ಸಂಜಯ್ ರಾವತ್‌ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ
Sanjay Raut : ಬೆದರಿಕೆ ಕರೆ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದೇನೆ, ಆದರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಿನ್ನೆ ರಾತ್ರಿ ನನಗೆ ಕರೆ ಬಂದಿತ್ತು. ಇಂತಹ ಬೆದರಿಕೆಗಳ ಬಗ್ಗೆ ನಾನು ಸರ್ಕಾರ ಮತ್ತು ಗೃಹ ಸಚಿವರಿಗೆ ತಿಳಿಸಿದಾಗ ಅವರು ಅದನ್ನು ಸ್ಟಂಟ್ ಎಂದು ಅಣಕಿಸುತ್ತಾರೆ ಎಂದ ರಾವುತ್
ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರನ್ನು ಬಳಸಿ ಕೊಲೆ ಬೆದರಿಕೆ (Death Threat)ಹಾಕಿದ್ದಕ್ಕೆ ಸಂಬಂಧಿಸಿದಂತೆ ಪುಣೆಯಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನವದೆಹಲಿಯಲ್ಲಿ ಕಾಣಸಿಕ್ಕರೆ ಎಕೆ-47 ರೈಫಲ್‌ನಿಂದ ಗುಂಡು ಹಾರಿಸುವುದಾಗಿ ರಾವತ್‌ಗೆ ಸಂದೇಶಗಳು ಮತ್ತು ಕರೆ ಮೂಲಕ ಬೆದರಿಕೆ ಬಂದಿತ್ತು. ಈ ಸಂಬಂಧ ಶಿವಸೇನಾ(ಯುಬಿಟಿ) ನಾಯಕ ದೂರು ದಾಖಲಿಸಿದ್ದರು.
ಬೆದರಿಕೆ ಕರೆ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದೇನೆ, ಆದರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಿನ್ನೆ ರಾತ್ರಿ ನನಗೆ ಕರೆ ಬಂದಿತ್ತು. ಇಂತಹ ಬೆದರಿಕೆಗಳ ಬಗ್ಗೆ ನಾನು ಸರ್ಕಾರ ಮತ್ತು ಗೃಹ ಸಚಿವರಿಗೆ ತಿಳಿಸಿದಾಗ ಅವರು ಅದನ್ನು ಸ್ಟಂಟ್ ಎಂದು ಅಣಕಿಸುತ್ತಾರೆ. ಗಲಭೆ, ಗೂಂಡಾಗಿರಿ ಮತ್ತು ಭಯೋತ್ಪಾದನೆಯನ್ನು ಪ್ರಾಯೋಜಿಸುವಲ್ಲಿ ಸರ್ಕಾರ ನಿರತವಾಗಿದೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ರಾವುತ್ ಹೇಳಿದ್ದಾರೆ.
ಬೆಳವಣಿಗೆಯನ್ನು ದೃಢೀಕರಿಸಿದ ಪೊಲೀಸ್ ಅಧಿಕಾರಿ, ಸಿದ್ದು ಮೂಸೆವಾಲಾನ ಸ್ಥಿತಿಯೇ ನಿಮಗೆ ಆಗಲಿದೆ ಎಂದು ಸಂಜಯ್ ರಾವತ್ ಅವರಿಗೆ ಜೀವ ಬೆದರಿಕೆಗಳು ಬಂದಿವೆ. ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಬಂದಿತ್ತು. ದೆಹಲಿಯಲ್ಲಿ ಭೇಟಿಯಾದರೆ ಎಕೆ-47 ಹಿಡಿದು ಸಾಯಿಸುತ್ತೇನೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ರಾವುತ್ ದೂರು ನೀಡಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:Defence Exports: ದಾಖಲೆ ಮಟ್ಟದಲ್ಲಿ ರಕ್ಷಣಾ ರಫ್ತು; ರಾಜನಾಥ್ ಸಿಂಗ್, ಮೋದಿ ಹರ್ಷ
ಈ ಹಿಂದೆ ಸಲ್ಮಾನ್ ಖಾನ್ಗೂ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿತ್ತು. ಬೆದರಿಕೆ ಕರೆಯಲ್ಲಿ ಸಿಧು ಮೂಸೆವಾಲನಂಥ ಸ್ಥಿತಿಯೇ ನಿನ್ನದೂ ಆಗಲಿದೆ ಎಂದು ಹೇಳಲಾಗಿತ್ತು. ಆರೋಪಿ, ರಾಜಸ್ಥಾನದ ಜೋಧಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್ ಎಂಬಾತನನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ