2ನೇ ಮಗು ಆದ ಬಳಿಕ ನಟನೆಗೆ ಗುಡ್​ಬೈ ಹೇಳ್ತಾರಾ ಅನುಷ್ಕಾ ಶರ್ಮಾ? ಗುಮಾನಿಗೆ ಕಾರಣ ಆಗಿದೆ ಈ ವಿಡಿಯೋ

ಈಗಾಗಲೇ ಅನುಷ್ಕಾ ಶರ್ಮಾ ಅವರು ನಟನೆಗೆ ಬ್ರೇಕ್​ ಹಾಕಿದ್ದಾರೆ. 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾ ಬಳಿಕ ಅವರ ಯಾವುದೇ ಹೊಸ ಚಿತ್ರ ಬಿಡುಗಡೆ ಆಗಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದರೂ ಕೂಡ ಆ ಚಿತ್ರದ ಕೆಲಸಗಳು ತುಂಬ ವಿಳಂಬ ಆಗುತ್ತಿವೆ.

2ನೇ ಮಗು ಆದ ಬಳಿಕ ನಟನೆಗೆ ಗುಡ್​ಬೈ ಹೇಳ್ತಾರಾ ಅನುಷ್ಕಾ ಶರ್ಮಾ? ಗುಮಾನಿಗೆ ಕಾರಣ ಆಗಿದೆ ಈ ವಿಡಿಯೋ
ಅನುಷ್ಕಾ ಶರ್ಮಾ
Follow us
ಮದನ್​ ಕುಮಾರ್​
|

Updated on: Oct 18, 2023 | 10:43 AM

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದರು. ಆದರೆ ಮದುವೆ ಆದ ಬಳಿಕ ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆದರು. ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕವಂತೂ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಈಗ ಅವರು ಎರಡನೇ ಮಗುವಿನ (Anushka Sharma Second Child) ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಗಾಸಿಪ್​ ಹಬ್ಬಿದೆ. ಆದರೆ ಈ ಬಗ್ಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ (Virat Kohli) ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ಅನುಷ್ಕಾ ಬಗ್ಗೆ ಇನ್ನೊಂದು ಗಾಸಿಪ್​ ಹಬ್ಬಿದೆ. ಎರಡನೇ ಮಗು ಪಡೆದ ಬಳಿಕ ಅನುಷ್ಕಾ ಶರ್ಮಾ ಅವರು ನಟನೆಗೆ ಗುಡ್​ಬೈ ಹೇಳುತ್ತಾರೆ ಎಂದು ಕೆಲವರು ಊಹಿಸಿದ್ದಾರೆ. ಈ ಗಾಸಿಪ್​ ಹಬ್ಬಲು ಕಾರಣ ಆಗಿರುವುದು ಒಂದು ಹಳೇ ವಿಡಿಯೋ.

ಮದುವೆಗೂ ಮುನ್ನ ಮಾಧ್ಯಮವೊಂದಕ್ಕೆ ಅನುಷ್ಕಾ ಶರ್ಮಾ ಅವರು ಈ ಸಂದರ್ಶನ ನೀಡಿದ್ದರು. ‘ನಿಮಗೆ ಮದುವೆ ಎಷ್ಟು ಮುಖ್ಯ’ ಎಂದು ಕೇಳಿದ ಪ್ರಶ್ನೆಗೆ ಅನುಷ್ಕಾ ಈ ರೀತಿ ಉತ್ತರಿಸಿದ್ದರು. ‘ಮದುವೆ ನನಗೆ ತುಂಬ ಮುಖ್ಯ. ನಾನು ಮದುವೆ ಆಗಬೇಕು ಮತ್ತು ಮಕ್ಕಳನ್ನು ಪಡೆಯಬೇಕು. ಪ್ರಾಯಶಃ ಮದುವೆ ಬಳಿಕ ನಾನು ಕೆಲಸ ಮಾಡಲು ಇಷ್ಟಪಡುವುದಿಲ್ಲ’ ಎಂದು ಅನುಷ್ಕಾ ಶರ್ಮಾ ಹೇಳಿದ್ದರು. ಈ ವಿಡಿಯೋ ಮತ್ತೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Throwback : Could anushka sharma leave films after her second child ? byu/Suspicious-Support82 inBollyBlindsNGossip

ಈಗಾಗಲೇ ಅನುಷ್ಕಾ ಶರ್ಮಾ ಅವರು ನಟನೆಗೆ ಬ್ರೇಕ್​ ಹಾಕಿದ್ದಾರೆ. 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾ ಬಳಿಕ ಅವರ ಯಾವುದೇ ಹೊಸ ಚಿತ್ರ ಬಿಡುಗಡೆ ಆಗಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದರೂ ಕೂಡ ಆ ಚಿತ್ರದ ಕೆಲಸಗಳು ತುಂಬ ವಿಳಂಬ ಆಗುತ್ತಿವೆ. ಇನ್ನು, ಎರಡನೇ ಮಗು ಪಡೆದರಂತೂ ಅವರು ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿಯುತ್ತಾರೆ ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಶತಕಕ್ಕೆ ಪತ್ನಿ ಅನುಷ್ಕಾ ಶರ್ಮಾ ರಿಯಾಕ್ಷನ್ ನೋಡಿ

ಅನುಷ್ಕಾ ಶರ್ಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಶಾರುಖ್​ ಖಾನ್​ ಜೊತೆ ‘ರಬ್​ನೇ ಬನಾದಿ ಜೋಡಿ’ ಚಿತ್ರದ ಮೂಲಕ ಅನುಷ್ಕಾ ಅವರು ಬಣ್ಣ ಲೋಕಕ್ಕೆ ಎಂಟ್ರಿ ಪಡೆದರು. ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​, ರಣಬೀರ್​ ಕಪೂರ್​, ಸಂಜಯ್​ ದತ್​, ಆಮಿರ್​ ಖಾನ್​, ವರುಣ್​ ಧವನ್​ ಮುಂತಾದ ಸ್ಟಾರ್​ ನಟರ ಜೊತೆ ನಟಿಸಿ ಅವರು ಜನಪ್ರಿಯತೆ ಪಡೆದರು. ನಿರ್ಮಾಪಕಿ ಆಗಿಯೂ ಚಿತ್ರರಂಗದಲ್ಲಿ ಅನುಷ್ಕಾ ಶರ್ಮಾ ಅವರು ಗೆಲುವು ಕಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.