ಸುಕೇಶ್ ಚಂದ್ರಶೇಖರ್ ಬಹು ಕೋಟಿ​ ವಂಚನೆ ಪ್ರಕರಣ: ಜಾಕ್ವೆಲಿನ್ ಬಳಿಕ ನೋರಾಗೆ ಹೆಚ್ಚಿತು ಸಂಕಷ್ಟ

ಇತ್ತೀಚೆಗೆ ನಟಿ ನೋರಾ ಅವರನ್ನು ದೆಹಲಿ ಪೊಲೀಸರು ಕರೆದು ವಿಚಾರಣೆ ಮಾಡಿದ್ದಾರೆ. ನೋರಾ ಅವರು ವಿಚಾರಣೆಗೆ ತೆರಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋರಾ ಜತೆಗೆ ಪಿಂಕಿ ಇರಾನಿ ಕೂಡ ಇದ್ದರು.

ಸುಕೇಶ್ ಚಂದ್ರಶೇಖರ್ ಬಹು ಕೋಟಿ​ ವಂಚನೆ ಪ್ರಕರಣ: ಜಾಕ್ವೆಲಿನ್ ಬಳಿಕ ನೋರಾಗೆ ಹೆಚ್ಚಿತು ಸಂಕಷ್ಟ
ನೋರಾ-ಜಾಕ್ವೆಲಿನ್​-ಸುಕೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 16, 2022 | 7:41 AM

ಸುಕೇಶ್ ಚಂದ್ರಶೇಖರ್ (Sukesh Chandrashekhar) ಮಾಡಿರುವ 200 ಕೋಟಿ ರೂಪಾಯಿ ವಂಚನೆ ಪ್ರಕರಣ ನಿತ್ಯ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಸುಕೇಶ್​ಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್​​​ಗೂ ನಿಕಟ ಸಂಪರ್ಕ ಇತ್ತು ಎಂಬ ವಿಚಾರ ತನಿಖೆಯಿಂದ ಸಾಬೀತಾಗಿದೆ. ಜಾಕ್ವೆಲಿನ್ (Jacqueline Fernandez) ಅವರು ದುಬಾರಿ ಗಿಫ್ಟ್ ಪಡೆಯುತ್ತಿದ್ದ ವಿಚಾರವೂ ರಿವೀಲ್ ಆಗಿದೆ. ಈ ಕಾರಣದಿಂದ ಈ ಪ್ರಕರಣದಲ್ಲಿ ಜಾಕ್ವೆಲಿನ್​ ಅವರನ್ನು ಆರೋಪಿ ಎಂದು ಈಗಾಗಲೇ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ನೋರಾ ಫತೇಹಿ ಅವರಿಗೆ ಈ ವಂಚನೆ ಕೇಸ್​ನಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಜೋರಾಗಿದೆ.

ಇತ್ತೀಚೆಗೆ ನಟಿ ನೋರಾ ಅವರನ್ನು ದೆಹಲಿ ಪೊಲೀಸರು ಕರೆದು ವಿಚಾರಣೆ ಮಾಡಿದ್ದಾರೆ. ನೋರಾ ಅವರು ವಿಚಾರಣೆಗೆ ತೆರಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋರಾ ಜತೆಗೆ ಪಿಂಕಿ ಇರಾನಿ ಕೂಡ ಇದ್ದರು. ಚಂದ್ರಶೇಖರ್​​ ಅವರನ್ನು ನೋರಾಗೆ ಪರಿಚಯ ಮಾಡಿಸಿದ್ದು ಇದೇ ಪಿಂಕಿ ಎಂಬ ವಿಚಾರ ಈ ಮೊದಲೇ ರಿವೀಲ್ ಆಗಿದೆ. ಆರಂಭದಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿದ್ದು, ಆ ಬಳಿಕ ಒಟ್ಟಾಗಿ ಕೂರಿಸಿ ಪ್ರಶ್ನೆ ಕೇಳಲಾಗಿದೆ.

ಈ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ನೋರಾ ವಿಚಾರಣೆಗೆ ಹಾಜರಾಗಿದ್ದರು. ಕೆಲ ಗಂಟೆಗಳ ಕಾಲ ವಿಚಾರಣೆ ಮಾಡಲಾಗಿತ್ತು. ಅದಾದ ಕೆಲವೇ ವಾರಗಳ ಬಳಿಕ ಅವರು ಮತ್ತೆ ವಿಚಾರಣೆಗೆ ಹಾಜರಿ ಹಾಕಿದ್ದಾರೆ. ಕೆಲ ಪ್ರಮುಖ ವಿಚಾರಗಳು ಬೆಳಕಿಗೆ ಬಂದ ಕಾರಣ ನೋರಾ ಅವರನ್ನು ಪ್ರಶ್ನೆ ಮಾಡಲಾಗಿದೆ.

ಆರಂಭದಲ್ಲಿ ಜಾಕ್ವೆಲಿನ್ ಮೇಲೆ ತೀವ್ರ ಅನುಮಾನ ಮೂಡಿತ್ತು. ಸುಕೇಶ್ ಹಾಗೂ ಜಾಕ್ವೆಲಿನ್ ಮಧ್ಯೆ ಕನೆಕ್ಷನ್ ಇದ್ದ ವಿಚಾರ ತನಿಖೆಯಿಂದ ಖಚಿತವಾಗಿತ್ತು. ಈ ಕಾರಣದಿಂದ ಚಾರ್ಜ್​​ಶೀಟ್​ನಲ್ಲಿ ಅವರ ಹೆಸರನ್ನು ಆರೋಪಿ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಇದಾದ ಬೆನ್ನಲ್ಲೇ ನೋರಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅವರ ತಪ್ಪು ಇದರಲ್ಲಿ ಕಂಡು ಬಂದಲ್ಲಿ ನೋರಾ ಅವರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: ನೀಲಿ ಡ್ರೆಸ್​ ಧರಿಸಿ ಮಿಂಚಿದ ನೋರಾ ಫತೇಹಿ; ಐಟಂ ಸಾಂಗ್​ ಸುಂದರಿಯ ಫೋಟೋ ವೈರಲ್​

ನೋರಾ ಫತೇಹಿ ಅವರು ಐಟಂ ಸಾಂಗ್​ಗಳ ಮೂಲಕವೇ ಹೆಚ್ಚು ಫೇಮಸ್​ ಆಗಿದ್ದಾರೆ. ಅವರ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿವೆ. ನಟನೆ, ಡ್ಯಾನ್ಸ್​ ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ಜಡ್ಜ್​ ಆಗಿಯೂ ಅವರು ಕೆಲಸ ಮಾಡುತ್ತಾರೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್