AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​; ಸುತ್ತುವರಿದ ಅಭಿಮಾನಿಗಳು

Jama Masjid: ಅಕ್ಷಯ್​ ಕುಮಾರ್​ ಅವರು ಜಾಮಾ ಮಸೀದಿ ಬಳಿ ಬಂದಾಗ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅವರ ಜೊತೆ ಬಾಡಿ ಗಾರ್ಡ್ಸ್​ ಕೂಡ ಇದ್ದರು. ಈ ವಿಡಿಯೋ ವೈರಲ್​ ಆಗಿದೆ.

Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​; ಸುತ್ತುವರಿದ ಅಭಿಮಾನಿಗಳು
ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: Jun 05, 2023 | 10:06 PM

Share

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ದೇಶದ ವಿವಿಧ ಲೊಕೇಷನ್​ಗಳಲ್ಲಿ ಅವರು ಶೂಟಿಂಗ್​ ಮಾಡುತ್ತಿದ್ದಾರೆ. ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುವಲ್ಲಿ ಅಕ್ಷಯ್​ ಕುಮಾರ್​ ಎತ್ತಿದ ಕೈ. ಅನಗತ್ಯವಾಗಿ ಅವರು ಬಿಡುವು ಪಡೆದುಕೊಳ್ಳುವುದಿಲ್ಲ. ಈಗ ಅವರು ದೆಹಲಿಯ ಜಾಮಾ ಮಸೀದಿ (Jama Masjid) ಬಳಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಸಡನ್​ ಆಗಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಜನರು (Akshay Kumar Fans) ಸುತ್ತುವರಿದಿದ್ದಾರೆ. ನೆರೆದಿದ್ದ ಎಲ್ಲ ಅಭಿಮಾನಿಗಳ ಕಡೆಗೆ ಅಕ್ಷಯ್​ ಕುಮಾರ್​ ಕೈ ಬೀಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಹೊಸ ಸಿನಿಮಾದ ಚಿತ್ರೀಕರಣದ ಸಲುವಾಗಿ ಅಕ್ಷಯ್​ ಕುಮಾರ್​ ಅವರು ಜಾಮಾ ಮಸೀದಿ ಬಳಿ ಬಂದಾಗ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅವರು ಕಾರು ಹತ್ತುವವರೆಗೂ ಬಾಡಿ ಗಾರ್ಡ್ಸ್​ ಜೊತೆಯಲ್ಲೇ ಇದ್ದರು. ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಎಷ್ಟೇ ಸಿನಿಮಾಗಳು ಸೋತರೂ ಕೂಡ ಅವರ ಬಗ್ಗೆ ಜನರಿಗೆ ಇರುವ ಕ್ರೇಜ್​ ಕಮ್ಮಿ ಆಗಿಲ್ಲ. ಅಷ್ಟರಮಟ್ಟಿಗೆ ಅವರು ಹವಾ ಕ್ರಿಯೇಟ್​ ಮಾಡಿದ್ದಾರೆ.

ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೂಡ ಅಕ್ಷಯ್​ ಕುಮಾರ್​ ಅವರು ತುಂಬ ಆ್ಯಕ್ಟೀವ್​ ಆಗಿರುತ್ತಾರೆ. ಪ್ರತಿದಿನ ಅವರು ವ್ಯಾಯಾಮ ತಪ್ಪಿಸುವುದಿಲ್ಲ. ಕ್ರೀಡೆ ಬಗ್ಗೆಯೂ ಅವರಿಗೆ ಸಖತ್​ ಆಸಕ್ತಿ ಇದೆ. ಇತ್ತೀಚೆಗೆ ಅವರು ಪೊಲೀಸರ ಜೊತೆ ವಾಲಿಬಾಲ್​ ಆಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆಗಿತ್ತು. ಶೂಟಿಂಗ್​ ಸಲುವಾಗಿ ಡೆಹರಾಡೂನ್​ಗೆ ತೆರಳಿದ್ದ ಅಕ್ಷಯ್​ ಕುಮಾರ್​ ಅವರು ಬಿಡುವಿನ ವೇಳೆ ವಾಲಿಬಾಲ್​ ಆಡಿದ್ದರು. ಅವರ ಪಂದ್ಯವನ್ನು ನೋಡಲು ಸ್ಟೇಡಿಯಂನಲ್ಲಿ ಜನರು ನೆರೆದಿದ್ದರು.

OMG 2: ಶೀಘ್ರದಲ್ಲೇ ರಿಲೀಸ್​ ಆಗಲಿದೆ ಅಕ್ಷಯ್​ ಕುಮಾರ್​ ನಟನೆಯ ‘ಓಹ್​ ಮೈ ಗಾಡ್​ 2’ ಸಿನಿಮಾ; ಒಟಿಟಿಯಲ್ಲೋ? ಚಿತ್ರಮಂದಿರವೋ?

ಅಕ್ಷಯ್​ ಕುಮಾರ್​ ಅವರು ಆಗಾಗ ಟ್ರೋಲ್​ ಆಗುತ್ತಾರೆ ಕೂಡ. ಚಿಕ್ಕ ಪುಟ್ಟ ಕಾರಣಕ್ಕೂ ಅವರನ್ನು ಟೀಕೆ ಮಾಡಲಾಗುತ್ತದೆ. ಇತ್ತೀಚೆಗೆ ಅವರು ದುಬಾರಿ ಬೆಲೆಯ ಬ್ಯಾಗ್​ ಧರಿಸಿದ್ದಕ್ಕೆ ಟ್ರೋಲ್​ ಆಗಿದ್ದರು. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅಕ್ಷಯ್​ ಕುಮಾರ್​ ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆ ವೇಳೆ ಅವರು ಧರಿಸಿದ್ದ ಬ್ಯಾಗ್​ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಆ ಬ್ಯಾಗ್​ ಬೆಲೆ 30 ಸಾವಿರ ರೂಪಾಯಿ. ಇಷ್ಟು ದುಬಾರಿ ಬ್ಯಾಗ್​ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ‘ನಿರ್ಮಾಪಕರಿಗೆ ನೂರಾರು ಕೋಟಿ ರೂಪಾಯಿ ನಷ್ಟ ಮಾಡುವ ಅಕ್ಷಯ್​ ಕುಮಾರ್​ ಈಗ ಶೋಕಿ ಜೀವನ ನಡೆಸುತ್ತಿದ್ದಾರೆ’ ಎಂದೆಲ್ಲ ಕಮೆಂಟ್​ ಮಾಡಲಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ