ವರ್ಷಗಳ ಬಳಿಕ ಕೊನೆಗೂ ಮುಖವಾಡ ತೆಗೆದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ

Raj Kundra: ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಆದಾಗಿನಿಂದ ಮುಖವಾಡ ಧರಿಸಿಕೊಂಡು ಓಡಾಡುತ್ತಿದ್ದ ರಾಜ್ ಕುಂದ್ರಾ ಇದೀಗ ಎರಡು ವರ್ಷಗಳ ಬಳಿಕ ಮುಖವಾಡ ತೆಗೆದು ಮುಖ ತೋರಿಸಿದ್ದಾರೆ.

ವರ್ಷಗಳ ಬಳಿಕ ಕೊನೆಗೂ ಮುಖವಾಡ ತೆಗೆದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ
Follow us
ಮಂಜುನಾಥ ಸಿ.
|

Updated on: Oct 18, 2023 | 9:18 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ, ಜೈಲಿನಿಂದ ಹೊರಬಂದಾಗಿನಿಂದಲೂ ಮುಖವಾಡ ಧರಿಸಿಕೊಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಪಾಪರಾಟ್ಜಿಗಳ ಕ್ಯಾಮೆರಾಗಳಿಂದ ಬಚಾವಾಗಲೆಂದು ದೊಡ್ಡ ಮಾಸ್ಕ್ ಧರಿಸುತ್ತಿದ್ದ ರಾಜ್ ಕುಂದ್ರಾ ಆ ನಂತರ ಭಿನ್ನ-ಭಿನ್ನ ಮುಖವಾಡಗಳನ್ನು ಧರಿಸಲು ಆರಂಭಿಸಿದರು. ಅದು ಸಹ ಟ್ರೆಂಡ್ ಆಗಿಬಿಟ್ಟಿತ್ತು. ಇದೀಗ ಸುಮಾರು ಎರಡು ವರ್ಷಗಳ ಬಳಿಕ ಸಾರ್ವಜನಿಕವಾಗಿ ಮುಖವಾಡ ತೆಗೆದು ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ, ಅದಕ್ಕೆ ಕಾರಣವೂ ಇದೆ.

ರಾಜ್ ಕುಂದ್ರಾ ತಮ್ಮದೇ ಜೀವನದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಜೈಲಿನಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಆಧರಿಸಿ ‘ಯುಟಿ 69’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 18) ರಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖವಾಡ ತೆರೆದು ಮಾಧ್ಯಮಗಳಿಗೆ ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ.

ಇದನ್ನೂ ಓದಿ:Viral Video: ಶಿಲ್ಪಾ ಶೆಟ್ಟಿಯ ಈ ಫಿಟ್​ನೆಸ್​ ಸವಾಲಿಗೆ ನೀವು ಸಿದ್ಧರೇ?

ತಾವೇಕೆ ಮುಖವಾಡ ಧರಿಸಲು ಆರಂಭಿಸಿದ್ದಾಗಿಯೂ ವಿವರಿಸಿದ ರಾಜ್ ಕುಂದ್ರಾ, ”ನನ್ನ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು, ನನಗೆ ಅದು ಹೆಚ್ಚು ಸಮಸ್ಯೆ ಆಗಲಿಲ್ಲ, ಆದರೆ ನನ್ನ ವಿರುದ್ಧ ನಡೆದ ‘ಮೀಡಿಯಾ ಟ್ರಯಲ್’ (ಮಾಧ್ಯಮದ ವಿಚಾರಣೆ) ಹೆಚ್ಚು ನೋವು ತರಿಸಿತು. ಇದ್ದದ್ದು, ಇಲ್ಲದ್ದು ಪ್ರತಿದಿನ ಪ್ರಸಾರವಾಗುತ್ತಲೇ ಇತ್ತು. ಅದು ಬಹಳ ನೋವುಂಟು ಮಾಡಿತ್ತು. ಹಾಗಾಗಿ ನನ್ನನ್ನು ನಾನು ಮಾಧ್ಯಮಗಳಿಂದ ದೂರ ಉಳಿಸಿಕೊಳ್ಳಲು ಮುಖವಾಡ ಧರಿಸಲು ಆರಂಭಿಸಿದೆ. ಈ ಬಗ್ಗೆ ಮಾಧ್ಯಮಗಳನ್ನು ನಾನು ದೂರುವುದಿಲ್ಲ. ಅವರು, ತಮ್ಮ ಕೆಲಸ ಮಾಡುತ್ತಿದ್ದರು” ಎಂದಿದ್ದಾರೆ ರಾಜ್ ಕುಂದ್ರಾ.

‘ಯುಟಿ 69’ ಸಿನಿಮಾದಲ್ಲಿ ರಾಜ್ ಕುಂದ್ರಾ, ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ರಾಜ್ ಕುಂದ್ರಾ ಅಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಸಿನಿಮಾ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶಾನವಾಜ್ ಅಲಿ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸ್ವತಃ ರಾಜ್ ಕುಂದ್ರಾ. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಅನುಭವಿ ನಟರ ರೀತಿಯಲ್ಲಿ ರಾಜ್ ಕುಂದ್ರಾ ಚೆನ್ನಾಗಿಯೇ ನಟಿಸಿದ್ದಾರೆ. ರಾಜ್ ಕುಂದ್ರಾರ ಜೈಲು ವಾಸದ ಕಠಿಣ ಸಂದರ್ಭವನ್ನು ಹಾಸ್ಯದ ಲೇಪನದೊಂದಿಗೆ ಪ್ರಸೆಂಟ್ ಮಾಡಿರುವುದನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ.

ರಾಜ್ ಕುಂದ್ರಾರ ಈ ಸಿನಿಮಾದಲ್ಲಿ ಜೈಲುಗಳು, ಅಲ್ಲಿನ ಅವ್ಯವಸ್ಥೆ, ಖೈದಿಗಳ ಸಂಕಷ್ಟ, ಅವರ ಕಷ್ಟ-ನಷ್ಟಗಳ ಬಗೆಗೂ ಬೆಳಕು ಚೆಲ್ಲಲಿದೆ. ಜೊತೆಗೆ ರಾಜ್ ಕುಂದ್ರಾರ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ರಾಜ್ ಕುಂದ್ರಾರ ಕೋನದಿಂದ ಮಾಹಿತಿ ಒದಗಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿರುವ ರಾಜ್ ಕುಂದ್ರಾ, ಇತ್ತೀಚೆಗಷ್ಟೆ ಸ್ಟಾಂಡಪ್ ಕಾಮಿಡಿ ಸಹ ಮಾಡಿದ್ದರು. ಅದನ್ನು ಸಹ ಮುಖವಾಡ ಧರಿಸಿಕೊಂಡೆ ಮಾಡಿದ್ದರು.

ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ 2021ರ ಜುಲೈ ತಿಂಗಳಲ್ಲಿ ಮುಂಬೈ ಪೊಲೀಸರಿಂದ ರಾಜ್ ಕುಂದ್ರಾ ಬಂಧನವಾಗಿತ್ತು. ಭಾರತದಲ್ಲಿ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ ವಿದೇಶದ ತಮ್ಮದೇ ಒಡೆತನದ ಸಂಸ್ಥೆಯ ಮೂಲಕ ಅಪ್ಲಿಕೇಶನ್​ಗಳಿಗೆ ಅಪ್​ಲೋಡ್ ಮಾಡಿ ಪ್ರತಿದಿನ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದಾರೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು. ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಆರ್ಥರ್ ರೋಡ್​ ಜೈಲಿನಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಇದ್ದರು. ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್