Maharashtra Politics: ಅಜಿತ್ ಪವಾರ್‌ಗೆ ಎನ್‌ಸಿಪಿಯೊಂದಿಗೆ ಉಜ್ವಲ ಭವಿಷ್ಯವಿದೆ ಎಂದೂ ಬಿಜೆಪಿ ಸೇರುವುದಿಲ್ಲ: ಸಂಜಯ್ ರಾವತ್
ಅಜಿತ್ ಪವಾರ್(Ajit Pawar)ಗೆ ಎನ್‌ಸಿಪಿಯೊಂದಿಗೆ ಉಜ್ವಲ ಭವಿಷ್ಯವಿದೆ ಅವರು ಎಂದೂ ಬಿಜೆಪಿಗೆ ಸೇರುವುದಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut)ಹೇಳಿದ್ದಾರೆ.
ಅಜಿತ್ ಪವಾರ್(Ajit Pawar)ಗೆ ಎನ್‌ಸಿಪಿಯೊಂದಿಗೆ ಉಜ್ವಲ ಭವಿಷ್ಯವಿದೆ ಅವರು ಎಂದೂ ಬಿಜೆಪಿಗೆ ಸೇರುವುದಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut)ಹೇಳಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಪಕ್ಷದಿಂದ ಇಲ್ಲಿಯವರೆಗೂ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ, ಅವರು ಬಿಜೆಪಿಗೆ ಹೋಗುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದರು. ಎನ್‌ಸಿಪಿಯೊಂದಿಗೆ ಅಜಿತ್ ಪವಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ, ಆದ್ದರಿಂದ ಚಿಂತಿಸಬೇಕಾಗಿಲ್ಲ,ಬಿಜೆಪಿಯ ಗುಲಾಮನಾಗುವುದಿಲ್ಲ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ಅಜಿತ್ ಪವಾರ್ ಮತ್ತು ನಾನಾ ಪಟೋಲೆ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಮೇ 16 ರಂದು ನಾಗ್ಪುರದಲ್ಲಿ ರ್ಯಾಲಿಯನ್ನು ಹೊಂದಿದ್ದೇವೆ. ನಾನು ಮತ್ತು ಉದ್ಧವ್ ಠಾಕ್ರೆ ಶರದ್ ಪವಾರ್ ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ. ನಮ್ಮ ಸಂಬಂಧ ಫೆವಿಕಾಲ್‌ನಂತಿದೆ, ಅದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತಷ್ಟು ಓದಿ: ಸಂಜಯ್ ರಾವತ್ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಜೀವ ಬೆದರಿಕೆ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಸ್ವಾಗತಿಸಿದ್ದಾರೆ. ಪ್ರತಿಪಕ್ಷದ ನಾಯಕನಾಗಿ ನಾವು ಒಟ್ಟಿಗೆ ಇದ್ದೇವೆ ಎಂದರು. ಕಾಂಗ್ರೆಸ್ ರಾಹುಲ್ ಗಾಂಧಿ ಮತ್ತು ಖರ್ಗೆ ಅವರನ್ನು ಭೇಟಿ ಮಾಡಿದ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ.
ಇದು ಒಗ್ಗಟ್ಟಿನತ್ತ ಸಕಾರಾತ್ಮಕ ಹೆಜ್ಜೆಯಾಗಿದೆ, ಎಲ್ಲಾ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಲಿವೆ ಎಂದಿದ್ದಾರೆ. ಅಜಿತ್ ಪವಾರ್ ಬುಧವಾರ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗಳು ಮಹಾ ವಿಕಾಸ್ ಅಘಾಡಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ