AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್​ಗೆ ಹೋಗಿದ್ದು ತರವಲ್ಲ, ಸಂಧಾನ ಸಮಿತಿ ಮುಂದೆ ಬನ್ನಿ, ನೇರವಾಗಿ ಚರ್ಚಿಸಿ: ಸುದೀಪ್​ಗೆ ಸಾರಾ ಗೋವಿಂದು ಮನವಿ

Sa Ra Govindu: ನಟ ಸುದೀಪ್ ಅವರು ವಾಣಿಜ್ಯ ಮಂಡಳಿಗೆ ಬಂದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮನವಿ ಮಾಡಿದ್ದಾರೆ.

ಕೋರ್ಟ್​ಗೆ ಹೋಗಿದ್ದು ತರವಲ್ಲ, ಸಂಧಾನ ಸಮಿತಿ ಮುಂದೆ ಬನ್ನಿ, ನೇರವಾಗಿ ಚರ್ಚಿಸಿ: ಸುದೀಪ್​ಗೆ ಸಾರಾ ಗೋವಿಂದು ಮನವಿ
ಸಾರಾ ಗೋವಿಂದು-ಸುದೀಪ್
ಮಂಜುನಾಥ ಸಿ.
|

Updated on: Jul 18, 2023 | 6:20 PM

Share

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದವನ್ನು ಬಗೆಹರಿಸಲು ಫಿಲಂ ಚೇಂಬರ್ ಯತ್ನಿಸುತ್ತಿದೆ. ಸ್ವತಃ ನಿರ್ಮಾಪಕ ಕುಮಾರ್, ಫಿಲಂ ಚೇಂಬರ್ ಎದುರು ಧರಣಿ ಕೂತಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು (Sa Ra Govindu) ಮಾತನಾಡಿದ್ದು, ಸುದೀಪ್ ಅವರು ಫಿಲಂ ಚೇಂಬರ್​ನ ಸಂಧಾನ ಸಮಿತಿ ಮುಂದೆ ಹಾಜರಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

”ಸುದೀಪ್ ಅವರಿಂದ ಹಣ ಕೊಡಿಸಿ ಎಂದು ನಿರ್ಮಾಪಕ ಎಂಎನ್ ಕುಮಾರ್ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಅವರು ಕೇಳಿದ ಕೂಡಲೇ ಹಣ ಕೊಡಿಸಿಬಿಡಲು ಆಗುವುದಿಲ್ಲ. ಸುದೀಪ್ ಸಹ ಸಣ್ಣವರಲ್ಲ. ಚಿತ್ರರಂಗದಲ್ಲಿ ವರ್ಷಗಳಿಂದಲೂ ಇರುವ ವ್ಯಕ್ತಿ. ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರೆ ಕೇವಲ 10-15 ನಿಮಿಷಗಳಲ್ಲಿ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಈ ಹಿಂದೆಯೂ ಈ ರೀತಿಯ ಹಲವಾರು ಸಮಸ್ಯೆಗಳು ವಾಣಿಜ್ಯ ಮಂಡಳಿಯಲ್ಲಿ ಬಗೆಹರಿದಿವೆ” ಎಂದಿದ್ದಾರೆ.

”ಕಾಲ ಇನ್ನೂ ಮಿಂಚಿಲ್ಲ. ಸುದೀಪ್, ನಮ್ಮವರು, ಕನ್ನಡದ ಕಲಾವಿದರು, ಸುದೀಪ್ ನಮ್ಮ ಹೆಮ್ಮೆ. ಅವರು ಬಂದು ವಾಣಿಜ್ಯ ಮಂಡಳಿಯಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರ ಮೇಲೆ ಯಾರೂ ದೂಷಣೆ ಮಾಡುತ್ತಿಲ್ಲ. ಸುದೀಪ್ ಅವರು ಮಂಡಳಿಗೆ ಬರಬೇಕು, ಕುಮಾರ್ ಹೇಳುತ್ತಿರುವುದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ಸುದೀಪ್ ಅವರೇ ಸಾಬೀತು ಪಡಿಸಬಹುದಾಗಿತ್ತು. ಕುಮಾರ್ ಸುಳ್ಳು ಹೇಳುತ್ತಿದ್ದರೆ ನೀವೇ ಅದನ್ನು ಸಾಬೀತು ಮಾಡಿ, ನಿಮಗೆ ಅವಕಾಶ ಇದೆ. ಒಬ್ಬ ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ” ಎಂದಿದ್ದಾರೆ ಸಾರಾ ಗೋವಿಂದು.

ಇದನ್ನೂ ಓದಿ: ಸುದೀಪ್ ನನ್ನ ಮಗನಂತೆ, ನನ್ನ ಮಗನನ್ನು ನಾನು ಬಿಟ್ಟುಕೊಡಲ್ಲ: ರವಿಚಂದ್ರನ್

”ಸುದೀಪ್ ಅವರಿಂದ ಸಾಕಷ್ಟು ಜನರಿಗೆ ಸಹಾಯ ಆಗಿದೆ. ಅವರೇನು ಮಹಾನ್ ತಪ್ಪು ಮಾಡಿಲ್ಲ, ಅವರು ಕನ್ನಡ ಚಿತ್ರರಂಗದವರು. ಕುಮಾರ್ ಹೇಳುತ್ತಿದ್ದಾರೆ, ಸುದೀಪ್ ಎದುರಿಗೆ ನಾನು ಸಾಬೀತು ಪಡಿಸುತ್ತೇನೆ ಎಂದು. ಸುದೀಪ್ ಸಹ ಹಾಗೆಯೇ ಬಂದು ಅವರ ವಾದ ಮಂಡಿಸಲಿ, ಯಾರದ್ದು ಸರಿಯೋ ತೀರ್ಮಾನ ಆಗಿಬಿಡಲಿ” ಎಂದಿದ್ದಾರೆ ಸಾರಾ ಗೋವಿಂದು.

ನಿರ್ಮಾಪಕ ಎಂಎನ್ ಕುಮಾರ್ ಅವರು ಸುದೀಪ್ ವಿರುದ್ಧ ಆರೋಪ ಮಾಡಿದ್ದು, ಸುದೀಪ್ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ವರ್ಷಗಳಾದರು ಸಿನಿಮಾ ಮಾಡಿಕೊಟ್ಟಿಲ್ಲ, ಡೇಟ್ಸ್ ಸಹ ಕೊಡುತ್ತಿಲ್ಲ, ಹಣವನ್ನೂ ವಾಪಸ್ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕುಮಾರ್ ಜೊತೆಗೆ ಸುರೇಶ್ ಆ ನಂತರ ರೆಹಮಾನ್ ಸಹ ಸುದೀಪ್ ವಿರುದ್ಧ ಇದೇ ಮಾದರಿಯ ಆರೋಪಗಳನ್ನು ಮಾಡಿದ್ದರು. ಇದೀಗ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಿರ್ಮಾಪಕರ ವಿರುದ್ಧ ಹತ್ತು ಕೋಟಿ ಮೌಲ್ಯದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​