ಪ್ರೆಗ್ನೆನ್ಸಿ ಸುದ್ದಿ ಬೆನ್ನಲ್ಲೇ ಬೇಬಿಬಂಪ್ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ಈ ದಂಪತಿಗೆ ವಮಿಕಾ ಹೆಸರಿನ ಮಗಳಿದ್ದಾಳೆ. ಈಗ ಅನುಷ್ಕಾ ಶರ್ಮಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಪ್ರೆಗ್ನೆನ್ಸಿ ಸುದ್ದಿ ಬೆನ್ನಲ್ಲೇ ಬೇಬಿಬಂಪ್ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 26, 2023 | 2:42 PM

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹಾಗಂತ ಸಿನಿಮಾ ವಿಚಾರಕ್ಕೆ ಅವರು ಸುದ್ದಿ ಆಗುತ್ತಿಲ್ಲ. ಅವರು ಚರ್ಚೆ ಆಗುತ್ತಿರುವುದು ವೈಯಕ್ತಿಕ ಕಾರಣಕ್ಕೆ. ಅನುಷ್ಕಾ ಶರ್ಮಾ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಹೀಗಿರುವಾಗಲೇ ಅವರು ಬೇಬಿಬಂಪ್​ನ ಫೋಟೋ ಹಂಚಿಕೊಂಡಿದ್ದಾರೆ. ಹಾಗಾದರೆ ಅವರು ಎರಡನೇ ಮಗು ಪಡೆಯುತ್ತಿರುವ ವಿಚಾರವನ್ನು ಅಧಿಕೃತ ಮಾಡಿದರಾ? ಇಲ್ಲ. ಅವರು ಈ ರೀತಿ ಪೋಸ್ಟ್ ಮಾಡೋದಕ್ಕೂ ಒಂದು ಕಾರಣ ಇದೆ.

ಅನುಷ್ಕಾ ಶರ್ಮಾ ಪೋಸ್ಟ್ ಮಾಡಿರೋ ಫೋಟೋ ಮೊದಲ ಬಾರಿ ಪ್ರೆಗ್ನೆಂಟ್ ಆಗಿರುವ ಸಂದರ್ಭದ್ದು. ಅನುಷ್ಕಾ ಶರ್ಮಾ ಅವರು ಮೊಬೈಲ್ ಒಂದರ ಪ್ರಮೋಷನ್​ಗೆ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ಪ್ರೆಗ್ನೆನ್ಸಿ ಸಮಯದ ಫೋಟೋ ಹಾಗೂ ಈಗಿನ ಸಂದರ್ಭದ ಫೋಟೋ ಇದೆ. ‘ಸಮಯ ತುಂಬಾನೇ ಬೇಗ ಓಡುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ. ಫೋಟೋ ನೋಡಿದ ತಕ್ಷಣ ಅನೇಕರು ಅನುಷ್ಕಾ ಎರಡನೇ ಬಾರಿ ಪ್ರೆಗ್ನೆಂಟ್ ಆದ ವಿಚಾರವನ್ನು ಅಧಿಕೃತ ಮಾಡಿದರು ಎಂದೇ ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ಈ ದಂಪತಿಗೆ ವಮಿಕಾ ಹೆಸರಿನ ಮಗಳಿದ್ದಾಳೆ. ಈಗ ಅನುಷ್ಕಾ ಶರ್ಮಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅನುಷ್ಕಾ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದೇ ಇರುವುದೇ ಇದಕ್ಕೆ ಕಾರಣ. ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಅವರು ಮ್ಯಾಚ್ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಎಲ್ಲರ ಗಮನ ಅವರ ಹೊಟ್ಟೆಯ ಮೇಲಿತ್ತು.

ಮದುವೆ ಆದ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ದುಪ್ಪಟ್ಟಾದಿಂದ ಹೊಟ್ಟೆ ಮುಚ್ಚಿಕೊಂಡರೆ ಸಾಕು, ಪ್ರೆಗ್ನೆನ್ಸಿ ಬಗ್ಗೆ ಗಾಸಿಪ್ ಹಬ್ಬುತ್ತದೆ. ಈಗ ಅನುಷ್ಕಾ ಕೂಡ ಇದೇ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಚಾರದಲ್ಲಿ ಶೀಘ್ರವೇ ಅವರು ಸ್ಪಷ್ಟನೆ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: 2ನೇ ಮಗು ಆದ ಬಳಿಕ ನಟನೆಗೆ ಗುಡ್​ಬೈ ಹೇಳ್ತಾರಾ ಅನುಷ್ಕಾ ಶರ್ಮಾ? ಗುಮಾನಿಗೆ ಕಾರಣ ಆಗಿದೆ ಈ ವಿಡಿಯೋ

‘ಜೀರೋ’ ಸಿನಿಮಾ ರಿಲೀಸ್ ಆಗಿದ್ದು 2018ರಲ್ಲಿ. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ‘ಚಕ್ದಾ ಎಕ್ಸ್​ಪ್ರೆಸ್’ ಸಿನಿಮಾನ ಅವರು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಕೆಲಸಗಳು ಸಾಕಷ್ಟು ವಿಳಂಬ ಆಗುತ್ತಲೇ ಇವೆ. ಎರಡನೇ ಮಗು ಜನಿಸಿದ ಬಳಿಕ ಅವರು ಸಂಪೂರ್ಣವಾಗಿ ಚಿತ್ರರಂಗ ತೊರೆಯಬಹುದು ಎನ್ನುವ ಮಾತೂ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಸ್ಪಷ್ಟನೆ ನೀಡಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:15 pm, Thu, 26 October 23