Sign In

By signing in or creating an account, you agree with Associated Broadcasting Company's Terms & Conditions and Privacy Policy.

Armaan Malik Birthday: ಅರ್ಮಾನ್ ಮಲಿಕ್ ಅವರು ಹಾಡಿದ ಕನ್ನಡದ ಈ ಟಾಪ್ ಐದು ಹಾಡುಗಳನ್ನು ಕೇಳಿದ್ದೀರಾ?

ಅರ್ಮಾನ್ ಮಲಿಕ್ ಅವರ ಹಾಡನ್ನು ಕೇಳಿ ಅನೇಕರು ನೋವು ಮರೆತಿದ್ದಾರೆ. ಇನ್ನೂ ಕೆಲವರಿಗೆ ಹಳೆಯ ಹುಡುಗಿಯ ನೆನಪು ಬಂದಿದೆ. ಇನ್ನೂ ಹಲವರಿಗೆ ಇವರ ಹಾಡು ಕೇಳಿ ಮಳೆಯಲ್ಲಿ ನೆನೆಯುವ ಆಸೆ ಆಗಿದೆ.

Armaan Malik Birthday: ಅರ್ಮಾನ್ ಮಲಿಕ್ ಅವರು ಹಾಡಿದ ಕನ್ನಡದ ಈ ಟಾಪ್ ಐದು ಹಾಡುಗಳನ್ನು ಕೇಳಿದ್ದೀರಾ?
ಅರ್ಮಾನ್ ಮಲಿಕ್
Follow us
ರಾಜೇಶ್ ದುಗ್ಗುಮನೆ
|

Updated on: Jul 22, 2023 | 9:00 AM

ಗಾಯಕ ಅರ್ಮಾನ್ ಮಲಿಕ್ (Armaan Malik) ಅವರಿಗೆ ಇಂದು (ಜುಲೈ 22) ಬರ್ತ್​ಡೇ ಸಂಭ್ರಮ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಹಾಡನ್ನು ಕೇಳಿ ಅನೇಕರು ನೋವು ಮರೆತಿದ್ದಾರೆ. ಇನ್ನೂ ಕೆಲವರಿಗೆ ಹಳೆಯ ಹುಡುಗಿಯ ನೆನಪು ಬಂದಿದೆ. ಇನ್ನೂ ಹಲವರಿಗೆ ಇವರ ಹಾಡು ಕೇಳಿ ಮಳೆಯಲ್ಲಿ ನೆನೆಯುವ ಆಸೆ ಆಗಿದೆ. ಅಷ್ಟರಮಟ್ಟಿಗೆ ಇವರ ಹಾಡು ಪ್ರಭಾವ ಬೀರಿದೆ. ಅವರ ಕಂಠ ಇಷ್ಟವಾಗದೇ ಇರದವರು ಇಲ್ಲ ಎಂದರೂ ತಪ್ಪಾಗಲಾರದು. ಅರ್ಮಾನ್ ಮಲಿಕ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಅವರು ಹಾಡಿದ್ದಾರೆ.

ಅರ್ಮಾನ್ ಮಲಿಕ್ ಅವರಿಗೆ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಿಂದಿಯಲ್ಲಿ 112 ಹಾಡುಗಳನ್ನು ಹಾಡಿದ್ದಾರೆ. ಹಿಂದಿಯಲ್ಲಿ ಸಿನಿಮೇತರ 48 ಹಾಡುಗಳು ಅವರ ಕಂಠದಲ್ಲಿ ಮೂಡಿ ಬಂದಿವೆ. ತೆಲುಗಿನಲ್ಲಿ 46, ಕನ್ನಡದಲ್ಲಿ 44 ಹಾಡುಗಳನ್ನು ಅವರು ಹಾಡಿದ್ದಾರೆ. ಬೆಂಗಾಲಿ, ಮಲಯಾಳಂ ಮೊದಲಾದ ಭಾಷೆಗಳಲ್ಲೂ ಅರ್ಮಾನ್ ಹಾಡಿದ್ದಾರೆ.

‘ಮುಂಗಾರು ಮಳೆ 2’

2016ರಲ್ಲಿ ರಿಲೀಸ್ ಆದ ‘ಮುಂಗಾರು ಮಳೆ 2’ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ‘ಸರಿಯಾಗಿ ನೆನಪಿದೆ..’, ‘ನೀನು ಇರದೆ..’, ‘ಒಂಟೆ ಸಾಂಗು..’ ಅರ್ಮಾನ್ ಕಂಠದಲ್ಲಿ ಮೂಡಿ ಬಂದಿವೆ.

ದೇವರೇ..

‘ಹೆಬ್ಬುಲಿ’ ಚಿತ್ರದ ‘ದೇವರೇ..’ ಹಾಡು ಸೂಪರ್ ಹಿಟ್ ಆಯಿತು. ಅಣ್ಣನ ಕಳೆದುಕೊಂಡ ತಮ್ಮ ಹಾಡುವ ಈ ಸಾಂಗ್ ಮೆಚ್ಚುಗೆ ಪಡೆಯಿತು. ಇದನ್ನು ಅರ್ಮಾನ್ ಹಾಡಿದ್ದಾರೆ.

ಒಂದೇ ಏಟಿಗೆ..

‘ಅಮರ್’ ಸಿನಿಮಾದ ‘ಒಂದೇ ಏಟಿಗೆ..’ ಹಾಡು ಕೇಳುಗರಿಗೆ ಇಷ್ಟ ಆಗಿದೆ. ಈ ಹಾಡನ್ನು ಅರ್ಮಾನ್ ಅವರೇ ಹಾಡಿದ್ದಾರೆ ಅನ್ನೋದು ವಿಶೇಷ. ಅನುಮಾನವೇ ಇಲ್ಲ..

‘ಅನುಮಾನವೇ ಇಲ್ಲ..’ ‘ಕರಿಯಾ 2’ ಚಿತ್ರದ ಸಾಂಗ್. ಈ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದನ್ನು ಅರ್ಮಾನ್ ಅವರು ಹಾಡಿದ್ದಾರೆ. ಈ ಹಾಡು ಎಲ್ಲರ ಗಮನ ಸೆಳೆದಿದೆ.

ಯಾರೇ ಯಾರೇ..

‘ಏಕ್​ ಲವ್ ಯಾ’ ಚಿತ್ರದ ‘ಯಾರೇ.. ಯಾರೇ..’ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಾಂಗ್​ನ ಅರ್ಮಾನ್ ಹಾಡಿದ್ದಾರೆ.

ಇಷ್ಟೇ ಅಲ್ಲದೆ, ಒಂದು ಮಳೆಬಿಲ್ಲು, ನಾ ಹೇಗೆ ಹೇಳಲಿ ಸೇರಿ ಇನ್ನೂ ಅನೇಕ ಸೂಪರ್ ಹಿಟ್ ಗೀತೆಗಳನ್ನು ಅರ್ಮಾನ್ ಹಾಡಿದ್ದಾರೆ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !