AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surat Crime: ಕೋಪದ ಕೈಗೆ ಬುದ್ಧಿ ಕೊಟ್ಟು 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ತಂದೆ

 ಕೋಪದ ಕೈಗೆ ಬುದ್ಧಿ ಕೊಟ್ಟು ವ್ಯಕ್ತಿಯೊಬ್ಬ  25 ಬಾರಿ ಚಾಕುವಿನಿಂದ ಇರಿದು  ಮಗಳನ್ನು ಹತ್ಯೆ ಮಾಡಿರುವ ಘಟನೆ ಸೂರತ್​ನಲ್ಲಿ ನಡೆದಿದೆ. ಕೌಟುಂಬಿಕ ಕಲಹದಲ್ಲಿ ಕೋಪಗೊಂಡ ವ್ಯಕ್ತಿ ಮಗಳನ್ನು ಹತ್ಯೆ ಮಾಡಿ, ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ.

Surat Crime: ಕೋಪದ ಕೈಗೆ ಬುದ್ಧಿ ಕೊಟ್ಟು 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ತಂದೆ
ಅಪರಾಧ
ನಯನಾ ರಾಜೀವ್
|

Updated on:May 31, 2023 | 1:05 PM

Share

ಕೋಪದ ಕೈಗೆ ಬುದ್ಧಿ ಕೊಟ್ಟು ವ್ಯಕ್ತಿಯೊಬ್ಬ  25 ಬಾರಿ ಚಾಕುವಿನಿಂದ ಇರಿದು  ಮಗಳನ್ನು ಹತ್ಯೆ ಮಾಡಿರುವ ಘಟನೆ ಸೂರತ್​ನಲ್ಲಿ ನಡೆದಿದೆ. ಕೌಟುಂಬಿಕ ಕಲಹದಲ್ಲಿ ಕೋಪಗೊಂಡ ವ್ಯಕ್ತಿ ಮಗಳನ್ನು ಹತ್ಯೆ ಮಾಡಿ, ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಮೇ 18 ರ ರಾತ್ರಿ ಸೂರತ್‌ನ ಕಡೋದರಾ ಪ್ರದೇಶದಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣದ ತನಿಖೆ ಮುಂದುವರೆದಂತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ರಾಮಾನುಜ ಎಂದು ಗುರುತಿಸಲಾದ ಆರೋಪಿ ತನ್ನ ಕುಟುಂಬದೊಂದಿಗೆ ಸೂರತ್‌ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ, ತನಿಖಾಧಿಕಾರಿಗಳು ಮಾಹಿತಿ ನೀಡಿದಂತೆ, ತಮ್ಮ ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ನಡೆದ ಸಣ್ಣ ಜಗಳದಲ್ಲಿ ಆರೋಪಿಯು ತಾಳ್ಮೆ ಕಳೆದುಕೊಂಡಿದ್ದಾನೆ. ಪರಿಸ್ಥಿತಿ ಉಲ್ಬಣಗೊಂಡಿತು, ಹಿಂಸಾಚಾರಕ್ಕೆ ಕಾರಣವಾಯಿತು.

ಮತ್ತಷ್ಟು ಓದಿ:Delhi murder Case:ಆಕೆ ನನ್ನನ್ನು ನಿರ್ಲಕ್ಷಿಸುತ್ತಿದ್ದಳು; ಸಿಟ್ಟಿನಿಂದ ಕೊಂದೆ, ಇದಕ್ಕೆ ವಿಷಾದಿಸುತ್ತಿಲ್ಲ: ದೆಹಲಿ ಹತ್ಯೆ ಪ್ರಕರಣದ ಆರೋಪಿ

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ, ಸರಿಸುಮಾರು ರಾತ್ರಿ 11.20ಕ್ಕೆ, ರಾಮಾನುಜ ಮೊದಲು ತನ್ನ ಮಕ್ಕಳ ಮುಂದೆ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆ ಗಾಯಗೊಂಡಿರುವಾಗ, ಆಕೆಯ ಮಕ್ಕಳು ತಂದೆಯನ್ನು ಹಿಡಿಯಲು ಮುಂದಾಗಿ, ಕೋಪ ನಿಯಂತ್ರಿಸಲು ಪ್ರಯತ್ನಿಸಿದರು. ಆಗ ಕೋಪಗೊಂಡ ವ್ಯಕ್ತಿ ತನ್ನ ಮಗಳನ್ನು ಹಿಡಿದುಕೊಂಡು 25 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.

ಆಕೆ ತಪ್ಪಿಸಿಕೊಂಡು ಕೋಣೆಗೆ ಓಡಿ ಹೋಗಿದ್ದಾಳೆ, ಆದರೂ ಆತ ಬಿಡದೆ ಅಲ್ಲಿಯೇ ಹೋಗಿ ಹಲವು ಬಾರಿ ಚಾಕುವುನಿಂದ ಇರಿದಿದ್ದ, ಬಳಿಕ ಆಕೆ ಸಾವನ್ನಪ್ಪಿದ್ದಾಳೆ.

ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆಯ ನಂತರವೂ, ರಾಮಾನುಜನು ತನ್ನ ಹೆಂಡತಿಗೆ ಹಾನಿ ಮಾಡಲು ನಿರ್ಧರಿಸಿ ಟೆರೇಸ್​ ಹತ್ತಿದ್ದ. ಈ ಬಗ್ಗೆ ಸೂರತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ರಾಮಾನುಜರನ್ನು ಬಂಧಿಸಿದ್ಕೊದಾರೆ, ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಐಪಿಸಿಯ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:40 am, Wed, 31 May 23