ಈ ರೀತಿ ಡ್ರೆಸ್ ಮಾಡಿಕೊಂಡ ಉರ್ಫಿ ಜಾವೇದ್; ಪಕ್ಕದಲ್ಲಿ ಇದ್ದಾರೆ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲಿಗೆ ಹೋಗಿಬಂದ ಬಳಿಕ ತಮ್ಮ ಗೆಟಪ್ ಬದಲಾಯಿಸಿಕೊಂಡರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಮಾಸ್ಕ್ ಧರಿಸುತ್ತಾರೆ. ಈಗಂತೂ ಹಾಲಿವುಡ್ ಸಿನಿಮಾಗಳ ಸೂಪರ್ ಹೀರೋಗಳ ರೀತಿ ಮಾಸ್ಕ್ ಧರಿಸಲು ಅವರು ಶುರು ಮಾಡಿದ್ದಾರೆ.

ನಟಿ ಉರ್ಫಿ ಜಾವೇದ್ (Urfi Javed) ಅವರು ಹಲವು ಬಗೆಯಲ್ಲಿ ಡ್ರೆಸ್ ಮಾಡಿಕೊಂಡು ಗಮನ ಸೆಳೆಯುತ್ತಾರೆ. ಬಹುತೇಕ ದೇಹ ಕಾಣುವಂತೆ ಅವರು ಬಟ್ಟೆ (Urfi Javed Dress) ಧರಿಸುತ್ತಾರೆ. ಆದರೆ ಈಗ ಉಲ್ಟಾ ಹೊಡೆದಿದ್ದಾರೆ. ಪೂರ್ತಿ ಮೈ ಮುಚ್ಚುವಂತಹ ಬಟ್ಟೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಅದೂ ಸಾಲದೆಂಬಂತೆ ಪೂರ್ತಿ ಮುಖವನ್ನು ಮುಚ್ಚಿಕೊಂಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ಈ ಅವತಾರದಲ್ಲಿ ರಾಜ್ ಕುಂದ್ರಾ (Raj Kundra) ಮತ್ತು ಉರ್ಫಿ ಜಾವೇದ್ ಮುಖಾಮುಖಿ ಆಗಿದ್ದಾರೆ. ವಿಚಿತ್ರ ವ್ಯಕ್ತಿತ್ವ ಇರುವ ಈ ಇಬ್ಬರು ಸೆಲೆಬ್ರಿಟಿಗಳನ್ನು ಒಟ್ಟಿಗೆ ನೋಡಿ ಪಾಪರಾಜಿಗಳಿಗೆ ಖುಷಿ ಆಗಿದೆ.
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲು ಸೇರಿ ಬಂದ ಬಳಿಕ ತಮ್ಮ ಗೆಟಪ್ ಬದಲಾಯಿಸಿಕೊಂಡರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಮಾಸ್ಕ್ ಧರಿಸುತ್ತಾರೆ. ಮಾಸ್ಕ್ ಎಂದರೆ ಅದು ಸಾಧಾರಣದ್ದಲ್ಲ. ಈ ಮಾಸ್ಕ್ ಧರಿಸಿದರೆ ಅವರ ಮುಖ ಕಿಂಚಿತ್ತೂ ಕಾಣುವುದಿಲ್ಲ. ಈಗಂತೂ ಹಾಲಿವುಡ್ನ ಸೂಪರ್ ಹೀರೋಗಳ ರೀತಿ ಮಾಸ್ಕ್ ಧರಿಸಲು ಅವರು ಶುರು ಮಾಡಿದ್ದಾರೆ.
View this post on Instagram
ರಾಜ್ ಕುಂದ್ರಾ ಮತ್ತು ಉರ್ಫಿ ಜಾವೇದ್ ಅವರು ಒಂದೇ ಜಾಗದಲ್ಲಿ ಎದುರುಬದುರಾದರು. ಪರಸ್ಪರ ವಿಶ್ ಮಾಡಿಕೊಂಡರು. ಆದರೆ ಒಟ್ಟಿಗೆ ಪೋಸ್ ನೀಡಲಿಲ್ಲ. ಇದು ಪಬ್ಲಿಸಿಟಿ ಗಿಮಿಕ್ ಇರಬಹುದು ಎಂದು ಕೂಡ ಅನೇಕರು ಭಾವಿಸಿದ್ದಾರೆ. ಬಾಲಿವುಡ್ ಮಂದಿ ಈ ರೀತಿಯ ಗಿಮಿಕ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಒಟ್ಟಿನಲ್ಲಿ ಉರ್ಫಿ ಜಾವೇದ್ ಅವರು ಇಂಥ ಹಲವು ಕಾರಣಗಳಿಂದ ಪ್ರಚಾರ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Urfi Javed: ‘ನಾನು ನಿನ್ನ ಮಗಳಾ?’: ಬಟ್ಟೆ ಬಗ್ಗೆ ಬುದ್ಧಿ ಹೇಳಲು ಬಂದ ವ್ಯಕ್ತಿಗೆ ತಿರುಗೇಟು ನೀಡಿದ ಉರ್ಫಿ ಜಾವೇದ್
ಇತ್ತೀಚೆಗೆ ರಾಜ್ ಕುಂದ್ರಾ ಅವರು ಸ್ಟ್ಯಾಂಡಪ್ ಕಾಮಿಡಿ ಕೂಡ ಮಾಡಿದ್ದಾರೆ. ಆಗ ಅವರು ಉರ್ಫಿ ಜಾವೇದ್ ಬಟ್ಟೆ ಬಗ್ಗೆ ಜೋಕ್ ಮಾಡಿದ್ದರು. ‘ನನ್ನನ್ನು ಈ ಎರಡು ವರ್ಷಗಳಲ್ಲಿ ಪ್ರೀತಿಸಿದವರು ಪಾಪರಾಜಿಗಳು ಮಾತ್ರ. ಅವರ ಪಾಲಿಗೆ ಇರುವ ಇಬ್ಬರು ಸ್ಟಾರ್ಗಳು ಎಂದರೆ ಅದು ನಾನು ಮತ್ತು ಉರ್ಫಿ ಜಾವೇದ್ ಮಾತ್ರ. ನಾನು ಏನು ಧರಿಸುತ್ತೇನೆ ಮತ್ತು ಉರ್ಫಿ ಜಾವೇದ್ ಏನು ಧರಿಸುವುದಿಲ್ಲ ಅಂತ ತಿಳಿದುಕೊಳ್ಳಲು ಮಾಧ್ಯಮಗಳು ಬಯಸುತ್ತವೆ’ ಎಂದು ಅವರು ಹಾಸ್ಯ ಮಾಡಿದ್ದರು. ಅದರಿಂದ ಉರ್ಫಿ ಜಾವೇದ್ ಸಿಟ್ಟಾಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.