Kangana Ranaut: ಒಟ್ಟಾಗಿ ಡ್ಯಾನ್ಸ್ ಮಾಡಿದ ಕಂಗನಾ-ಸಲ್ಮಾನ್ ಖಾನ್; ಹಳೆಯ ವಿಡಿಯೋ ವೈರಲ್

ಸಲ್ಮಾನ್ ಖಾನ್ ಬಗ್ಗೆ ಅವರಿಗೆ ಮೆಚ್ಚುಗೆ ಮೂಡೋಕೆ ಕಾರಣವೂ ಇದೆ. ಕಂಗನಾ ರಣಾವತ್ ನಟನೆಯ ‘ಧಾಕಡ್’ ಚಿತ್ರಕ್ಕೆ ಸಲ್ಲು ಬೆಂಬಲ ನೀಡಿದ್ದರು.

Kangana Ranaut: ಒಟ್ಟಾಗಿ ಡ್ಯಾನ್ಸ್ ಮಾಡಿದ ಕಂಗನಾ-ಸಲ್ಮಾನ್ ಖಾನ್; ಹಳೆಯ ವಿಡಿಯೋ ವೈರಲ್
ಕಂಗನಾ-ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Jun 06, 2023 | 10:53 AM

ಕಂಗನಾ ರಣಾವತ್​ಗೆ (Kangana Ranaut) ಬಾಲಿವುಡ್​ನ ಬಹುತೇಕರನ್ನು ಕಂಡರೆ ಸಿಟ್ಟು. ಅವರು ಸದಾ ಒಬ್ಬಲ್ಲಾ ಒಬ್ಬರ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ, ಈಗ ಸಲ್ಮಾನ್ ಖಾನ್ ಮೇಲೆ ಅವರಿಗೆ ಇದ್ದ ಅಭಿಪ್ರಾಯ ಬದಲಾಗಿದೆ. ಅವರ ಮೇಲೆ ಒಳ್ಳೆಯ ಭಾವನೆ ಮೂಡಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ (Salman Khan) ಎದುರು ಕಂಗನಾ ಡ್ಯಾನ್ಸ್ ಮಾಡಿದ್ದಾರೆ. ಸ್ವತಃ ಕಂಗನಾ ರಣಾವತ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸಲ್ಮಾನ್ ಖಾನ್ ನಟನೆ ಜೊತೆಗೆ ನಿರೂಪಣೆಯಲ್ಲೂ ತೊಡಗಿಕೊಂಡಿದ್ದಾರೆ. ‘ದಸ್​ ಕಾ ದಮ್’ ಹೆಸರಿನ ಶೋನ ಸಲ್ಲು ನಡೆಸಿಕೊಡುತ್ತಿದ್ದರು. ಇದರಲ್ಲಿ ಕಂಗನಾ ಭಾಗಿ ಆಗಿದ್ದರು. ಮಾಧುರಿ ದೀಕ್ಷಿತ್ ಹಾಗೂ ಅನಿಲ್ ಕಪೂರ್ ಒಟ್ಟಾಗಿ ಡ್ಯಾನ್ಸ್ ಮಾಡಿದ ‘ದಕ್​ ದಕ್​ ಕರ್ನೇ ಲಗಾ..’ ಹಾಡಿಗೆ ವೇದಿಕೆ ಮೇಲೆ ಕಂಗನಾ ಹೆಜ್ಜೆ ಹಾಕಿದರು. ‘ಎಷ್ಟು ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಸಲ್ಲು ಕಂಗನಾಗೆ ಮೆಚ್ಚುಗೆ ಸೂಚಿಸಿದ್ದರು.

‘ಈ ವಿಡಿಯೋ ಶೇರ್ ಮಾಡಿಕೊಂಡಿರುವ ಕಂಗನಾ, ಸಲ್ಮಾನ್ ಖಾನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ವಿಡಿಯೋ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಅವರಿಗೆ ಮೆಚ್ಚುಗೆ ಮೂಡೋಕೆ ಕಾರಣವೂ ಇದೆ. ಕಂಗನಾ ರಣಾವತ್ ನಟನೆಯ ‘ಧಾಕಡ್’ ಚಿತ್ರಕ್ಕೆ ಸಲ್ಲು ಬೆಂಬಲ ನೀಡಿದ್ದರು.

Kangana Ranaut tags Salman Khan on her Instagram story. Would you like to see the two actors collaborate? by u/Big-Criticism-8926 in BollyBlindsNGossip

ಇದನ್ನೂ ಓದಿ: ಹೊಸ ಫೋಟೊಶೂಟ್ ಅಲ್ಲ, ಟಿವಿ ಸಂದರ್ಶನಕ್ಕೆ ಕಂಗನಾ ತಯಾರಾಗಿರುವ ರೀತಿಯಿದು

ಕಂಗನಾ ರಣಾವತ್​ ಅವರ ಕಿರಿಕ್​ ವ್ಯಕ್ತಿತ್ವದಿಂದಾಗಿ ಬಾಲಿವುಡ್​ನ ಬಹುತೇಕರು ಅವರ ತಂಟೆಗೆ ಹೋಗುವುದಿಲ್ಲ. ಅವರ ಸಿನಿಮಾಗಳ ಬಗ್ಗೆಯೂ ಮಾತನಾಡುವುದಿಲ್ಲ. ತಮ್ಮ ಚಿತ್ರಕ್ಕೆ ಸ್ಟಾರ್​ ನಟರಿಂದ ಬೆಂಬಲ ಸಿಗುವುದಿಲ್ಲ ಎಂಬುದು ಕಂಗನಾ ಅವರ ಆರೋಪ ಆಗಿತ್ತು. ಆದರೆ ಅದನ್ನು ಈಗ ಸಲ್ಮಾನ್​ ಖಾನ್​ ಸುಳ್ಳು ಮಾಡಿದ್ದರು. ‘ಧಾಕಡ್​’ ಚಿತ್ರದ ಟ್ರೇಲರ್​ ಅನ್ನು ಟ್ವಿಟರ್​ನಲ್ಲಿ ಅವರು ಹಂಚಿಕೊಂಡಿದ್ದರು. ಜತೆಗೆ ಇಡೀ ಟೀಮ್​ಗೆ ಅವರು ಶುಭ ಹಾರೈಸಿದ್ದರು.

‘ನನ್ನ ದಬಂಗ್​ ಹೀರೋಗೆ ಧನ್ಯವಾದಗಳು. ಚಿನ್ನದಂತಹ ಹೃದಯ ನಿಮ್ಮದು. ಇನ್ಮುಂದೆ ಚಿತ್ರರಂಗದಲ್ಲಿ ನಾನು ಒಂಟಿ ಎಂದು ಹೇಳುವುದಿಲ್ಲ. ಇಡೀ ಧಾಕಡ್​ ಚಿತ್ರತಂಡ ಪರವಾಗಿ ಧನ್ಯವಾದಗಳು’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ