ಸುದೀಪ್ ನನ್ನ ಮಗನಂತೆ, ನನ್ನ ಮಗನನ್ನು ನಾನು ಬಿಟ್ಟುಕೊಡಲ್ಲ: ರವಿಚಂದ್ರನ್

ಸುದೀಪ್ ಹಾಗೂ ನಿರ್ಮಾಪಕ ಎಂಎನ್​ ಕುಮಾರ್ ನಡುವಿನ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿ ರವಿಚಂದ್ರನ್, 'ನನ್ನ ಮಗನ ಮೇಲೆ ಆರೋಪ ಮಾಡಲಾಗಿದೆ, ನಾನು ನನ್ನ ಮಗನನ್ನು ಬಿಟ್ಟುಕೊಡಲ್ಲ' ಎಂದಿದ್ದಾರೆ.

ಸುದೀಪ್ ನನ್ನ ಮಗನಂತೆ, ನನ್ನ ಮಗನನ್ನು ನಾನು ಬಿಟ್ಟುಕೊಡಲ್ಲ: ರವಿಚಂದ್ರನ್
ಸುದೀಪ್-ರವಿಚಂದ್ರನ್
Follow us
| Updated By: ಮಂಜುನಾಥ ಸಿ.

Updated on:Jul 18, 2023 | 4:25 PM

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದ ಬಗೆಹರಿಯುವಂತೆ ತೋರುತ್ತಿಲ್ಲ. ಕುಮಾರ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುದೀಪ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಸುದೀಪ್, ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬೆನ್ನಲ್ಲೆ, ಕುಮಾರ್ ಫಿಲಂ ಚೇಂಬರ್ ಎದುರು ಧರಣಿ ಆರಂಭಿಸಿದ್ದು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ ಸಂಧಾನ ನಡೆಸಬಲ್ಲ ಗಟ್ಟಿ ವ್ಯಕ್ತಿತ್ವದ ನಟರು ಯಾಕೋ ಅಷ್ಟಾಗಿ ಆಸಕ್ತಿಯನ್ನು ತೋರುತ್ತಿಲ್ಲ. ಇದೀಗ ಈ ವಿಷಯವಾಗಿ ನಟ ರವಿಚಂದ್ರನ್ (Ravichandran) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶಿವರಾಜ್ ಕುಮಾರ್ (Shiva Rajkumar) ಅವರಗೆ ಜವಾಬ್ದಾರಿ ವರ್ಗಾಯಿಸಿದ್ದಾರೆ.

”ಪರಿಸ್ಥಿತಿ ಸರಿ ಇಲ್ಲ ಅಂದರೆ ಮನಸ್ಥಿತಿ ಸರಿ ಇರಲ್ಲ, ಸುದೀಪ್ ಗೆ ಬಹಳ ಬೇಸರ ಆಗಿದೆ, ಎಷ್ಟು ಬೇಸರ ಆಗಿದೆ ಅಂತ ನನಗೆ ಗೊತ್ತಿಲ್ಲ, ಎಲ್ಲರು ಪರಿಚಯದವರು ನಮ್ಮ ಮನೆಯವರೇ, ಎಲ್ಲ ಒಂದು ಸೆಕೆಂಡ್ ಕೂಲ್ ಆಗ್ಬೇಕು, ನಾನು ಎಲ್ಲವನ್ನು ಪರಿಸೀಲಿಸುತ್ತೀನಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತೀನಿ, ಆಮೇಲೆ ಸುದೀಪ್​ ಜೊತೆ ಈ ವಿಷಯದಲ್ಲಿ ಮಾತನಾಡಬೇಕಾ ಬೇಡವಾ ಎಂಬ ಬಗ್ಗೆ ತೀರ್ಮಾನ ಮಾಡುತ್ತೀನಿ” ಎಂದಿದ್ದಾರೆ ರವಿಚಂದ್ರನ್.

”ನನ್ನ ಮಗನ ಮೇಲೆ ಆರೋಪ ಮಾಡಿದ್ದಾರೆ, ಹೀಗಾಗಿ ನನ್ನ ಮಗನನ್ನ ಬಿಟ್ಟು ಕೋಡೋದಿಲ್ಲ, ಸುದೀಪ್ ಕೋರ್ಟ್ ಗೆ ಹೋಗಿದ್ದಾರೆ ಎಂದರೆ ಅವರ ಮನಸ್ಸಿಗೆ ಎಷ್ಟು ನೋವಾಗಿದೆ ಎಂದು ಊಹಿಸಬಹುದು. ಮೊದಲು ನಮ್ಮ ಇಂಡಸ್ಟ್ರಿ ವಾತಾವರಣ ಸರಿಯಾಗಬೇಕು, ನನ್ನ ಮನೆಗೆ ಬರದೆ ಇರುವ ವಿಚಾರಗಳೇ ಇಲ್ಲ, ಮೊದಲು ವಾತಾವರಣ ತಿಳಿ ಮಾಡೋಣ. ಎರಡು ಕಡೆ ಬೇಕಾದವರೇ ಇರುತ್ತಾರೆ. ತೊಂದರೆ ಏನು ಅಂತ ಗೊತ್ತಾದ ಮೇಲೆ ಎಲ್ಲರೂ ಬರ್ತಾರೆ, ನಾನಂತು ಲೀಡರ್ ಆಗುವುದಿಲ್ಲ. ನನ್ನದೇ ಆದ ಕ್ಯಾರೆಕ್ಟರ್ ಹಾಗೂ ಕೆಲಸಗಳು ಇದೆ, ನಾನು ಲೀಡರ್ ಆದರೆ, ಎಲ್ಲರಿಗೂ ನಾನು ವಿಲನ್ ಆಗ್ತೀನಿ” ಎಂದಿದ್ದಾರೆ ರವಿಚಂದ್ರನ್.

ಇದನ್ನೂ ಓದಿ:ಬಾಯಿ ಇದೆ ಅಂತ ಏನೇನೋ ಮಾತಾಡಬಾರದು, ಎಲ್ಲವನ್ನೂ ನ್ಯಾಯಾಲಯ ನೋಡಿಕೊಳ್ಳಲಿದೆ: ಸುದೀಪ್

”ಅಸೋಸಿಯೇಷನ್ ಹೇಗೆ ನಡೆಯಬೇಕು ಎಂಬ ಬಗ್ಗೆ ನಿಯಮಗಳ ಪುಸ್ತಕ ಕೊಟ್ಟಿದ್ದೆ. ಅದನ್ನು ಯಾರು ತಿರುಗಿ ಸಹ ನೋಡಿಲ್ಲ. ಸುದೀಪ್ ಮತ್ತು ಕುಮಾರ್ 20 ವರ್ಷದಿಂದ ಪರಿಚಯ ಇಟ್ಟುಕೊಂಡವರು. ಅವರಿಬ್ಬರದ್ದು ಒಳ್ಳೆ ಗೆಳೆತನ, ಸಡನ್ ಆಗಿ ಬೆರಳು ತೋರಿಸಿದ್ದರಿಂದ ಸುದೀಪ್ ಗೆ ಬೇಜಾರಾಗಿದೆ, ಎರಡು ಕಡೆ ಸಹನೆ ಮೀರಿದೆ. ಹೀಗಾಗಿ ಈ ರೀತಿ ಆಗಿದೆ, ಧರಣಿ ಕುಳಿತವರು ಎದ್ದೇಳಬೇಕು ಆಮೇಲೆ ಏನು ಮಾಡಬೇಕು ಎಂದು ನಾನು ನಿರ್ಧಾರ ಮಾಡ್ತೀನಿ, ಕುಮಾರ್ ಅವರದ್ದು ತಪ್ಪಿದ್ದರೆ ಕರೆಸಿ ಮಾತಾಡ್ತೀನಿ, ಸುದೀಪ್ ಅವರದ್ದು ತಪ್ಪಾಗಿದ್ರೆ ನಾನೇ ಹೋಗಿ ಸುದೀಪ್ ಬಳಿ ಮಾತಾಡ್ತೀನಿ” ಎಂದಿದ್ದಾರೆ.

”ಈ ವಾತಾವರಣ ನನಗೆ ಇಷ್ಟ ಆಗಲ್ಲ, ಗಲಾಟೆ ಅಂದ್ರೆ ದೂರ ಹೋಗಿ ಬಿಡ್ತೀನಿ, ನಾನು ಬೇರೆಯವರ ಬಗ್ಗೆ ಏನು ಮಾತಾಡಲ್ಲ, ನನ್ನ ಲೈಫ್​ನ ನಾನು ನಡೆಸಿಕೊಂಡು ಹೋಗ್ತೀನಿ, ಶಿವಣ್ಣನೇ ಲೀಡರ್, ನಮಗೆಲ್ಲ ಮೊದಲು ರಾಜ್‍ಕುಮಾರ್ ಕುಟುಂಬವೇ ಮೊದಲು. ‌ರಾಜ್​ಕುಮಾರ್ ಮನೆ ನಮಗೆ ಹೆಡ್ ಆಫೀಸ್ ಇದ್ದ ಹಾಗೆ. ಅವರು ಎನ್ ಹೇಳಿದರೆ ಅದೇ ಅಂತಿಮ, ಶಿವಣ್ಣ ಈ ವಿಷಯಕ್ಕೆ ಬಂದರೆ ಅರ್ಧ ಸಮಸ್ಯೆ ಕ್ಲಿಯರ್ ಆಗುತ್ತೆ. ಮೊದಲು ಶಿವಣ್ಣನ ಬಳಿ ಹೋಗಿ ಅಂತ ಹೇಳಿದ್ದೇ ಆಮೇಲೆ ಇಲ್ಲಿ ಬನ್ನಿ ಅಂತ ಹೇಳಿದ್ದೇ ಈಗ ಅಲ್ಲಿಗೆ ಹೋಗ್ತಾರೆ” ಎಂದಿದ್ದಾರೆ ರವಿಚಂದ್ರನ್.

Published On - 4:20 pm, Tue, 18 July 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ