AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jawan Movie: ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ ನಟಿಸಿದ್ದಕ್ಕೆ ಸಿಕ್ತು ಬಲವಾದ ಸಾಕ್ಷಿ; ಸ್ಟಾರ್​ ನಟನ ಸಂಭಾವನೆ ಎಷ್ಟು?

Thalapathy Vijay: ಕಾಲಿವುಡ್​ನಲ್ಲಿ ದಳಪತಿ ವಿಜಯ್​ ಅವರಿಗೆ ಸಖತ್ ಬೇಡಿಕೆ ಇದೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Jawan Movie: ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ ನಟಿಸಿದ್ದಕ್ಕೆ ಸಿಕ್ತು ಬಲವಾದ ಸಾಕ್ಷಿ; ಸ್ಟಾರ್​ ನಟನ ಸಂಭಾವನೆ ಎಷ್ಟು?
ದಳಪತಿ ವಿಜಯ್​, ಅಟ್ಲಿ, ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: Jul 26, 2023 | 7:29 PM

Share

ಬಾಲಿವುಡ್​ನ ಸ್ಟಾರ್​ ಹೀರೋ ಶಾರುಖ್​ ಖಾನ್​ (Shah Rukh Khan) ಅವರು ದಕ್ಷಿಣ ಭಾರತದ ಪ್ರತಿಭಾವಂತರ ಜೊತೆ ಕೈ ಜೋಡಿಸಿರುವುದರಿಂದ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಜೋರಾಗಿದೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಪ್ರಿವ್ಯೂ ವಿಡಿಯೋ ರಿಲೀಸ್​ ಆಗಿ ಧೂಳೆಬ್ಬಿಸಿದೆ. ಈ ಚಿತ್ರದಲ್ಲಿ ಆ್ಯಕ್ಷನ್​ ದೃಶ್ಯಗಳು ಭರ್ಜರಿಯಾಗಿ ಇರಲಿವೆ ಎಂಬುದು ಖಚಿತವಾಗಿದೆ. ಶಾರುಖ್​ ಖಾನ್​ ಜೊತೆ ದಳಪತಿ ವಿಜಯ್​ (Thalapathy Vijay) ಅವರು ‘ಜವಾನ್​’ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಆದರೆ ಚಿತ್ರತಂಡದವರು ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಈಗ ಈ ಸ್ಟಾರ್​ ಹೀರೋಗಳ ಕಾಂಬಿನೇಷನ್​ ಬಗ್ಗೆ ಸುಳಿವು ಸಿಕ್ಕಿದೆ. ಜೊತೆಗೆ ದಳಪತಿ ವಿಜಯ್​ ಅವರ ಸಂಭಾವನೆ (Thalapathy Vijay Remuneration) ಬಗ್ಗೆಯೂ ಅಚ್ಚರಿಯ ಮಾಹಿತಿ ಕೇಳಿಬಂದಿದೆ.

‘ಜವಾನ್​’ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಚಿತ್ರತಂಡದವರು ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಸಾಹಸ ನಿರ್ದೇಶಕರು ನೀಡಿದ ಹೇಳಿಕೆ ವೈರಲ್​ ಆಗಿದೆ. ‘ವಿಜಯ್​ ಮತ್ತು ಶಾರುಖ್​ ಖಾನ್​ ಅವರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳುವ ಮೂಲಕ ಕೌತುಕ ಹೆಚ್ಚಿಸಲಾಗಿದೆ. ಹೆಚ್ಚು ಕೆದಕಿ ಕೇಳಿದಾಗ ‘ದಳಪತಿ ವಿಜಯ್​ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ’ ಎಂದು ಸಾಹಸ ನಿರ್ದೇಶಕರು ಜಾರಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಅದು ದಳಪತಿ ವಿಜಯ್​ ಬಗ್ಗೆಯೇ ಹೇಳಿರುವುದು ಎಂದು ನಂಬಿಕೊಂಡಿದ್ದಾರೆ.

ಇದನ್ನೂ ಓದಿ: Vijay Sethupathi: ಶಾರುಖ್​ ಖಾನ್ ಎದುರು ವಿಲನ್​ ಆಗಿ ನಟಿಸಿದ ವಿಜಯ್​ ಸೇತುಪತಿಗೆ ಸಿಕ್ಕ ಸಂಬಳ ಎಷ್ಟು?

ಕಾಲಿವುಡ್​ನಲ್ಲಿ ದಳಪತಿ ವಿಜಯ್​ ಅವರಿಗೆ ಸಖತ್ ಬೇಡಿಕೆ ಇದೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ‘ಜವಾನ್​’ ಸಿನಿಮಾದಲ್ಲಿ ನಟಿಸಲು ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಶಾರುಖ್​ ಖಾನ್​ ಮತ್ತು ನಿರ್ದೇಶಕ ಅಟ್ಲಿ ಜೊತೆಗೆ ದಳಪತಿ ವಿಜಯ್​ ಅವರಿಗೆ ಉತ್ತಮ ಒಡನಾಟ ಇದೆ. ಆ ಸ್ನೇಹದ ಕಾರಣಕ್ಕಾಗಿ ಅವರು ಉಚಿತವಾಗಿ ನಟಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ: Yash: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

ಸೆಪ್ಟೆಂಬರ್​ 7ರಂದು ‘ಜವಾನ್​’ ಬಿಡುಗಡೆ ಆಗಲಿದೆ. ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಾಗಿ ಸೌತ್​ ಇಂಡಿಯಾದಲ್ಲೂ ಈ ಸಿನಿಮಾ ಅಬ್ಬರಿಸುವ ನಿರೀಕ್ಷೆ ಇದೆ. ಎಲ್ಲ ಪಾತ್ರಧಾರಿಗಳ ಫಸ್ಟ್​ ಲುಕ್​ ಪೋಸ್ಟರ್​ಗಳನ್ನು ಒಂದೊಂದಾಗಿಯೇ ರಿಲೀಸ್​ ಮಾಡುವ ಮೂಲಕ ಕೌತುಕ ಹೆಚ್ಚಿಸುವ ಕೆಲಸ ಆಗುತ್ತಿದೆ. ‘ಪಠಾಣ್​’ ಸಿನಿಮಾದಿಂದ ಭರ್ಜರಿ ಗೆಲವು ಕಂಡಿದ್ದ ಶಾರುಖ್​ ಖಾನ್​ ಅವರು ‘ಜವಾನ್​’ ಮೂಲಕವೂ ಅದೇ ರೀತಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More