AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್ ಬಚ್ಚನ್​ಗೆ ಮತ್ತೆ ಕಾಡಿದೆ ಅನಾರೋಗ್ಯ? ಅಭಿಮಾನಿಗಳಿಗೆ ಮೂಡಿದೆ ಆತಂಕ

Amitabh Bachchan: ‘ಕಲ್ಕಿ 2898 ಎಡಿ’ ಹೆಸರಿನ ಶೀರ್ಷಿಕೆಯನ್ನು ಅನಾವರಣ ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್ ಹಾಜರಿ ಹಾಕಿಲ್ಲ. ಈ ಬಗ್ಗೆ ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.   

ಅಮಿತಾಭ್ ಬಚ್ಚನ್​ಗೆ ಮತ್ತೆ ಕಾಡಿದೆ ಅನಾರೋಗ್ಯ? ಅಭಿಮಾನಿಗಳಿಗೆ ಮೂಡಿದೆ ಆತಂಕ
ಅಮಿತಾಭ್ ಬಚ್ಚನ್
ರಾಜೇಶ್ ದುಗ್ಗುಮನೆ
|

Updated on: Jul 24, 2023 | 7:09 AM

Share

ಬಾಲಿವುಡ್​ ಸ್ಟಾರ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಹಲವು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹಲವು ರೀತಿಯ ಅನಾರೋಗ್ಯ ಇದೆ. ಆದರೆ, ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿಲ್ಲ. ಈ ವಯಸ್ಸಿನಲ್ಲೂ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದು ನಟನೆ ಬಗ್ಗೆ ಅವರಿಗೆ ಇರುವ ಪ್ಯಾಷನ್​ನ ತೋರಿಸುತ್ತದೆ. ಇತ್ತೀಚೆಗೆ ‘ಕಲ್ಕಿ 2898 ಎಡಿ’ ಚಿತ್ರದ (Kalki 2898 AD) ಮೊದಲ ಗ್ಲಿಂಪ್ಸ್ ರಿಲೀಸ್ ಆಯಿತು. ಅಮೆರಿಕದಲ್ಲಿ ಈ ಕಾರ್ಯಕ್ರಮ ನಡೆಯಿತು. ಆದರೆ, ಅಮಿತಾಭ್ ಬಚ್ಚನ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಅಮೆರಿಕದ ಸ್ಯಾನ್​ ಡಿಯಾಗೋದಲ್ಲಿ ಫಸ್ಟ್​ ಗ್ಲಿಂಪ್ಸ್​ ರಿಲೀಸ್​ ಮಾಡಲಾಯಿತು. ಈ ಮೂಲಕ ‘ಕಲ್ಕಿ 2898 ಎಡಿ’ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ. ಈ ಗ್ಲಿಂಪ್ಸ್​ನಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಕಾರ್ಯಕ್ರಮಕ್ಕೆ ಹಾಜರಿ ಹಾಕಿಲ್ಲ. ಈ ಬಗ್ಗೆ ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

‘ಸ್ಯಾನ್ ಡಿಯಾಗೋದಲ್ಲಿ ನಡೆದ ಪ್ರಾಜೆಕ್ಟ್ ಕೆ ಕಾರ್ಯಕ್ರಮ ತಂಡದವರಿಗೆ ನಿಜಕ್ಕೂ ಉತ್ತಮ ಕ್ಷಣ. ನಾಗಿ ಸರ್ (ನಿರ್ದೇಶಕ ನಾಗ್ ಅಶ್ವಿನ್) ನನ್ನನ್ನು ಬರುವಂತೆ ಒತ್ತಾಯಿಸಿದರು. ಆದರೆ ಕೆಲಸ ಮತ್ತು ವೈದ್ಯಕೀಯ ನಿರ್ಬಂಧಗಳು ನನ್ನನ್ನು ಅಂತಹ ಅನೇಕ ಕಾರ್ಯಕ್ರಮಗಳಿಗೆ ಹೋಗದಂತೆ ತಡೆದಿವೆ. ಫಸ್ಟ್​ ಲುಕ್ ಚೆನ್ನಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು’ ಎಂದಿದ್ದಾರೆ ಅಮಿತಾಭ್ ಬಚ್ಚನ್. ಇದರಿಂದ ಅಮಿತಾಭ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ.

‘ಕೊನೆಗೂ ಕೆ ಎಂಬುದು ಏನು ಎಂಬುದನ್ನು ರಿವೀಲ್ ಮಾಡಲಾಗಿದೆ. ಪುರಾಣದ ಪ್ರಕಾರ ಕಲ್ಕಿ ಬಹಳ ಮುಖ್ಯವಾದ ವ್ಯಕ್ತಿ. ಎಡಿ ಎಂಬುದನ್ನು ಬದಲಾಯಿಸಲಾಗಿದೆ ಅಲ್ಲವೇ? ಇಲ್ಲಿ ಎಡಿ ಎಂದರೆ ಭಗವಂತನ ವರ್ಷ ಎಂದರ್ಥ. ಎಲ್ಲಾ ಧರ್ಮದವರು ತಮ್ಮದೇ ಆದ ವರ್ಷಗಳನ್ನು ಹೊಂದಿದ್ದಾರೆ. ಅವರ ಕ್ಯಾಲೆಂಡರ್​ಗಳ ಪ್ರಕಾರ ಅದನ್ನು ಲೆಕ್ಕ ಹಾಕಲಾಗುತ್ತದೆ’ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಕಲ್ಕಿ 2898-ಎಡಿ’ ಚಿತ್ರದ ಬಗ್ಗೆ ರಾಜಮೌಳಿಗೆ ಮೂಡಿದೇ ಒಂದೇ ಪ್ರಶ್ನೆ; ಓಪನ್ ಆಗಿ ಕೇಳಿದ ನಿರ್ದೇಶಕ

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ನಾಗ್ ಅಶ್ವಿನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ