Urfi Javed: ‘ನಾನು ನಿನ್ನ ಮಗಳಾ?’: ಬಟ್ಟೆ ಬಗ್ಗೆ ಬುದ್ಧಿ ಹೇಳಲು ಬಂದ ವ್ಯಕ್ತಿಗೆ ತಿರುಗೇಟು ನೀಡಿದ ಉರ್ಫಿ ಜಾವೇದ್
Urfi Javed Viral Video: ‘ಇಂಥ ಬಟ್ಟೆ ಧರಿಸಿ ಭಾರತದ ಹೆಸರು ಹಾಳು ಮಾಡ್ತೀರಲ್ಲ..’ ಎಂದು ವ್ಯಕ್ತಿಯೊಬ್ಬರು ಬುದ್ಧಿಮಾತು ಹೇಳಿದ್ದಾರೆ. ಅದು ಉರ್ಫಿ ಜಾವೇದ್ಗೆ ಇಷ್ಟ ಆಗಿಲ್ಲ. ಬುದ್ಧಿಮಾತು ಹೇಳಲು ಬಂದ ವ್ಯಕ್ತಿ ವಿರುದ್ಧ ಅವರು ಗರಂ ಆಗಿದ್ದಾರೆ.
ನಟಿ ಉರ್ಫಿ ಜಾವೇದ್ (Urfi Javed) ಅವರ ಒಂದಿಲ್ಲೊಂದು ವಿಡಿಯೋ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಅವರು ಸುದ್ದಿ ಆಗುವುದೇ ಬಟ್ಟೆಗಳ ಕಾರಣಕ್ಕೆ ಎಂದರೆ ತಪ್ಪಿಲ್ಲ. ಪ್ರತಿ ದಿನ ಅವರು ಚಿತ್ರ ವಿಚಿತ್ರವಾದ ಬಟ್ಟೆ (Urfi Javed Dress) ಧರಿಸಿ ಪೋಸ್ ನೀಡುತ್ತಾರೆ. ತುಂಬ ಬೋಲ್ಡ್ ಆದಂತಹ ಫೋಟೋಗಳನ್ನು (Urfi Javed Photo) ಅವರು ಹಂಚಿಕೊಳ್ಳುತ್ತಾರೆ. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದ್ದೇ ಹೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರ ಬಟ್ಟೆ ಬಗ್ಗೆ ಟ್ರೋಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಅವರಿಗೆ ವ್ಯಕ್ತಿಯೊಬ್ಬರು ಬುದ್ಧಿಮಾತು ಹೇಳಲು ಬಂದಿದ್ದಾರೆ. ಆ ವ್ಯಕ್ತಿಗೆ ಉರ್ಫಿ ಜಾವೇದ್ ಅವರು ಸ್ಥಳದಲ್ಲೇ ತಿರುಗೇಟು ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್ ಅವರು ಕಾಣಿಸಿಕೊಂಡರು. ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ಪಾಪರಾಜಿಗಳು ಮುತ್ತಿಕೊಂಡರು. ಉರ್ಫಿಯ ಬಟ್ಟೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಕೋಪಗೊಂಡಿದ್ದಾರೆ. ‘ಇಂಥ ಬಟ್ಟೆ ಧರಿಸಿ ಭಾರತದ ಹೆಸರು ಹಾಳು ಮಾಡ್ತೀರಲ್ಲ..’ ಎಂದು ಆ ವ್ಯಕ್ತಿ ಬುದ್ಧಿಮಾತು ಹೇಳಿದ್ದಾರೆ. ಅದು ಉರ್ಫಿ ಜಾವೇದ್ಗೆ ಇಷ್ಟ ಆಗಿಲ್ಲ. ಬುದ್ಧಿಮಾತು ಹೇಳಲು ಬಂದ ವ್ಯಕ್ತಿ ವಿರುದ್ಧ ಉರ್ಫಿ ಜಾವೇದ್ ಅವರು ಗರಂ ಆಗಿದ್ದಾರೆ.
View this post on Instagram
‘ನಾನು ನಿನ್ನ ಮಗಳಾ? ಅಲ್ಲಾ ತಾನೇ? ನನಗೆ ಅಪ್ಪನಾಗಲು ಬರಬೇಡ’ ಎಂದು ಉರ್ಫಿ ಜಾವೇದ್ ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಉರ್ಫಿ ಜಾವೇದ್ಗೆ ಬೆಂಬಲ ನೀಡುತ್ತಿದ್ದಾರೆ. ಯಾವ ರೀತಿ ಬಟ್ಟೆ ಧರಿಸಬೇಕು ಎಂಬ ಸ್ವತಂತ್ರ್ಯ ಉರ್ಫಿ ಜಾವೇದ್ಗೆ ಇದೆ ಎಂದು ನೆಟ್ಟಿಗರು ಸಪೋರ್ಟ್ ಮಾಡಿದ್ದಾರೆ. ಇನ್ನೂ ಕೆಲವರು ಎಂದಿನಂತೆ ಉರ್ಫಿ ಜಾವೇದ್ಗೆ ಕಮೆಂಟ್ಗಳ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ಟೊಮ್ಯಾಟೋವನ್ನೇ ಆಭರಣವಾಗಿ ಧರಿಸಿದ ಉರ್ಫಿ ಜಾವೇದ್; ಇದೇ ಈಗ ಬಂಗಾರ
ಹಿಂದಿ ಕಿರುತೆರೆಯಲ್ಲಿ ಮಿಂಚಬೇಕು ಎಂಬುದು ಉರ್ಫಿ ಜಾವೇದ್ ಅವರ ಆಸೆ ಆಗಿತ್ತು. ಅದಕ್ಕೆ ತಕ್ಕಂತೆ ಅವರಿಗೆ ಅವಕಾಶ ಸಿಗಲಿಲ್ಲ. ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ನಲ್ಲಿ ಸ್ಪರ್ಧಿಸಿದ ಬಳಿಕ ಅವರಿಗೆ ಖ್ಯಾತಿ ಹೆಚ್ಚಿತು. ಆದರೆ ಅದರ ನಂತರ ಅವರಿಗೆ ಸಿನಿಮಾದಲ್ಲಾಗಲೀ, ಸೀರಿಯಲ್ನಲ್ಲಾಗಲೀ ಅವಕಾಶ ಸಿಗಲಿಲ್ಲ. ಅದರ ಬದಲು ಬೋಲ್ಡ್ ಆದಂತಹ ಬಟ್ಟೆಗಳನ್ನು ಧರಿಸಿ ಪೋಸ್ ನೀಡುವುದನ್ನೇ ಅವರು ನಿತ್ಯದ ಕಾಯಕ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.