AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್

ಹತ್ಯಾಕಾಂಡದ ಕ್ರೂರತೆ ಬಗ್ಗೆ ಅನೇಕ ಸಿನಿಮಾಗಳು ಬಂದು ಹೋಗಿವೆ. ‘ಬವಾಲ್’ ಚಿತ್ರದಲ್ಲೂ ಈ ಬಗ್ಗೆ ಉಲ್ಲೇಖ ಇದೆ. ಆದರೆ, ಅನೇಕರು ಇದನ್ನು ಟೀಕೆ ಮಾಡಿದ್ದರು.

ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್
ವರುಣ್-ಜಾನ್ವಿ
ರಾಜೇಶ್ ದುಗ್ಗುಮನೆ
|

Updated on:Jul 26, 2023 | 11:47 AM

Share

ವರುಣ್ ಧವನ್ (Varun Dhawan) ಹಾಗೂ ಜಾನ್ವಿ ಕಪೂರ್ ನಟನೆಯ ‘ಬವಾಲ್’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ನೇರವಾಗಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ನಡೆದ ಹತ್ಯಾಕಾಂಡದ ಉಲ್ಲೇಖವೂ ಈ ಚಿತ್ರದಲ್ಲಿದೆ. ಆದರೆ, ಇದನ್ನು ಸರಿಯಾಗಿ ಬಳಕೆ ಮಾಡಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಿದೆ. ಇದಕ್ಕೆ ವರುಣ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಆಪನ್​ಹೈಮರ್’ ಸಿನಿಮಾದ (Oppenheimer) ದೃಶ್ಯ ಉಲ್ಲೇಖಿಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎರಡನೇ ಮಹಾಯುದ್ಧದ ಸಂದರ್ಭದ ಸಾಕಷ್ಟು ಯಹೂದಿಗಳನ್ನು ಹಿಟ್ಲರ್ ಕೊಲ್ಲಿಸಿದ್ದ. ಮಕ್ಕಳು, ಹೆಂಗಸರು, ವೃದ್ಧರನ್ನು ಬೆತ್ತಲೆಗೊಳಿಸಿ ಗ್ಯಾಸ್​ ಚೇಂಬರ್​ನಲ್ಲಿ ಕೂಡಿಹಾಕಿ, ಅದರೊಳಗೆ ವಿಷಾನಿಲವನ್ನು ಹರಿಸಿ ಹತ್ಯೆ ಮಾಡಿದ್ದ. ಈ ಹತ್ಯಾಕಾಂಡದ ಕ್ರೂರತೆ ಬಗ್ಗೆ ಅನೇಕ ಸಿನಿಮಾಗಳು ಬಂದು ಹೋಗಿವೆ. ‘ಬವಾಲ್’ ಚಿತ್ರದಲ್ಲೂ ಈ ಬಗ್ಗೆ ಉಲ್ಲೇಖ ಇದೆ. ಆದರೆ, ಅನೇಕರು ಇದನ್ನು ಟೀಕೆ ಮಾಡಿದ್ದರು. ಸೆನ್ಸಿಬಲ್ ಆಗಿ ಅದನ್ನು ಬಳಸಿಲ್ಲ ಎಂದು ಕೆಲವರು ಕಿಡಿಕಾರಿದ್ದರು. ಈ ಬಗ್ಗೆ ವರುಣ್ ಧವನ್ ಮಾತನಾಡಿದ್ದಾರೆ.

‘ನಮ್ಮ ಸಿನಿಮಾದಲ್ಲಿ ಬರುವ ದೃಶ್ಯದ ಬಗ್ಗೆ ಕೆಲವರು ಟ್ರಿಗರ್ ಆಗಿದ್ದಾರೆ. ಆದರೆ, ಇಂಗ್ಲಿಷ್ ಸಿನಿಮಾಗಳನ್ನು ನೋಡುವಾಗ ಈ ಸೆನ್ಸಿಟಿವಿಟಿ ಎಲ್ಲಿ ಹೋಗಿರುತ್ತದೆ? ಅವರಿಗೆ ಎಲ್ಲವನ್ನೂ ಮಾಡುವ ಹಕ್ಕಿದೆ. ಆದರೆ ನಿಮಗೆ ಅದು ಸರಿ ಎನಿಸುತ್ತದೆ’ ಎಂದಿದ್ದಾರೆ ವರುಣ್ ಧವನ್.

‘ಇತ್ತೀಚೆಗೆ ರಿಲೀಸ್ ಒಂದು ಅದ್ಭುತ ಸಿನಿಮಾದ ಸಣ್ಣ ದೃಶ್ಯ ನೋಡಿ ಅನೇಕರು ಟ್ರಿಗರ್ ಆದರು. ನಮ್ಮ ದೇಶ ಹಾಗೂ ನಮ್ಮ ಸಂಸ್ಕೃತಿಗೆ ಆ ವಿಚಾರ ತುಂಬಾನೇ ಮುಖ್ಯವಾದುದು. ಆದರೆ, ಅದು ಅನೇಕರಿಗೆ ಸರಿ ಎನಿಸಿದೆ. ಅವರು ಹೆಚ್ಚು ಸೆನ್ಸಿಬಲ್ ಆಗಿರಬೇಕು ಎಂದು ಅನಿಸುತ್ತಿಲ್ಲವೇ? ನಿಮ್ಮ ಟೀಕೆ ಎಲ್ಲಿ ಹೋಯಿತು’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.

ಇದನ್ನೂ ಓದಿ: Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್​ಹೈಮರ್’ ಸಿನಿಮಾವನ್ನು ಅನೇಕರು ಟೀಕೆ ಮಾಡಿದ್ದರು. ಈ ಚಿತ್ರದಲ್ಲಿ ಯುವತಿಯೊಬ್ಬಳು ಲೈಂಗಿಕ ಕ್ರಿಯೆ ನಡೆಸುವ ವೇಳೆ ಭಗವದ್ಗೀತೆ ಪುಸ್ತಕ ಹಿಡಿದುಕೊಳ್ಳುತ್ತಾಳೆ. ಅನೇಕರು ಇದನ್ನು ಟೀಕೆ ಮಾಡಿದ್ದರು. ಈ ದೃಶ್ಯ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:45 am, Wed, 26 July 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?