ಪ್ರಭಾಸ್ ನಟನೆಯ ‘ಕಲ್ಕಿ 2898-ಎಡಿ’ ಚಿತ್ರದ ಬಗ್ಗೆ ರಾಜಮೌಳಿಗೆ ಮೂಡಿದೇ ಒಂದೇ ಪ್ರಶ್ನೆ; ಓಪನ್ ಆಗಿ ಕೇಳಿದ ನಿರ್ದೇಶಕ

ನಿರ್ದೇಶಕ ರಾಜಮೌಳಿ ಅವರು ಯಾವುದಾದರೂ ಟೀಸರ್ ನೋಡಿ ಮೆಚ್ಚಿದರು ಎಂದರೆ ಅದರಲ್ಲೊಂದು ವಿಶೇಷತೆ ಇದೆ ಎಂದೇ ಅರ್ಥ. ಅದೇ ರೀತಿ ಅವರಿಗೆ ‘ಕಲ್ಕಿ 2898-ಎಡಿ’ ಚಿತ್ರದ ಮೊದಲ ಗ್ಲಿಂಪ್ಸ್ ಇಷ್ಟವಾಗಿದೆ.

ಪ್ರಭಾಸ್ ನಟನೆಯ ‘ಕಲ್ಕಿ 2898-ಎಡಿ’ ಚಿತ್ರದ ಬಗ್ಗೆ ರಾಜಮೌಳಿಗೆ ಮೂಡಿದೇ ಒಂದೇ ಪ್ರಶ್ನೆ; ಓಪನ್ ಆಗಿ ಕೇಳಿದ ನಿರ್ದೇಶಕ
ಪ್ರಭಾಸ್-ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Jul 22, 2023 | 7:43 AM

ಪ್ರಭಾಸ್ ನಟನೆಯ, ನಾಗ್ ಅಶ್ವಿನ್ (Nag Ashwin) ನಿರ್ದೇಶನದ ಹೊಸ ಚಿತ್ರಕ್ಕೆ ‘ಪ್ರಾಜೆಕ್ಟ್ ಕೆ’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿತ್ತು. ಈ ಚಿತ್ರದ ಹೆಸರು ಏನು ಎಂಬುದನ್ನು ತಂಡ ರಿವೀಲ್ ಮಾಡಿದೆ. ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿ, ‘ಕಲ್ಕಿ 2898-ಎಡಿ’ ಶೀರ್ಷಿಕೆ ರಿವೀಲ್ ಮಾಡಲಾಗಿದೆ. ಮೊದಲ ಗ್ಲಿಂಪ್ಸ್ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಈ ವಿಡಿಯೋ ಬಗ್ಗೆ ರಾಜಮೌಳಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ದೇಶಕ ರಾಜಮೌಳಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. ಅವರು ಯಾವುದಾದರೂ ಟೀಸರ್ ನೋಡಿ ಮೆಚ್ಚಿದರು ಎಂದರೆ ಅದರಲ್ಲೊಂದು ವಿಶೇಷತೆ ಇದೆ ಎಂದೇ ಅರ್ಥ. ಅದೇ ರೀತಿ ಅವರಿಗೆ ‘ಕಲ್ಕಿ 2898-ಎಡಿ’ ಚಿತ್ರದ ಮೊದಲ ಗ್ಲಿಂಪ್ಸ್ ಇಷ್ಟವಾಗಿದೆ. ಈ ವಿಚಾರವನ್ನು ಸ್ವತಃ ರಾಜಮೌಳಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಮೂಡಿರುವ ಒಂದು ಪ್ರಶ್ನೆಯೂ ಬಗ್ಗೆಯೂ ಅವರು ಕೇಳಿದ್ದಾರೆ.

‘ನಾಗ್ ಅಶ್ವಿನ್ ಹಾಗೂ ವೈಜಯಂತಿ ಮೂವೀಸ್​ ನಿಜಕ್ಕೂ ನೀವು ಅದ್ಭುತ ಕೆಲಸ ಮಾಡಿದ್ದೀರಿ. ಭವಿಷ್ಯದ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಅದನ್ನು ನೀವು ಸಾಧ್ಯವಾಗಿಸಿದ್ದೀರಿ. ಡಾರ್ಲಿಂಗ್ ಸ್ಮಾಶಿಂಗ್ ಆಗಿ ಕಾಣಿಸುತ್ತಿದ್ದಾರೆ. ರಿಲೀಸ್​ ಡೇಟ್ ಯಾವಾಗ ಎಂಬ ಒಂದು ಪ್ರಶ್ನೆ ಮಾತ್ರ ಉಳಿದುಕೊಂಡಿದೆ’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ‘ಕಲ್ಕಿ 2898 ಎಡಿ’ ಅಲಿಯಾಸ್​ ‘ಪ್ರಾಜೆಕ್ಟ್​ ಕೆ’ ಚಿತ್ರದ ಪ್ರಚಾರ ಮಾಡಲು ದೀಪಿಕಾ ಪಡುಕೋಣೆ ನಕಾರ; ಮೂಡಿತು ಅನುಮಾನ

‘ಪ್ರಾಜೆಕ್ಟ್​ ಕೆ’ ಚಿತ್ರವನ್ನು ಮುಂದಿನ ಜನವರಿ 12ರಂದು ರಿಲೀಸ್ ಮಾಡುವುದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಚಿತ್ರದ ಗ್ರಾಫಿಕ್ಸ್​ ಕೆಲಸಗಳು ಬಾಕಿ ಇವೆ. ಈ ಕಾರಣಕ್ಕೆ ಸಿನಿಮಾ ಜನವರಿ ತಿಂಗಳಲ್ಲಿ ರಿಲೀಸ್ ಆಗುತ್ತಿಲ್ಲ. ಈ ವಿಚಾರವನ್ನು ತಂಡದವರು ಅಧಿಕೃತ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ