ಕೊಳಕಾಗಿರುವ ಬೇಸ್​​ಕ್ಯಾಂಪ್​​ನ ವಿಡಿಯೊ ಪೋಸ್ಟ್ ಮಾಡಿದ ಕಂಗನಾ; ಎವರೆಸ್ಟ್ ಪ್ರವಾಸ ನಿಲ್ಲಿಸಿ ಎಂದು ಮನವಿ

ದೇವರಿಗೆ ಅಚ್ಚುಮೆಚ್ಚಿನವನೆಂದು ಭಾವಿಸುವ ಮನುಷ್ಯರು ರಿಯಾಲಿಟಿ ಚೆಕ್  ಮಾಡಬೇಕಿದೆ.ಈ ದೃಶ್ಯವನ್ನು ನೋಡಿ,ಮನುಷ್ಯರು ತಮ್ಮ ದುರ್ವಾಸನೆಯ, ಗಬ್ಬು ನಾರುವ, ಹೊಲಸು ಹೆಜ್ಜೆಗುರುತುಗಳನ್ನು ಎಲ್ಲೆಡೆ ಬಿಡುತ್ತಾರೆ. ದಯವಿಟ್ಟು ಮನುಷ್ಯರಿಂದ ಜಗತ್ತನ್ನು ಉಳಿಸಿ ಎಂದು ಕಂಗನಾ ಬರೆದಿದ್ದಾರೆ.

ಕೊಳಕಾಗಿರುವ ಬೇಸ್​​ಕ್ಯಾಂಪ್​​ನ ವಿಡಿಯೊ ಪೋಸ್ಟ್ ಮಾಡಿದ ಕಂಗನಾ; ಎವರೆಸ್ಟ್ ಪ್ರವಾಸ ನಿಲ್ಲಿಸಿ ಎಂದು ಮನವಿ
ಕಂಗನಾ ರಣಾವತ್
Follow us
ರಶ್ಮಿ ಕಲ್ಲಕಟ್ಟ
|

Updated on: May 31, 2023 | 1:55 PM

ಮೌಂಟ್ ಎವರೆಸ್ಟ್‌ನಲ್ಲಿ (Mount Everest)  ಕಸ ತುಂಬಿಕೊಂಡು ಕೊಳಕಾಗಿರುವ ಬೇಸ್ ಕ್ಯಾಂಪ್‌ನ (Base Camp) ವಿಡಿಯೊವೊಂದನ್ನು ನಟಿ ಕಂಗನಾ ರಣಾವತ್ (Kangana Ranaut) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮನ್ನು ದೇವರ ಮೆಚ್ಚಿನವರೆಂದು ಭಾವಿಸುವ ಮಾನವರಿಗೆ ರಿಯಾಲಿಟಿ ಚೆಕ್ ಅಗತ್ಯವಿದೆ ಎಂದು ಕಂಗನಾ ಹೇಳಿದ್ದಾರೆ. ಟೆಂಟ್‌ಗಳ ಹೊರಗೆ ಕಸದಿಂದ ತುಂಬಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನ ಕಿರು ವಿಡಿಯೊವನ್ನು ಶೇರ್ ಮಾಡಿರುವ ಕಂಗನಾ ಎವರೆಸ್ಟ್ ಪ್ರವಾಸಗಳನ್ನು ಸ್ಥಗಿತಗೊಳಿಸಿ ಅಥವಾ ಇದನ್ನು ಸರಿಪಡಿಸಿ ಎಂದಿದ್ದಾರೆ.

ದೇವರಿಗೆ ಅಚ್ಚುಮೆಚ್ಚಿನವನೆಂದು ಭಾವಿಸುವ ಮನುಷ್ಯರು ರಿಯಾಲಿಟಿ ಚೆಕ್  ಮಾಡಬೇಕಿದೆ.ಈ ದೃಶ್ಯವನ್ನು ನೋಡಿ,ಮನುಷ್ಯರು ತಮ್ಮ ದುರ್ವಾಸನೆಯ, ಗಬ್ಬು ನಾರುವ, ಹೊಲಸು ಹೆಜ್ಜೆಗುರುತುಗಳನ್ನು ಎಲ್ಲೆಡೆ ಬಿಡುತ್ತಾರೆ. ದಯವಿಟ್ಟು ಮನುಷ್ಯರಿಂದ ಜಗತ್ತನ್ನು ಉಳಿಸಿ ಎಂದು ಕಂಗನಾ ಬರೆದಿದ್ದಾರೆ.

ಕಂಗನಾ ಕಾಳಜಿಗೆ ತಲೆದೂಗಿದ ನೆಟ್ಟಿಗರು

ಟ್ವಿಟರ್ ಬಳಕೆದಾರರು ನಟಿಯ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರರು “ನಿಜವಾಗಿ, ನಾವು ಪ್ರಕೃತಿಯನ್ನು ಸಂರಕ್ಷಿಸುವುದಿಲ್ಲ.ಪ್ರಕೃತಿ ನಮ್ಮನ್ನು ಸಂರಕ್ಷಿಸುತ್ತದೆ ಎಂಬುದನ್ನು ನಾವು ಮನುಷ್ಯರು ಅರ್ಥಮಾಡಿಕೊಳ್ಳಬೇಕು! ಎಂದು ಹೇಳಿದ್ದಾರೆ. “ನೀವು ಹೋದರೆ ನೀವು ಹೆಚ್ಚುವರಿ 20,000 ಡಾಲರ್‌ಗಳನ್ನು ಶುಚಿಗೊಳಿಸುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಎವರೆಸ್ಟ್ ಏರಲು ಎಲ್ಲರೂ ಯೋಚಿಸಲು ಸಾಧ್ಯವಿಲ್ಲ. ಇದು ಗಣ್ಯ ಶ್ರೀಮಂತರಿಗೆ ಮಾತ್ರ.. ಹೀಗೆ ಎಲ್ಲರೂ ಮಾಡುವುದಿಲ್ಲ. ಆದರೆ ಕೆಲವರು ವ್ಯರ್ಥ ಮಾಡಲು ಇತರರಿಗಿಂತ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ್ದಾರೆಂದು ಭಾವಿಸುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಗನಾ ಅವರ ಮುಂಬರುವ ಯೋಜನೆಗಳು

ನಟಿ ಕಂಗನಾ ಕೊನೆಯದಾಗಿ 2022 ರಲ್ಲಿ ಸ್ಪೈ ಆಕ್ಷನ್ ಚಿತ್ರ ಧಾಕಡ್ ನಲ್ಲಿ ಕಾಣಿಸಿಕೊಂಡರು. ಇದು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು. ಅವರು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಪಾತ್ರದಲ್ಲಿ ತೇಜಸ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕಂಗನಾ ಅವರು ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಅವರೊಂದಿಗೆ ಮುಂಬರುವ ಟಿಕು ವೆಡ್ಸ್ ಶೇರು ಮೂಲಕ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ

ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಎಮರ್ಜೆನ್ಸಿ ಚಿತ್ರವನ್ನೂ ಪೂರ್ಣಗೊಳಿಸಿದ್ದಾರೆ. ಪಿ ವಾಸು ನಿರ್ದೇಶಿಸಿದ ಮತ್ತು ರಾಘವ ಲಾರೆನ್ಸ್ ಸಹ-ನಟನಾಗಿರುವ ತಮಿಳು ಸೀಕ್ವೆಲ್ ಚಂದ್ರಮುಖಿ 2ಯಲ್ಲೂ ಕಂಗನಾ ನಟಿಸಿದ್ದು,ಸಿನಿಮಾದ ಚಿತ್ರೀಕರಣ ಮುಗಿದಿದೆ.2006 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಕಂಗನಾ ಹಲವಾರು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಫ್ಯಾಶನ್, ತನು ವೆಡ್ಸ್ ಮನು, ಕ್ವೀನ್ ಮತ್ತು ಇನ್ನೂ ಅನೇಕ ಚಿತ್ರಗಳ ಮೂಲಕ ಕಂಗನಾ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ