ಕೊನೆಗೂ ಹಿಮೋಫಿಲಿಯಾ ಪೀಡಿತರಿಗೆ ಅಂಗವಿಕಲತೆಯಿಂದ ಮುಕ್ತಿ; 57 ಸಾವಿರ ರೂ. ಇಂಜೆಕ್ಷನ್ ಉಚಿತ!
ಹಿಮೋಫಿಲಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಲಭ್ಯವಾಗಿದೆ. ಸುಮಾರು 57 ಸಾವಿರ ರೂ. ಮೌಲ್ಯದ ಎಮಿಸಿಜುಮ್ಯಾಬ್ (ಹೆಮ್ಲಿಬ್ರಾ) ಎಂಬ ಇಂಜೆಕ್ಷನ್ ಅನ್ನು ಇದೀಗ ಉಚಿತವಾಗಿ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಈ ಯೋಜನೆಗೆ ಚಾಲನೆ ನೀಡಿದರು. ರಕ್ತ ಹೆಪ್ಪುಗಟ್ಟದ ಸಮಸ್ಯೆಯಿಂದ ಗಾಯವಾದಾಗ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಹಿಂದಿನ ವ್ಯವಸ್ಥೆಗೆ ಬದಲಾಗಿ, ಇದೀಗ ಗಾಯವಾಗುವ ಮೊದಲುಲೇ ತಿಂಗಳಿಗೆ ಒಮ್ಮೆ ಈ ಇಂಜೆಕ್ಷನ್ ನೀಡಲಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸಿ ಅನಾವಶ್ಯಕ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ಹಿಮೋಫಿಲಿಯಾ ರೋಗಿಗಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಹಲವು ವರ್ಷಗಳ ಹೋರಾಟದ ನಂತರ ಸರ್ಕಾರದ ಈ ನಿರ್ಧಾರಕ್ಕೆ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ, ಮಾರ್ಚ್ 08: ಹಿಮೋಫಿಲಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಲಭ್ಯವಾಗಿದೆ. ಸುಮಾರು 57 ಸಾವಿರ ರೂ. ಮೌಲ್ಯದ ಎಮಿಸಿಜುಮ್ಯಾಬ್ (ಹೆಮ್ಲಿಬ್ರಾ) ಎಂಬ ಇಂಜೆಕ್ಷನ್ ಅನ್ನು ಇದೀಗ ಉಚಿತವಾಗಿ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಈ ಯೋಜನೆಗೆ ಚಾಲನೆ ನೀಡಿದರು. ರಕ್ತ ಹೆಪ್ಪುಗಟ್ಟದ ಸಮಸ್ಯೆಯಿಂದ ಗಾಯವಾದಾಗ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಹಿಂದಿನ ವ್ಯವಸ್ಥೆಗೆ ಬದಲಾಗಿ, ಇದೀಗ ಗಾಯವಾಗುವ ಮೊದಲುಲೇ ತಿಂಗಳಿಗೆ ಒಮ್ಮೆ ಈ ಇಂಜೆಕ್ಷನ್ ನೀಡಲಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸಿ ಅನಾವಶ್ಯಕ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ಹಿಮೋಫಿಲಿಯಾ ರೋಗಿಗಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಹಲವು ವರ್ಷಗಳ ಹೋರಾಟದ ನಂತರ ಸರ್ಕಾರದ ಈ ನಿರ್ಧಾರಕ್ಕೆ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Mar 08, 2026 10:24 AM
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

