Citadel: ಸೆರ್ಬಿಯಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸಮಂತಾ, ವರುಣ್​ ಧವನ್​; ಫೋಟೋ ವೈರಲ್​

Droupadi Murmu; ‘ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅವಕಾಶ ಸಿಟಾಡೆಲ್​ ತಂಡಕ್ಕೆ ಸಿಕ್ಕಿತು. ಅವರನ್ನು ಭೇಟಿಯಾಗಿದ್ದಕ್ಕೆ ಹೆಮ್ಮೆ ಮತ್ತು ಖುಷಿ ಆಗಿದೆ’ ಎಂದು ವರುಣ್​ ಧವನ್​ ಅವರು ಬರೆದುಕೊಂಡಿದ್ದಾರೆ.

Citadel: ಸೆರ್ಬಿಯಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸಮಂತಾ, ವರುಣ್​ ಧವನ್​; ಫೋಟೋ ವೈರಲ್​
ವರುಣ್​ ಧವನ್​, ದ್ರೌಪದಿ ಮುರ್ಮು, ಸಮಂತಾ ರುತ್​ ಪ್ರಭು
Follow us
ಮದನ್​ ಕುಮಾರ್​
|

Updated on: Jun 08, 2023 | 9:48 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಮತ್ತು ನಟ ವರುಣ್​ ಧವನ್​ ಅವರು ‘ಸಿಟಾಡೆಲ್​’ ವೆಬ್​ ಸರಣಿಯ ಇಂಡಿಯನ್ ವರ್ಷನ್​ನಲ್ಲಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ವಿವಿಧ ದೇಶಗಳಲ್ಲಿ ನಡೆಯುತ್ತಿದೆ. ಈ ತಂಡ ಈಗ ಸೆರ್ಬಿಯಾದಲ್ಲಿ ಶೂಟಿಂಗ್​ ಮಾಡುತ್ತಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸೆರ್ಬಿಯಾಗೆ ಭೇಟಿ ನೀಡಿದ್ದಾರೆ. ಹಾಗಾಗಿ ಅಲ್ಲಿ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ‘ಸಿಟಾಡೆಲ್​’ ತಂಡಕ್ಕೆ ಸಿಕ್ಕಿದೆ. ಎಲ್ಲರೂ ಖುಷಿಯಿಂದ ದ್ರೌಪದಿ ಮುರ್ಮು ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ವರುಣ್​ ಧವನ್ (Varun Dhawan) ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಖುಷಿಯಿಂದ ಕಮೆಂಟ್​ ಮಾಡುತ್ತಿದ್ದಾರೆ.

ವರುಣ್​ ಧವನ್​ ಅಪ್​ಲೋಡ್​ ಮಾಡಿರುವ ಫೋಟೋವನ್ನು ಸಮಂತಾ ರುತ್​ ಪ್ರಭು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಮೇಡಂ ಪ್ರೆಸಿಡೆಂಟ್​’ ಎಂಬ ಕ್ಯಾಪ್ಷನ್​ ಜೊತೆಗೆ ಕೈ ಮುಗಿಯುತ್ತಿರುವ ಎಮೋಜಿಯನ್ನು ಅವರು ಪೋಸ್ಟ್​ ಮಾಡಿದ್ದಾರೆ. ‘ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಸೆರ್ಬಿಯಾದಲ್ಲಿ ಭೇಟಿಯಾಗುವ ಅವಕಾಶ ನಮ್ಮ ಸಿಟಾಡೆಲ್​ ತಂಡಕ್ಕೆ ಸಿಕ್ಕಿತು. ಅವರನ್ನು ಭೇಟಿಯಾಗಿದ್ದಕ್ಕೆ ಹೆಮ್ಮೆ ಮತ್ತು ಖುಷಿ ಆಗಿದೆ’ ಎಂದು ವರುಣ್​ ಧವನ್​ ಅವರು ಬರೆದುಕೊಂಡಿದ್ದಾರೆ.

View this post on Instagram

A post shared by VarunDhawan (@varundvn)

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆ ಆಗಿರುವ ‘ಸಿಟಾಡೆಲ್​’ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಅದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ಅವರು ತೆರೆ ಹಂಚಿಕೊಂಡಿದ್ದಾರೆ. ಇಂಡಿಯನ್​ ವರ್ಷನ್​ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಇಂಗ್ಲಿಷ್​ ‘ಸಿಟಾಡೆಲ್’​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಾಗಾದರೆ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ಅವರು ಆಪ್ತವಾಗಿ ನಟಿಸಿದ್ದಾರಾ? ಇಂಥ ಪ್ರಶ್ನೆ ಮೂಡುವುದು ಸಹಜ. ಆದರೆ ಅವರಿಬ್ಬರ ನಡುವೆ ಅಂಥದ್ದೇನೂ ನಡೆದಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ ‘ಸಿಟಾಡೆಲ್​’ ಇಂಗ್ಲಿಷ್​ ವರ್ಷನ್​ಗೂ ಭಾರತದ ವರ್ಷನ್​ಗೂ ಸಾಕಷ್ಟು ಬದಲಾವಣೆ ಇರಲಿದೆ.

ಇದನ್ನೂ ಓದಿ: Citadel: ‘ಸಿಟಾಡೆಲ್​’ ಪ್ರೀಮಿಯರ್​ ಶೋನಲ್ಲಿ ಮಿಂಚಿದ ಸಮಂತಾ ರುತ್​ ಪ್ರಭು, ವರುಣ್​ ಧವನ್​

‘ಸಿಟಾಡೆಲ್​’ ವೆಬ್​​ ಸಿರೀಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ತುಂಬ ಬೋಲ್ಡ್​ ಆಗಿ ನಟಿಸಿದ್ದಾರೆ. ಆದರೆ ಸಮಂತಾ ರುತ್​ ಪ್ರಭು ಅವರ ಪಾತ್ರಕ್ಕೆ ಟ್ವಿಸ್ಟ್​ ನೀಡಲಾಗಿದೆ. ಹಾಗಾಗಿ ಇಂಡಿಯನ್​ ವರ್ಷನ್​ನ ‘ಸಿಟಾಡೆಲ್​’ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಪ್ರಿಯಾಂಕಾ ನಿಭಾಯಿಸಿದ ಪಾತ್ರಕ್ಕೂ ಸಮಂತಾ ಮಾಡುತ್ತಿರುವ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Hrithik Roshan: ‘ಸಿಟಾಡೆಲ್​’ ವೆಬ್​ ಸಿರೀಸ್​ ನೋಡಿ ಮೆಚ್ಚುಗೆ ಸೂಚಿಸಿದ ಹೃತಿಕ್​ ರೋಷನ್​; ಪ್ರಿಯಾಂಕಾಗೆ ಖುಷಿ

ಸಮಂತಾ ರುತ್​ ಪ್ರಭು ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗಿದ್ದರು. ಅದಕ್ಕೆ ಕಾರಣ ಆಗಿದ್ದು ಅವರ ಇಂಗ್ಲಿಷ್​ ಉಚ್ಛಾರ. ಕೆಲವೇ ದಿನಗಳ ಹಿಂದೆ ‘ಸಿಟಾಡೆಲ್​’ ವೆಬ್​ ಸರಣಿಯ ಪ್ರೀಮಿಯರ್​ ಶೋ ಸಲುವಾಗಿ ಲಂಡನ್​ಗೆ ತೆರಳಿದ್ದ ಅವರು ಅಲ್ಲಿನ ಜನರ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಇದು ನೆಟ್ಟಿಗರಿಗೆ ಸರಿ ಎನಿಸಲಿಲ್ಲ. ಹಾಗಾಗಿ ಸಮಂತಾರನ್ನು ಟೀಕೆ ಮಾಡಲಾಗಿತ್ತು. ಇಂಗ್ಲೆಂಡ್ ಮಂದಿಯ ರೀತಿ ಸಮಂತಾ ಇಂಗ್ಲಿಷ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ