AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranveer Singh: ‘ವೈರಲ್​ ಆದ ಆ ಫೋಟೋ ನಂದಲ್ಲ’: ವಿಚಾರಣೆ ವೇಳೆ ಶಾಕಿಂಗ್​ ವಿಚಾರ ತಿಳಿಸಿದ ರಣವೀರ್​ ಸಿಂಗ್​

Ranveer Singh Viral Photos: ವೈರಲ್​ ಆಗಿರುವ ಎಲ್ಲ ಫೋಟೋಗಳನ್ನು ರಣವೀರ್​ ಸಿಂಗ್ ಅವರಿಗೆ ಪೊಲೀಸರು ತೋರಿಸಿದ್ದಾರೆ. ಆದರೆ ಆ ಪೈಕಿ ಒಂದು ಫೋಟೋ ಮಾತ್ರ ತಮ್ಮದಲ್ಲ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ.

Ranveer Singh: ‘ವೈರಲ್​ ಆದ ಆ ಫೋಟೋ ನಂದಲ್ಲ’: ವಿಚಾರಣೆ ವೇಳೆ ಶಾಕಿಂಗ್​ ವಿಚಾರ ತಿಳಿಸಿದ ರಣವೀರ್​ ಸಿಂಗ್​
ರಣವೀರ್ ಸಿಂಗ್
TV9 Web
| Updated By: ಮದನ್​ ಕುಮಾರ್​|

Updated on: Sep 15, 2022 | 11:35 AM

Share

ನಟ ರಣವೀರ್​ ಸಿಂಗ್ (Ranveer Singh) ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಜುಲೈನಿಂದ ಈಚೆಗೆ ಅವರು ಹೆಚ್ಚು ಹೈಲೈಟ್​ ಆಗಿರುವುದು ನಗ್ನ ಫೋಟೋಶೂಟ್​ ಕಾರಣದಿಂದ. ‘ಪೇಪರ್​’ ಮ್ಯಾಗಜಿನ್​ ಸಲುವಾಗಿ ಅವರು ಮಾಡಿಸಿದ ಫೋಟೋಶೂಟ್​ನಿಂದಾಗಿ ದೊಡ್ಡ ವಿವಾದ (Controversy) ಹುಟ್ಟಿಕೊಂಡಿತು. ರಣವೀರ್​ ಸಿಂಗ್​ ವಿರುದ್ಧ ಕೇಸ್​ ಕೂಡ ಹಾಕಲಾಯಿತು. ಈಗ ಆ ಪ್ರಕರಣದಲ್ಲಿ ಒಂದು ಟ್ವಿಸ್ಟ್​ ಸಿಕ್ಕಿದೆ. ವೈರಲ್​ ಆದ ಅನೇಕ ಫೋಟೋಗಳ (Viral Photos) ಪೈಕಿ ಒಂದು ಫೋಟೋ ತಮ್ಮದಲ್ಲ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್​ ವಿಚಾರಣೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. ಸದ್ಯ ಒಂದು ಸುತ್ತಿನ ವಿಚಾರಣೆ ಮಾಡಲಾಗಿದ್ದು, ಅಗತ್ಯವಿದ್ದರೆ ಅವರನ್ನು ಮತ್ತೊಮ್ಮೆ ಪೊಲೀಸ್​ ಠಾಣೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.

ರಣವೀರ್​ ಸಿಂಗ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಜುಲೈ 22ರಂದು ಒಂದಷ್ಟು ನಗ್ನ ಫೋಟೋಗಳನ್ನು ಹಂಚಿಕೊಂಡರು. ಅವು ಕ್ಷಣಾರ್ಧದಲ್ಲಿ ವೈರಲ್​ ಆದವು. ಸೋಶಿಯಲ್​ ಮೀಡಿಯಾದಲ್ಲಿ ಅವರ ಬೆತ್ತಲೆ ಫೋಟೋಶೂಟ್​ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆರಂಭ ಆಯಿತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ರಣವೀರ್​ ಸಿಂಗ್​ ನಡೆದುಕೊಂಡಿದ್ದಾರೆ ಹಾಗೂ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ದೂರ ದಾಖಲಾಯಿತು.

‘ಆಗಸ್ಟ್​ 30ರೊಳಗೆ ಮುಂಬೈನ ಚೆಂಬೂರ್​ ಪೊಲೀಸ್​ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ರಣವೀರ್​ ಸಿಂಗ್​ ಅವರಿಗೆ ನೋಟಿಸ್​ ನೀಡಲಾಗಿತ್ತು. ಒಂದು ದಿನ ಮುನ್ನವೇ, ಅಂದರೆ ಆಗಸ್ಟ್​ 29ರ ಬೆಳಗ್ಗೆ 7.30ಕ್ಕೆ ಅವರು ಪೊಲೀಸ್​ ಠಾಣೆಯಲ್ಲಿ ಹಾಜರಾಗಿದ್ದರು. ಬೆಳಗ್ಗೆ 9.30ರ ತನಕ ಠಾಣೆಯಲ್ಲೇ ಇದ್ದರು. 2 ಗಂಟೆಗಳ ಕಾಲ ಅವರ ವಿಚಾರಣೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ
Image
Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ; ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

ವೈರಲ್​ ಆಗಿರುವ ಎಲ್ಲ ಫೋಟೋಗಳನ್ನು ರಣವೀರ್​ ಸಿಂಗ್ ಅವರಿಗೆ ಪೊಲೀಸರು ತೋರಿಸಿದ್ದಾರೆ. ಆದರೆ ಆ ಪೈಕಿ ಒಂದು ಫೋಟೋ ಮಾತ್ರ ತಮ್ಮದಲ್ಲ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೋಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಅಂತ ಅವರು ಹೇಳಿದ್ದಾರೆ. ಸದ್ಯ ಈ ವಿಚಾರಣೆ ಮುಂದುವರಿದಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಸ್ತುತ ‘ಸರ್ಕಸ್​’ ಹಾಗೂ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾಗಳಲ್ಲಿ ರಣವೀರ್​ ಸಿಂಗ್ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮಕ್ಕೆ ಬಂದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ