Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​

Nitesh Tiwari: ‘ಬವಾಲ್​’ ಸಿನಿಮಾದ ಟೀಸರ್​ನ ಆರಂಭದಲ್ಲಿ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಆದರೆ ಟೀಸರ್​ನ ಕೊನೆಯಲ್ಲಿ ಗ್ಯಾಸ್​ ಚೇಂಬರ್​ನ ಭೀಕರ ದೃಶ್ಯ ಕಾಣಿಸುತ್ತದೆ.

Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​
‘ಬವಾಲ್​’ ಸಿನಿಮಾದ ಟೀಸರ್​ನಲ್ಲಿನ ದೃಶ್ಯ
Follow us
ಮದನ್​ ಕುಮಾರ್​
|

Updated on: Jul 05, 2023 | 6:36 PM

ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಅವರು ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದ್ದಾರೆ. ಆಮಿರ್​ ಖಾನ್​ ನಟನೆಯ ‘ದಂಗಲ್​’, ಸುಶಾಂತ್​ ಸಿಂಗ್ ರಜಪೂತ್​ ಅಭಿನಯದ ‘ಚಿಚೋರೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೇ ನಿತೇಶ್​ ತಿವಾರಿ. ಇತ್ತೀಚಿನ ಕೆಲವು ದಿನಗಳಿಂದ ಅವರು ಹೆಚ್ಚು ಸುದ್ದಿ ಆಗಿದ್ದು ರಾಮಾಯಣ ಆಧರಿಸಿ ಸಿನಿಮಾದ ಗಾಸಿಪ್​ಗಳಿಂದ. ಆದರೆ ಈಗ ಅವರ ಹೊಸ ಸಿನಿಮಾ ‘ಬವಾಲ್​’ ಬಗ್ಗೆ ಹೈಪ್​ ಕ್ರಿಯೇಟ್​ ಆಗಿದೆ. ‘ಬವಾಲ್​’ ಸಿನಿಮಾದ (Bawaal Movie) ಟೀಸರ್​ ಬಿಡುಗಡೆ ಆಗಿದ್ದು, ಹೊಸ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ವರುಣ್​ ಧವನ್​ ಮತ್ತು ಜಾನ್ವಿ ಕಪೂರ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಗ್ಯಾಸ್​ ಚೇಂಬರ್​ ಹತ್ಯಾಕಾಂಡದ (Holocaust) ಬಗ್ಗೆ ಹೇಳಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಎರಡನೇ ಮಹಾಯುದ್ಧದ ಸಂದರ್ಭಗಳಲ್ಲಿ ಲಕ್ಷಾಂತರ ಯಹೂದಿಗಳನ್ನು ಹತ್ಯೆ ಮಾಡಲಾಗಿತ್ತು. ಹೆಂಗಸರು, ಮಕ್ಕಳು, ವೃದ್ಧರು ಎಂಬ ಕರುಣೆಯೂ ಇಲ್ಲದೇ ಎಲ್ಲರನ್ನೂ ಬೆತ್ತಲೆಗೊಳಿಸಿ ಗ್ಯಾಸ್​ ಚೇಂಬರ್​ನಲ್ಲಿ ಕೂಡಿಹಾಕಿ, ಅದರೊಳಗೆ ವಿಷಾನಿಲವನ್ನು ಹರಿಸುವ ಮೂಲಕ ಹತ್ಯಾಕಾಂಡ ನಡೆಸಲಾಗಿತ್ತು. ಆ ದುರಂತದ ಬಗ್ಗೆ ಹೇಳಿದರೆ ಇಡೀ ಮನುಷ್ಯ ಕುಲವೇ ಬೆಚ್ಚಿ ಬೀಳುತ್ತದೆ. ಈಗ ‘ಬವಾಲ್​’ ಸಿನಿಮಾದ ಕಥೆ ಕೂಡ ಇಂಥ ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಹಿನ್ನೆಲೆಯನ್ನು ಸಾಗುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

‘ಬವಾಲ್​’ ಸಿನಿಮಾದ ಟೀಸರ್​ನ ಆರಂಭದಲ್ಲಿ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಆದರೆ ಟೀಸರ್​ನ ಕೊನೆಯಲ್ಲಿ ಗ್ಯಾಸ್​ ಚೇಂಬರ್​ನ ಭೀಕರ ದೃಶ್ಯ ಕಾಣಿಸುತ್ತದೆ. ಅದನ್ನು ಕಪ್ಪು-ಬಿಳುಪಿನಲ್ಲಿ ತೋರಿಸಲಾಗಿದೆ. ಗ್ಯಾಸ್​ ಚೇಂಬರ್​ ಒಳಗೆ ಸಿಲುಕಿದ ಜಾನ್ವಿ ಕಪೂರ್​ ಮತ್ತು ವರುಣ್​ ಧವನ್​ ಅವರು ಕೂಗಾಡುವ ದೃಶ್ಯ ಇದರಲ್ಲಿ ಇದೆ. ಆ ಕಾರಣದಿಂದ ‘ಬವಾಲ್​’ ಚಿತ್ರದ ಟೀಸರ್​ ವೈರಲ್​ ಆಗಿದೆ.

ಇದನ್ನೂ ಓದಿ: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 104 ವರ್ಷ, ಬೈಸಾಕಿ ಯುಗಾದಿ ದಿನ ನಡೆದಿದ್ದು ಮಾರಣಹೋಮ

ಯಹೂದಿಗಳ ಹತ್ಯಾಕಾಂಡದ ವಿಷಯವನ್ನು ಇಟ್ಟುಕೊಂಡು ನಿತೇಶ್​​ ತಿವಾರಿ ಅವರು ಪ್ರೇಮಕಥೆಯ ಸಿನಿಮಾ ಮಾಡುತ್ತಾರೆ ಎಂದಾದರೆ ಅದಕ್ಕೆ ಬಹಳ ಪ್ರಬುದ್ಧತೆ ಬೇಕಾಗುತ್ತದೆ. ಪ್ರಪಂಚದ ಎದುರಿನಲ್ಲಿ ನಗೆಪಾಟಲಿಗೆ ಒಳಗಾಗುವಂತೆ ಮಾಡಬಾರದು ಎಂದು ಒಂದು ವರ್ಗದ ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ. ನಿತೇಶ್​ ತಿವಾರಿ ಅವರಿಗೆ ಸೂಕ್ಷ್ಮತೆಗಳು ಅರ್ಥ ಆಗುತ್ತವೆ. ಅವರ ಹಿಂದಿನ ಸಿನಿಮಾಗಳೇ ಅದಕ್ಕೆ ಸಾಕ್ಷಿ ಎಂದು ಇನ್ನೊಂದು ವರ್ಗದ ನೆಟ್ಟಿಗರು ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

ಜುಲೈ 21ರಂದು ನೇರವಾಗಿ ಅಮೇಜಾನ್​ ಪ್ರೈಂ ವಿಡಿಯೋ ಒಟಿಟಿ ಮೂಲಕ ‘ಬವಾಲ್​’ ಸಿನಿಮಾ ಬಿಡುಗಡೆ ಆಗಲಿದೆ. ಸಾಜಿದ್​ ನಾಡಿಯದ್ವಾಲಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾರಿಸ್​, ಬರ್ಲಿನ್​, ಪೋಲ್ಯಾಂಡ್​, ಆಮ್​ಸ್ಟರ್​​ಡ್ಯಾಮ್​, ವಾರ್​ಸಾ, ಲಖನೌ ಮುಂತಾದ ಕಡೆಗಳಲ್ಲಿ ಈ ಸಿನಿಮಾವನ್ನು ಚಿತ್ರಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್