ಅಪ್ಪ-ಅಮ್ಮ ಕ್ಷಮಿಸಿ.. ಡೆತ್‌ನೋಟ್ ಬರೆದಿಟ್ಟು ಟವಲ್‌ನಿಂದ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಕೇರಳ ಮೂಲದ 37 ವರ್ಷ ಖಾಸಗಿ ಕಂಪನಿ ಉದ್ಯೋಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ವ್ಯಕ್ತಿಯೋರ್ವ ಡೆತ್‌ನೋಟ್ ಬರೆದಿಟ್ಟು ಬಳಿಕ ಟವಲ್‌ನಿಂದ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ(Bengaluru) ನೆಲಮಂಗಲದ ಸುಭಾಷ್‌ನಗರದಲ್ಲಿ ನಡೆದಿದೆ. ಎ.ವಿ ವಿನೀಶ್ (37) ಮೃತ ದುರ್ದೈವಿ. ಕೇರಳದ(Kerala) ಕಣ್ಣೂರು ಜಿಲ್ಲೆಯ ಪೆರಂದಟ್ಟ ಮೂಲದ ವಿನೀಶ್, ನೆಲಮಂಗಲದ ಪವರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ. ಏಕಾಏಕಿ ಅಪ್ಪ-ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಿನ ಮನೆಯಲ್ಲಿ ವಾಸವಿದ್ದ ಸ್ನೇಹಿತರು ವಿನೀಶ್ ಭೇಟಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಹಾವು ಕಚ್ಚಿ ಬಾಲಕ ಸಾವು
ರಾಯಚೂರು: ಹಾವು ಕಚ್ಚಿದ ಪರಿಣಾಮ ಬಾಲಕನೋರ್ವ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕ್ಯಾದಿಗೇರಾದಲ್ಲಿ ನಡೆದಿದೆ. ಆಂಜನೇಯ(15) ಮೃತ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಆಂಜನೇಯ, ನಿನ್ನೆ(ಮೇ 30) ರಾತ್ರಿ ತಂದೆಗೆ ಊಟ ಕೊಡಲು ಜಮೀನಿಗೆ ತೆರಳಿದ್ದ ಬಾಲಕನಿಗೆ ಕುರಿದೊಡ್ಡಿ ಬಳಿ ಹಾವು ಕಚ್ಚಿದೆ. ನಂತರ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.