Rashmika Mandanna: ರಶ್ಮಿಕಾ ಮಂದಣ್ಣಗೆ ಸಿಕ್ತು ಮತ್ತೊಂದು ಗೆಲುವು; ಮೊದಲ ವಾರ ‘ಸೀತಾ ರಾಮಂ’ ಭರ್ಜರಿ ಕಲೆಕ್ಷನ್​

Sita Ramam Box Office Collection: ‘ಸೀತಾ ರಾಮಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ದುಲ್ಕರ್​ ಸಲ್ಮಾನ್​, ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಚಿತ್ರ ಹೊಂದಿದೆ.

Rashmika Mandanna: ರಶ್ಮಿಕಾ ಮಂದಣ್ಣಗೆ ಸಿಕ್ತು ಮತ್ತೊಂದು ಗೆಲುವು; ಮೊದಲ ವಾರ ‘ಸೀತಾ ರಾಮಂ’ ಭರ್ಜರಿ ಕಲೆಕ್ಷನ್​
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on:Aug 09, 2022 | 12:02 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಅವರು ನಟಿಸಿದ ಎಲ್ಲ ಸಿನಿಮಾಗಳೂ ಸೂಪರ್​ ಹಿಟ್​ ಆಗುತ್ತಿವೆ. ಅದೇ ಕಾರಣಕ್ಕೋ ಏನೋ ಅವರು ಅನೇಕರ ಪಾಲಿಗೆ ಲಕ್ಕಿ ಹೀರೋಯಿನ್​ ಆಗಿದ್ದಾರೆ. ಹಲವು ಭಾಷೆಯ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಅನೇಕ ಸ್ಟಾರ್​ ಹೀರೋಗಳ ಜೊತೆ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ (Sita Ramam) ಸಿನಿಮಾ ಕೂಡ ಗೆಲುವಿನ ನಗು ಬೀರಿದೆ. ಫಸ್ಟ್​ ಲುಕ್​ ಮತ್ತು ಟ್ರೇಲರ್​ ಮೂಲಕ ಭಾರಿ ಕೌತುಕ ಮೂಡಿಸಿದ ಈ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ (Sita Ramam Box Office Collection) ಆಗಿದೆ. ಮೊದಲ ಮೂರು ದಿನಕ್ಕೆ 25 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಈ ಚಿತ್ರ ಮನ್ನುಗ್ಗುತ್ತಿದೆ. ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

‘ಸೀತಾ ರಾಮಂ’ ಸಿನಿಮಾ ಆಗಸ್ಟ್​ 5ರಂದು ಬಿಡುಗಡೆ ಆಯಿತು. ಮೊದಲ ದಿನ ಮತ್ತು ವೀಕೆಂಡ್​ನಲ್ಲಿ ಈ ಚಿತ್ರವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಸೋಮವಾರ (ಆಗಸ್ಟ್​ 8) ಕೂಡ ಉತ್ತಮ ಕಲೆಕ್ಷನ್​ ಆಗಿದೆ. ಕೆಲವು ಕಡೆಗಳಲ್ಲಿ ಶೋ ಹೆಚ್ಚಿಸಲು ಬೇಡಿಕೆ ಬಂದಿದೆ. ಈ ಎಲ್ಲ ಕಾರಣಗಳಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ.

ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ದುಲ್ಕರ್​ ಸಲ್ಮಾನ್​, ಮೃಣಾಲ್​ ಠಾಕೂರ್​ ಕೂಡ ನಟಿಸಿದ್ದಾರೆ. ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಚಿತ್ರ ಹೊಂದಿದೆ. ಮುಸ್ಲಿಂ ಹುಡುಗಿಯ ಪಾತ್ರವನ್ನು ರಶ್ಮಿಕಾ ಮಂದಣ್ಣ ನಿಭಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಲೆಕ್ಷನ್​ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಕನ್ನಡದ ‘ಕಿರಿಕ್​ ಪಾರ್ಟಿ’ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ವರೆಗೆ ಸಾಗಿ ಬಂದಿದ್ದಾರೆ. ಅಲ್ಲಿನ ಸ್ಟಾರ್​ ಹೀರೋಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ಅಮಿತಾಭ್​ ಬಚ್ಚನ್​, ಸಿದ್ದಾರ್ಥ್​ ಮಲ್ಹೋತ್ರಾ, ರಣಬೀರ್​ ಕಪೂರ್​ ಮುಂತಾದ ನಟರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ದಕ್ಷಿಣದಲ್ಲಿ ಅಲ್ಲು ಅರ್ಜುನ್​, ಮಹೇಶ್​ ಬಾಬು, ದಳಪತಿ ವಿಜಯ್​ ಅವರಂತಹ ಸ್ಟಾರ್​ ನಟರ ಜೊತೆ ತೆರೆಹಂಚಿಕೊಂಡಿರುವುದು ಅವರ ಹೆಚ್ಚುಗಾರಿಕೆ. ಅವರು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ.

Published On - 12:02 pm, Tue, 9 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್