ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ

ಅಮಿತಾಭ್ ಅವರು ಮಾಡಿರುವ ಟ್ವೀಟ್​ನ ಸಂಖ್ಯೆ ಈಗ ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಅವರ 26ನೇ ಸಂಖ್ಯೆಯ ಟ್ವೀಟ್ ವೈರಲ್ ಆಗಿದೆ.

ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ
ಅಮಿತಾಭ್
Follow us
ರಾಜೇಶ್ ದುಗ್ಗುಮನೆ
|

Updated on:Jul 27, 2023 | 10:49 AM

ಸೋಶಿಯಲ್ ಮೀಡಿಯಾದಲ್ಲಿ ಎಂದೋ ಬರೆದುಕೊಂಡಿದ್ದ ಸಾಲುಗಳು ಮತ್ತೆ ವೈರಲ್ ಆಗಬಹುದು. ಇದಕ್ಕೆ ಕಾರಣ ಬೇಕಿಲ್ಲ. ಯಾವುದೋ ಸಂದರ್ಭದಲ್ಲಿ ಹಾಕಿದ ಟ್ವೀಟ್​ಗಳನ್ನು ಇಟ್ಟುಕೊಂಡು ದಶಕಗಳ ಬಳಿಕ ಟ್ರೋಲ್ ಮಾಡಲಾಗುತ್ತದೆ. ಈಗ ನಟ ಅಮಿತಾಭ್ ಬಚ್ಚನ್​ಗೂ (Amitabh Bacchan) ಹಾಗೆಯೇ ಆಗಿದೆ. ಟ್ವಿಟರ್ ಖಾತೆ ತೆರೆದ ಸಂದರ್ಭದಲ್ಲಿ ಅವರು ಮಾಡಿದ್ದ ಪೋಲಿ ಟ್ವೀಟ್ ವೈರಲ್ ಆಗಿದೆ. ಅವರು ಈ ಟ್ವೀಟ್ ಮಾಡಿ ದಶಕಗಳೇ ಕಳೆದಿದೆ. ಆದರೂ ಅದನ್ನು ಈಗ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.

ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮದೇ ಆದ ನಿಯಮ ಹಾಕಿಕೊಂಡಿದ್ದಾರೆ. ಪ್ರತೀ ಟ್ವೀಟ್ ಮಾಡುವಾಗಲೂ ಅದಕ್ಕೆ ಅವರು ನಂಬರ್ ನೀಡುತ್ತಾರೆ. ಅವರು ಮಾಡಿರುವ ಟ್ವೀಟ್​ನ ಸಂಖ್ಯೆ ಈಗ ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಅವರ 26ನೇ ಸಂಖ್ಯೆಯ ಟ್ವೀಟ್ ವೈರಲ್ ಆಗಿದೆ.

ಅಮಿತಾಭ್ ಬಚ್ಚನ್ ಅವರು ಜೂನ್ 10, 2010ರ 3:24ಕ್ಕೆ ಟ್ವೀಟ್ ಒಂದನ್ನು ಮಾಡಿದ್ದರು. ‘ಇಂಗ್ಲಿಷ್ ಭಾಷೆಯಲ್ಲಿ ಏಕೆ ‘ಬ್ರಾ’ ಏಕವಚನ ಹಾಗೂ ‘ಪ್ಯಾಂಟೀಸ್’ ಬಹುವಚನ’ ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್​ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ಈ ಟ್ವೀಟ್​ನ ಅವರು ಡಿಲೀಟ್ ಮಾಡಿಲ್ಲ. ಈ ಟ್ವೀಟ್​ನ ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅಮಿತಾಭ್ ಅವರೇ, ಇದೇನಿದು? ಇದುವೇ ನಿಮ್ಮ ಸಭ್ಯತೆಯೇ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಅಂತೂ ಒಬ್ಬರು ಮುಖ್ಯ ಪ್ರಶ್ನೆ ಕೇಳಿದ್ದಾರೆ’ ಎಂದು ಟೀಕಿಸಿದ್ದಾರೆ

ಅಮಿತಾಭ್ ಬಚ್ಚನ್ ಅವರು ಮಾಡಿರುವ ಟ್ವೀಟ್ ಸಂಖ್ಯೆ ಈಗ 4,715 ದಾಟಿದೆ. 4,715  ಟ್ವೀಟ್​ನಲ್ಲಿ ಅವರು ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 15’ ಆರಂಭ ಆಗುವ ಬಗ್ಗೆ ಮಾಹಿತಿ ನೀಡಿದ್ದರು. ಹಲವು ದಶಕಗಳಿಂದ ಅಮಿತಾಭ್ ಅವರು ಈ ಶೋನ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್​ಗೆ ಮತ್ತೆ ಕಾಡಿದೆ ಅನಾರೋಗ್ಯ? ಅಭಿಮಾನಿಗಳಿಗೆ ಮೂಡಿದೆ ಆತಂಕ

ಸಿನಿಮಾ ಕೆಲಸಗಳಲ್ಲೂ ಅಮಿತಾಭ್ ಬ್ಯುಸಿ ಇದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಸ್ಯಾನ್ ಡಿಯಾಗೋದಲ್ಲಿ ಈ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಯಿತು. ಇದರಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದರು. ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Thu, 27 July 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್