AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಂ ನಟನೆ ಟೀಕೆ ಮಾಡಿದ ರಾಣಾ ದಗ್ಗುಬಾಟಿ; ಹೇಳಿಕೆ ವೈರಲ್ ಆದ ಬಳಿಕ ಕ್ಷಮೆ ಕೇಳಿದ ಹೀರೋ

ದುಲ್ಕರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ರಾಣಾ ಭಾಗಿ ಆಗಿದ್ದರು. ಈ ವೇಳೆ ಅವರು 2019ರಲ್ಲಿ ರಿಲೀಸ್ ಆದ ‘ದಿ ಜೋಯಾ ಫ್ಯಾಕ್ಟರ್’ ಚಿತ್ರದ ಘಟನೆ ನೆನಪಿಸಿಕೊಂಡಿದ್ದರು. ಆದರೆ, ಎಲ್ಲಿಯೂ ಅವರು ಸೋನಂ ಹೆಸರನ್ನು ಹೇಳಿರಲಿಲ್ಲ.

ಸೋನಂ ನಟನೆ ಟೀಕೆ ಮಾಡಿದ ರಾಣಾ ದಗ್ಗುಬಾಟಿ; ಹೇಳಿಕೆ ವೈರಲ್ ಆದ ಬಳಿಕ ಕ್ಷಮೆ ಕೇಳಿದ ಹೀರೋ
ರಾಣಾ-ಸೋನಂ
ರಾಜೇಶ್ ದುಗ್ಗುಮನೆ
|

Updated on:Aug 15, 2023 | 3:17 PM

Share

ಸೆಲೆಬ್ರಿಟಿಗಳು ಯಾವುದೇ ವಿಚಾರದ ಬಗ್ಗೆ ಮಾತನಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಅವರ ಮಾತನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಈಗ ನಟ ರಾಣಾ ದಗ್ಗುಬಾಟಿ (Rana Daggubati) ಅವರಿಗೂ ಹಾಗೆಯೇ ಆಗಿದೆ. ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salman) ಅವರನ್ನು ಹೊಗಳುವ ಭರದಲ್ಲಿ ಅವರು ನಟಿ ಸೋನಂ ಕಪೂರ್​ನ ತೆಗಳಿದ್ದರು. ಸೋನಂ ಸೆಟ್​ನಲ್ಲಿ ಹೇಗೆ ಇರುತ್ತಿದ್ದರು ಎಂಬುದನ್ನು ರಾಣಾ ವಿವರಿಸಿದ್ದರು. ಈಗ ಈ ಮಾತಿಗೆ ಅವರು ಕ್ಷಮೆ ಕೇಳಿದ್ದಾರೆ.

ರಾಣಾ ಹೇಳಿದ್ದೇನು?

ದುಲ್ಕರ್ ಸಲ್ಮಾನ್ ನಟನೆಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ರಾಣಾ ಭಾಗಿ ಆಗಿದ್ದರು. ಈ ವೇಳೆ ಅವರು 2019ರಲ್ಲಿ ರಿಲೀಸ್ ಆದ ‘ದಿ ಜೋಯಾ ಫ್ಯಾಕ್ಟರ್’ ಚಿತ್ರದ ಘಟನೆ ನೆನಪಿಸಿಕೊಂಡಿದ್ದರು. ಆದರೆ, ಎಲ್ಲಿಯೂ ಅವರು ಸೋನಂ ಹೆಸರನ್ನು ಹೇಳಿರಲಿಲ್ಲ. ‘ದುಲ್ಕರ್ ಸಲ್ಮಾನ್ ಆ್ಯಕ್ಷನ್ ಸಿನಿಮಾ ಮಾಡುತ್ತಾರೆ ಅನ್ನೋದು ನನಗೆ ಎಗ್ಸೈಟಿಂಗ್ ಅನಿಸುತ್ತಿದೆ. ನಟನಾ ಶಾಲೆಯಲ್ಲಿ ಅವರು ನನ್ನ ಜೂನಿಯರ್. ಅವರು ಒಂದು ಹಿಂದಿ ಸಿನಿಮಾ ಮಾಡುತ್ತಿದ್ದರು. ಅದರ ಹೆಸರನ್ನು ಹೇಳುವುದಿಲ್ಲ. ನಿರ್ಮಾಪಕ ನನ್ನ ಗೆಳೆಯ. ಹೀಗಾಗಿ ಒಮ್ಮೆ ಶೂಟಿಂಗ್ ಸೆಟ್​ಗೆ ಹೊಗಿದ್ದೆ’ ಎಂದು ಹಳೆಯ ಘಟನೆ ಬಗ್ಗೆ ಮಾತನಾಡಿದ್ದರು ರಾಣಾ.

‘ದೊಡ್ಡ ಹಿಂದಿ ಹೀರೋಯಿನ್ ಆ ಸಿನಿಮಾದಲ್ಲಿ ನಟಿಸಿದ್ದರು. ನಾನು ಹೋಗುವಾಗ ಅವರು ಮೂರನೇ ಟೇಕ್ ಮಾಡುತ್ತಿದ್ದರು ಅನಿಸುತ್ತಿದೆ. ಶೂಟಿಂಗ್ ನಡೆಯುವಾಗ ಲಂಡನ್​ನಲ್ಲಿರುವ ಗಂಡನ ಜೊತೆ ಮಾತನಾಡುತ್ತಿದ್ದರು. ಹಾಗಂತ ಅದು ಮುಖ್ಯವಾದ ವಿಚಾರ ಆಗಿರಲಿಲ್ಲ. ಯಾವುದೋ ಶಾಪಿಂಗ್ ವಿಚಾರವಾಗಿ ಮಾತನಾಡುತ್ತಿದ್ದರು. ದುಲ್ಕರ್ ಮಾತ್ರ ಒಂದು ಕಡೆಯಲ್ಲಿ ನಿಂತಿದ್ದರು. ಕ್ಯಾಮೆರಾ ಎದುರಿಸುವಾಗ ಡೈಲಾಗ್ ಮರೆಯುತ್ತಿದ್ದರು, ಫೋನ್​ನಲ್ಲಿ ಮಾತನಾಡುತ್ತಿದ್ದರು. ಆದರೆ, ಆ ವ್ಯಕ್ತಿ ಮಾತ್ರ ಹಾಗೆಯೇ ನಿಂತಿದ್ದರು. ಅವರು ಮಾತ್ರ ಪ್ಯಾಕ್​ಅಪ್ ಅನ್ನೋವರೆಗೂ ಹಾಗೆಯೇ ಇದ್ದರು’ ಎಂದು ರಾಣಾ ಹೇಳಿದ್ದರು. ಇದು ಸೋನಂ ಬಗ್ಗೆ ಹೇಳಿದ ಮಾತು ಎಂದು ಎಲ್ಲರಿಗೂ ಗೊತ್ತಾಗಿತ್ತು.

ರಾಣಾ ಮಾಡಿರೋ ಟ್ವೀಟ್​

ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ ಮೇಲೆ ಹಿರಿಯ ನಿರ್ದೇಶಕ ಗರಂ: ಕಾರಣ? ರಾಣಾ ಹೇಳಿದ ಡೈಲಾಗ್ ಇಟ್ಟುಕೊಂಡು ಸೋನಂ ಅವರನ್ನು ಟೀಕೆ ಮಾಡಲಾಗಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಕಾಮೆಂಟ್‌ಗಳಿಂದಾಗಿ ಸೋನಂ ಟೀಕೆಗೆ ಒಳಗಾಗಿದ್ದಾರೆ. ನಾನು ಹೇಳಿದ್ದು ಸತ್ಯವಲ್ಲ. ಅದನ್ನು ನಾನು ಗಂಭೀರವಾಗಿ ಹೇಳಿರಲಿಲ್ಲ. ನಾವು ಆಗಾಗ ತಮಾಷೆ ಮಾಡುತ್ತಾ ಇರುತ್ತೇವೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋನಂ ಮತ್ತು ದುಲ್ಕರ್‌ಗೆ ನಾನು ಕ್ಷಮೆ ಕೇಳುತ್ತೇನೆ. ಅವರಿಬ್ಬರನ್ನೂ ನಾನು ಬಹಳವಾಗಿ ಗೌರವಿಸುತ್ತೇನೆ. ಈ ಸ್ಪಷ್ಟೀಕರಣ ಎಲ್ಲಾ ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ರಾಣಾ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:51 pm, Tue, 15 August 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?