AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ‘ಪ್ರಾಜೆಕ್ಟ್​ ಕೆ’ ಸಲುವಾಗಿ ಅಮೆರಿಕಕ್ಕೆ ತೆರಳಿದ ಪ್ರಭಾಸ್​, ರಾಣಾ ದಗ್ಗುಬಾಟಿ; ಈ ಫೋಟೋದಿಂದ ಹೆಚ್ಚಿತು ಕೌತುಕ

Rana Daggubati: ಪ್ರಭಾಸ್​ ಅಭಿನಯದ ‘ಪ್ರಾಜೆಕ್ಟ್​ ಕೆ’ ಸಿನಿಮಾಗೆ ‘ವೈಜಯಂತಿ ಮೂವೀಸ್​’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆದ್ದರಿಂದ ನಿರೀಕ್ಷೆ ಮೂಡಿದೆ.

Prabhas: ‘ಪ್ರಾಜೆಕ್ಟ್​ ಕೆ’ ಸಲುವಾಗಿ ಅಮೆರಿಕಕ್ಕೆ ತೆರಳಿದ ಪ್ರಭಾಸ್​, ರಾಣಾ ದಗ್ಗುಬಾಟಿ; ಈ ಫೋಟೋದಿಂದ ಹೆಚ್ಚಿತು ಕೌತುಕ
ಪ್ರಭಾಸ್​, ರಾಣಾ ದಗ್ಗುಬಾಟಿ
ಮದನ್​ ಕುಮಾರ್​
|

Updated on: Jul 18, 2023 | 7:40 PM

Share

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅವರು ‘ಪ್ರಾಜೆಕ್ಟ್​ ಕೆ’ (Project K) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಈವರೆಗೂ ಪ್ರಭಾಸ್​ ನಟಿಸಿದ ಎಲ್ಲ ಸಿನಿಮಾಗಳಿಗಿಂತಲೂ ‘ಪ್ರಾಜೆಕ್ಟ್​ ಕೆ’ ಭಿನ್ನವಾಗಿರಲಿದೆ ಎಂಬ ಭರವಸೆ ಮೂಡಿದೆ. ಹಲವು ರೀತಿಯಲ್ಲಿ ಈ ಸಿನಿಮಾವನ್ನು ಪ್ರಮೋಟ್​ ಮಾಡಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗುತ್ತಿದೆ. ಈಗ ಪ್ರಭಾಸ್​ (Prabhas) ಜೊತೆಗೆ ರಾಣಾ ದಗ್ಗುಬಾಟಿ (Rana Daggubati) ಕೂಡ ಸಾಥ್​ ನೀಡಿದ್ದಾರೆ. ಇವರಿಬ್ಬರೂ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ.

ಅಮೆರಿಕದ ಸ್ಯಾನ್​ ಡಿಯಾಗೋ ನಗರಕ್ಕೆ ಪ್ರಭಾಸ್​ ಮತ್ತು ರಾಣಾ ದಗ್ಗುಬಾಟಿ ತೆರಳಿದ್ದಾರೆ. ಅಲ್ಲಿ ಅವರು ‘ಪ್ರೊಜೆಕ್ಟ್​ ಕೆ’ ಸಿನಿಮಾದ ಟೈಟಲ್​ ಇರುವ ಬಟ್ಟೆ ಧರಿಸಿ ನಿಂತಿದ್ದಾರೆ. ಆ ಫೋಟೋವನ್ನು ಚಿತ್ರತಂಡದವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾನ್​ ಡಿಯಾಗೋದಲ್ಲಿ ನಡೆಯಲಿರುವ ‘ಕಾಮಿಕ್​ ಕಾನ್​’ ಉತ್ಸವದಲ್ಲಿ ‘ಪ್ರಾಜೆಕ್ಟ್​ ಕೆ’ ಸಿನಿಮಾವನ್ನು ಪ್ರಚಾರ ಮಾಡಲಾಗುವುದು. ಈ ರೀತಿ ಮಾಡುತ್ತಿರುವ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ‘ಪ್ರಾಜೆಕ್ಟ್​ ಕೆ’ ಪಾತ್ರವಾಗುತ್ತಿದೆ.

‘ಪ್ರಾಜೆಕ್ಟ್​ ಕೆ’ ಸಿನಿಮಾಗೆ ‘ವೈಜಯಂತಿ ಮೂವೀಸ್​’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆದ್ದರಿಂದ ನಿರೀಕ್ಷೆ ಮೂಡಿದೆ. ಪ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರ ಫಸ್ಟ್​ ಲುಕ್​ ಬಿಡುಗಡೆ ಆಯಿತು. ನಾಗ್​ ಅಶ್ವಿನ್​ ಅವರ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಕಾರ್​ ರ‍್ಯಾಲಿ ನಡೆಸಲಾಗಿದೆ. ‘ಪ್ರೊಜೆಕ್ಟ್​ ಕೆ’ ಶೀರ್ಷಿಕೆ ಅಚ್ಚಾಗಿರುವ ಟಿ-ಶರ್ಟ್​ಗಳನ್ನು ಧರಿಸಿ ಅಭಿಮಾನಿಗಳು ವಿವಿಧ ದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: Project K Budget: ‘ಪ್ರಾಜೆಕ್ಟ್​ ಕೆ’ ಕಲಾವಿದರ ಒಟ್ಟು ಸಂಭಾವನೆ 200 ಕೋಟಿ ರೂ? ಇದರಲ್ಲಿ ಪ್ರಭಾಸ್​, ಕಮಲ್​ ಹಾಸನ್​ ಪಾಲು ಎಷ್ಟು?

‘ಬಾಹುಬಲಿ 2’ ಬಳಿಕ ಪ್ರಭಾಸ್​ ಅವರಿಗೆ ಸರಿಯಾದ ಗೆಲುವು ಸಿಕ್ಕಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಆದಿಪುರುಷ್​’ ಸಿನಿಮಾ ಹೀನಾಯವಾಗಿ ಸೋತಿತು. ಈಗ ಅಭಿಮಾನಿಗಳು ‘ಪ್ರಾಜೆಕ್ಟ್​ ಕೆ’ ಮತ್ತು ‘ಸಲಾರ್​’ ಸಿನಿಮಾಗಳ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ‘ಪ್ರಾಜೆಕ್ಟ್​ ಕೆ’ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆಯಾದರೂ ಈಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ