗಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರ ನಟನೆ ಬಗ್ಗೆ ವಿಮರ್ಶಕರು ಕೆಟ್ಟದಾಗಿ ಬರೆದಿದ್ದರು. ‘ಅಪ್ಪನ ರೀತಿ ಇವರು ಆಗಲು ಸಾಧ್ಯವಿಲ್ಲ, ನಟನೆ ಮಾಡದೇ ಇರುವುದೇ ಉತ್ತಮ’ ಎಂದೆಲ್ಲ ವಿಮರ್ಶೆ ಮಾಡಿದ್ದರು. ಅದು ದುಲ್ಕರ್​ ಸಲ್ಮಾನ್​ ಅವರಿಗೆ ಸಖತ್​ ಬೇಸರ ಮೂಡಿಸಿತ್ತು.

ಅಚ್ಚರಿ ಏನೆಂದರೆ, ಈಗ ದುಲ್ಕರ್​ ಸಲ್ಮಾನ್ ನಟಿಸಿರುವ ‘ಚುಪ್​’ ಚಿತ್ರಕ್ಕೂ, ಸಿನಿಮಾ ವಿಮರ್ಶಕರಿಗೂ ಸಂಬಂಧ ಇದೆ. ಕೆಟ್ಟದಾಗಿ ವಿಮರ್ಶೆ ಮಾಡಿದವರನ್ನು ಸಾಯಿಸುವ ಸೀರಿಯಲ್​ ಕಿಲ್ಲರ್​ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಖ್ಯಾತ ನಿರ್ದೇಶಕ ಆರ್​. ಬಾಲ್ಕಿ ಅವರ ಬತ್ತಳಿಕೆಯಿಂದ ಈ ಸಿನಿಮಾ ಮೂಡಿಬರುತ್ತಿದೆ. ಸನ್ನಿ ಡಿಯೋಲ್​, ಶ್ರೇಯಾ ಧನ್ವಂತರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್​ 23ರಂದು ‘ಚುಪ್​’ ಸಿನಿಮಾ ರಿಲೀಸ್​ ಆಗಲಿದೆ.

‘ದುಲ್ಕರ್​ ಸಲ್ಮಾನ್​ ರೀತಿಯ ಪ್ರತಿಭಾವಂತ ನಟ ಸಿಕ್ಕಿದ್ದಕ್ಕೆ ನಾನು ಲಕ್ಕಿ ಎಂದುಕೊಳ್ಳುತ್ತೇನೆ. ಲಾಕ್​ ಡೌನ್​ನಲ್ಲಿ ವಿಡಿಯೋ ಕಾಲ್​ ಮೂಲಕ ಅವರಿಗೆ ನಾನು ಕಥೆ ಹೇಳಿದೆ. ನಂತರ ಕೊಚ್ಚಿಯಲ್ಲಿ ಅರ್ಥ ಗಂಟೆ ಭೇಟಿ ಆದೆ. ನಂತರ ಸಿಕ್ಕಿದ್ದೇ ಶೂಟಿಂಗ್​ ಸೆಟ್​​ನಲ್ಲಿ. ಯಾವುದೇ ರೀತಿ ವರ್ಕ್​ಶಾಪ್​ ಮಾಡಲಿಲ್ಲ’ ಎಂದು ನಿರ್ದೇಶಕ ಆರ್​. ಬಾಲ್ಕಿ ಹೇಳಿದ್ದಾರೆ.

ಹಲವಾರು ಸಿನಿಮಾಗಳಲ್ಲಿ ದುಲ್ಕರ್​ ಸಲ್ಮಾನ್​ ಅವರು ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಕುರುಪ್​’, ‘ಹೇ ಸಿನಾಮಿಕಾ’, ‘ಸೀತಾ ರಾಮಂ’, ‘ಸೆಲ್ಯೂಟ್​’ ಮುಂತಾದ ಚಿತ್ರಗಳಿಂದ ಅವರ ಚಾರ್ಮ್​ ಹೆಚ್ಚಾಗಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada