AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jallianwala Bagh Massacre: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 104 ವರ್ಷ, ಬೈಸಾಕಿ ಯುಗಾದಿ ದಿನ ನಡೆದಿದ್ದು ಮಾರಣಹೋಮ

ಪಂಜಾಬ್​ನ ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್​(Jallianwala Bagh )ನ ಉದ್ಯಾನದಲ್ಲಿ ನಡೆದ ಹತ್ಯಾಕಾಂಡ ಘಟನೆಗೆ ಬರೋಬ್ಬರಿ 104 ವರ್ಷ.

Jallianwala Bagh Massacre: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 104 ವರ್ಷ, ಬೈಸಾಕಿ ಯುಗಾದಿ ದಿನ ನಡೆದಿದ್ದು ಮಾರಣಹೋಮ
ಜಲಿಯನ್ ವಾಲಾ ಬಾಗ್
ನಯನಾ ರಾಜೀವ್
|

Updated on: Apr 13, 2023 | 9:29 AM

Share

ಪಂಜಾಬ್​ನ ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್​(Jallianwala Bagh )ನ ಉದ್ಯಾನದಲ್ಲಿ ನಡೆದ ಹತ್ಯಾಕಾಂಡ ಘಟನೆಗೆ ಬರೋಬ್ಬರಿ 104 ವರ್ಷ. ದೇಶದ ಇತಿಹಾದಲ್ಲಿ ಕಂಡು ಕೇಳರಿಯದ ಭೀಕರ ಹತ್ಯಾಕಾಂಡ ಇದಾಗಿತ್ತು. ಅದು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬದ ದಿನವೇ ಈ ಹತ್ಯಾಕಾಂಡ ನಡೆದಿತ್ತು.

1919ರ ಏಪ್ರಿಲ್ 13 ರಂದು ನಡೆದಿದ್ದೇನು? ಅಂದು ಎಲ್ಲೆಲ್ಲೂ ಯುಗಾದಿ ಸಂಭ್ರಮ ಮನೆ ಮಾಡಿತ್ತು. ಅಂದು ಪಂಜಾಬ್​ನಲ್ಲಿ ಸಿಖ್ಖರು ಬೈಸಾಕಿ ಹಬ್ಬ ಆಚರಿಸಲು ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್​ನಲ್ಲಿರುವ ಉದ್ಯಾನದಲ್ಲಿ ಪುರುಷರು, ಮಹಿಳೆಯರು, ಹಿರಿಯರು ಮಕ್ಕಳು ಎಲ್ಲರೂ ಆಗಮಿಸಿದ್ದರು. ಸಂವಹನ ತಂತ್ರಜ್ಞಾನದಲ್ಲಿ ತುಂಬಾ ಹಿಂದುಳಿದಿದ್ದ ಪಂಜಾಬ್​ನಲ್ಲಿ ಗ್ರಾಮೀಣ ಪ್ರದೇಶದಿಂದ ಪಂಜಾಬಿನಲ್ಲಿ ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿ ಏನೂ ಲಭ್ಯವಾಗುತ್ತಿರಲಿಲ್ಲ. ಶಾಸನಬದ್ಧವಾಗಿ ಅಂದು ಅಮೃತಸರದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ ಎಂದು ಬ್ರಿಟಿಷ್ ಸರ್ಕಾರ ಆದೇಶ ಹೊರಡಿಸಿತ್ತು.

ಈ ವೇಳೆ ಶಸ್ತ್ರಸಜ್ಜಿತವಾದ ಬ್ರಿಟಿಷ್ ಸೈನಿಕರ ತುಕಡಿ ಉದ್ಯಾನಕ್ಕೆ ಬಂದಿತ್ತು, ಮಷಿನ್ ಗನ್ ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನದ ಕಡಿದಾದ ದ್ವಾರದಿಂದ  ಬರುವುದು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾಗಿದ್ದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್​ ಡೈಯರ್ ಯಾವುದೇ ಎಚ್ಚರಿಕೆಯನ್ನು ಮುಂಚಿತವಾಗಿ ನೀಡದೇ ಉದ್ಯಾನಕ್ಕೆ ಪ್ರವೇಶಿಸಿ ಗುಂಡಿನ ದಾಳಿ ನಡೆಸುವಂತೆ ಆದೇಶಿಸಿದ್ದ ನೀಡಿಬಿಟ್ಟಿದ್ದ.

ಸುಮಾರು 15 ನಿಮಿಷಗಳ ಕಾಲ ಸತತವಾಗಿ ಗುಂಡಿನ ದಾಳಿ ನಡೆಸಿದ್ದರು, ಜೀವ ಭಯದಿಂದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದ್ದರು. ಸಾಕಷ್ಟು ಮಂದಿ ಬಾವಿಯೊಳಗೆ ಹಾರಿದ್ದರಂತೆ, ಬಾವಿಯೊಳಗಿಂದ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು.

ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಅಂದು ಸಾವನ್ನಪ್ಪಿದ್ದರು. ಆದರೆ ಅನಧಿಕೃತ ವರದಿ ಪ್ರಕಾರ ಸಾವಿರಾರು ಮಂದಿ ಮೃತಪಟ್ಟಿದ್ದರು. ಡೈಯರ್​ನ ಈ ಕೃತ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾದ ಕಾರಣ 1920ರಲ್ಲಿ ಆತ ರಾಜೀನಾಮೆ ನೀಡಿದ್ದ, ಉದಮ್ ಸಿಂಗ್ ಅವರು ಹತ್ಯಾಕಾಂಡದ ಹಿಂದಿನ ರೂವಾರಿ ಎನ್ನಲಾಗಿದ್ದ ಮೈಕೇಲ್ ಓಡೈರ್​ನನ್ನು ಲಂಡನ್​ನಲ್ಲಿ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದರು. ಬಳಿಕ ಉದಮ್ ಸಿಂಗ್ ಅವರನ್ನು ನೇಣುಗಂಬಕ್ಕೆ ಏರಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​