Ranveer Singh: ತಮ್ಮದೇ ಬಾಡಿಗಾರ್ಡ್​ ಕೈಯಲ್ಲಿ ಪೆಟ್ಟು ತಿಂದ ರಣವೀರ್​ ಸಿಂಗ್​? ವಿಡಿಯೋದ ಅಸಲಿಯತ್ತು ಇಲ್ಲಿದೆ

Ranveer Singh Viral Video: ಸೈಮಾ ಸಮಾರಂಭದ ರೆಡ್​ ಕಾರ್ಪೆಟ್​ಗೆ ರಣವೀರ್​ ಸಿಂಗ್​ ಎಂಟ್ರಿ ನೀಡುವಾಗ ಜನರ ನೂಕುನುಗ್ಗಲು ಉಂಟಾಗಿತ್ತು. ಆಗ ಅವರನ್ನು ಬಾಡಿಗಾರ್ಡ್ಸ್​ ಸುತ್ತುವರಿದರು.

Ranveer Singh: ತಮ್ಮದೇ ಬಾಡಿಗಾರ್ಡ್​ ಕೈಯಲ್ಲಿ ಪೆಟ್ಟು ತಿಂದ ರಣವೀರ್​ ಸಿಂಗ್​? ವಿಡಿಯೋದ ಅಸಲಿಯತ್ತು ಇಲ್ಲಿದೆ
ರಣವೀರ್ ಸಿಂಗ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 14, 2022 | 11:08 AM

ಬಾಲಿವುಡ್​ ನಟ ರಣವೀರ್​ ಸಿಂಗ್​ (Ranveer Singh) ಇದ್ದಲ್ಲಿ ಸಿಕ್ಕಾಪಟ್ಟೆ ಜೋಶ್​ ಇರುತ್ತದೆ. ಎಲ್ಲರ ಗಮನವೂ ತಮ್ಮ ಕಡೆಗೆ ಇರುವಂತೆ ಅವರು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಬೆಂಗಳೂರಿಗೆ ಬಂದಿದ್ದರು. ಅದ್ದೂರಿಯಾಗಿ ನಡೆದ ಸೈಮಾ ಅವಾರ್ಡ್ಸ್​ (SIIMA Awards 2022) ಕಾರ್ಯಕ್ರಮದಲ್ಲಿ ರಣವೀರ್​ ಸಿಂಗ್​ ಭಾಗಿ ಆಗಿದ್ದರು. ಈ ವೇಳೆ ಅವರ ಕೆನ್ನೆಗೆ ಬಾಡಿಗಾರ್ಡ್​ ಕೈಯಿಂದ ಪೆಟ್ಟು ಬಿದ್ದಿದೆ! ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಮ್ಮ ನೆಚ್ಚಿನ ನಟನಿಗೆ ಯಾಕೆ ಹೀಗಾಯ್ತು ಎಂದು ಅಭಿಮಾನಿಗಳು ಕಮೆಂಟ್​ಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ನಿಜಕ್ಕೂ ಅವರಿಗೆ ಬಾಡಿಗಾರ್ಡ್​ (Bodyguard) ಹೊಡೆದಿದ್ದಾರಾ ಎಂದು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದ ಅಸಲಿಯತ್ತೇನು? ಇಲ್ಲಿದೆ ವಿವರ..

ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ರಣವೀರ್​ ಸಿಂಗ್​ ಅವರಿಗೆ ಇರುವ ಜನಪ್ರಿಯತೆ ಅಪಾರ. ದಕ್ಷಿಣ ಭಾರತದಲ್ಲೂ ಅವರ ಸಿನಿಮಾಗಳು ಬ್ಲಾಕ್​ ಬಸ್ಟರ್​ ಹಿಟ್​ ಆಗಿವೆ. ಅವರು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ರಣವೀರ್​ ಸಿಂಗ್​ ಅವರಿಗೆ ಕರ್ನಾಟಕ, ಅದರಲ್ಲೂ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ. ಯಾಕೆಂದರೆ ಅವರು ಬೆಂಗಳೂರಿನ ಅಳಿಯ. ಕನ್ನಡತಿ ದೀಪಿಕಾ ಪಡುಕೋಣೆ ಅವರನ್ನು ಮದುವೆ ಆದ ನಂತರ ಹಲವು ಬಾರಿ ರಣವೀರ್​ ಸಿಂಗ್​ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಈ ಬಾರಿ ಅವರು ಸೈಮಾ ಸಮಾರಂಭಕ್ಕಾಗಿ ಬಂದಾಗ ಅಭಿಮಾನಿಗಳು ಅವರನ್ನು ಮಾತನಾಡಿಸಲು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ
Image
Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ; ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

ಸೈಮಾ ಸಮಾರಂಭದ ರೆಡ್​ ಕಾರ್ಪೆಟ್​ಗೆ ರಣವೀರ್​ ಸಿಂಗ್​ ಎಂಟ್ರಿ ನೀಡುವಾಗ ಜನರ ನೂಕುನುಗ್ಗಲು ಉಂಟಾಗಿತ್ತು. ಆಗ ಅವರನ್ನು ಬಾಡಿಗಾರ್ಡ್ಸ್​ ಸುತ್ತುವರಿದರು. ಅಭಿಮಾನಿಗಳ ತಳ್ಳಾಟ ಹೆಚ್ಚಿದ್ದರಿಂದ ಬಾಡಿಗಾರ್ಡ್​ ಒಬ್ಬರ ಕೈ ರಣವೀರ್​ ಸಿಂಗ್​ ಮುಖಕ್ಕೆ ತಗುಲಿತು. ಅದು ಆಕಸ್ಮಿಕವಾಗಿ ಆದ ಪ್ರಮಾದ ಎಂಬುದು ಅವರಿಗೆ ಅರಿವಾಯಿತು. ಹಾಗಾಗಿ ಅವರು ಆ ಬಾಡಿಗಾರ್ಡ್​ ವಿರುದ್ಧ ಕೂಗಾಡಲಿಲ್ಲ. ಅದೇ ವಿಡಿಯೋ ಈಗ ವೈರಲ್​ ಆಗಿದೆ.

ಬಹಳ ಅದ್ದೂರಿಯಾಗಿ 10ನೇ ವರ್ಷದ ಸೈಮಾ ಸಮಾರಂಭ ನಡೆಯಿತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಜರುಗಿದ್ದು ವಿಶೇಷವಾಗಿತ್ತು. ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಚಿತ್ರರಂಗದ ಅನೇಕ ಸ್ಟಾರ್​ ಸೆಲೆಬ್ರಿಟಿಗಳು ಆಗಮಿಸಿ ಸಮಾರಂಭದ ರಂಗು ಹೆಚ್ಚಿಸಿದರು. ಯಶ್​, ಶಿವರಾಜ್​ಕುಮಾರ್​, ಕಮಲ್​ ಹಾಸನ್​, ಅಲ್ಲು ಅರ್ಜುನ್​, ವಿಜಯ್​ ದೇವರಕೊಂಡ ಸೇರಿದಂತೆ ಅನೇಕ ಕಲಾವಿದರು ಸೈಮಾ ಸಂಭ್ರಮಕ್ಕೆ ಸಾಕ್ಷಿಯಾದರು. ಇದೇ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಲಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ