ಖ್ಯಾತ ಯೂಟ್ಯೂಬರ್​ನ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರೆಗ್ನೆಂಟ್, ಅದು ಹೇಗೆ ಸಾಧ್ಯವೆಂದು ಅಚ್ಚರಿಗೊಂಡ ಜನ

ಹೈದರಾಬಾದ್ ಮೂಲದ ಸೋಷಿಯಲ್‌ ಮೀಡಿಯಾ ಸ್ಟಾರ್‌ ಅರ್ಮಾನ್ ಮಲಿಕ್ ಹೆಂಡತಿಯರು ಒಂದೇ ಬಾರಿಗೆ ಗರ್ಭಿಣಿಯರಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೋಲ್​ ಆಗಿದ್ದಾರೆ.

ಖ್ಯಾತ ಯೂಟ್ಯೂಬರ್​ನ ಇಬ್ಬರು  ಪತ್ನಿಯರು ಒಂದೇ ಬಾರಿಗೆ ಪ್ರೆಗ್ನೆಂಟ್, ಅದು ಹೇಗೆ ಸಾಧ್ಯವೆಂದು ಅಚ್ಚರಿಗೊಂಡ ಜನ
YouTuber Two Wives Are Pregnant
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 11, 2022 | 6:49 PM

ಹೈದರಾಬಾದ್:  ಆಂಧ್ರ ಮೂಲದ ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ (YouTuber Armaan Malik) ಎನ್ನುವರ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರಗ್ನೆಂಟ್ (Pregnant) ಆಗಿದ್ದಾರೆ. ಈ ಖುಷಿ ವಿಚಾರವನ್ನು ಪತ್ನಿಯರ ಜೊತೆಗಿನ ಫೋಟೋಗಳನ್ನು ಅರ್ಮಾನ್ ಮಲಿಕ್ ಸಾಮಾಜಿಕ ಜಾಲತಾಣಗಳಲ್ಲಿ(Social media) ಹಂಚಿಕೊಂಡಿದ್ದು, ಫೋಟೋಗೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಒದಿ: ಪಶ್ಚಿಮ ಬಂಗಾಳದಲ್ಲಿ ಅವಳಿ ಸೋದರಿಯರೊಂದಿಗೆ ಅವಳಿ ಸೋದರರ ಮದುವೆ

ಹೌದು… ಅರ್ಮಾನ್ ಮಲಿಕ್ ಅವರ ಇಬ್ಬರು ಪತ್ನಿಯಾರದ ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಒಂದೇ ಬಾರಿಗೆ ಗರ್ಭಿಣಿಯಾಗಿದ್ದಾರೆ.  ಈ ಬಗ್ಗೆ ಅರ್ಮಾನ್ ಮಲಿಕ್ , ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಸಮೇತ ಖುಷಿ ವಿಚಾರವನ್ನು ಹಂಚಿಕೊಂಡಿದ್ದು, ಇದು ನನ್ನ ಕುಟುಂಬ ಎಂದು ಬರೆದುಕೊಂಡಿದ್ದಾನೆ. ಸದ್ಯ ಇದಕ್ಕೆ ವಿಧವಿಧವಾದ ಕಮೆಂಟ್​ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ನನಗೆ ಫುಲ್ ಶಾಕ್ ಆಗಿದೆ. ಇಬ್ಬರು ಹೇಗೆ ಒಂದೇ ಬಾರಿ ಹೇಗೆ ಪ್ರಗ್ನೆಂಟ್ ಆಗಲು ಸಾಧ್ಯ ಎಂದು ಒಂದು ಒಬ್ಬರು ಕಮೆಂಟ್​ ಮಾಡಿ ಪ್ರಶ್ನಿಸಿದ್ರೆ, ಮತ್ತೊಬ್ಬರು ನೀನು ಕ್ರಿಕೆಟ್ ಟೀಮ್ ರೆಡಿ ಮಾಡುತ್ತಿದ್ದಿಯಾ ಎಂದು ಕೇಳಿದ್ದಾರೆ.

ಇನ್ನೊಬ್ಬ ಬಹುಪತ್ನಿತ್ವಕ್ಕೆ ಅವಕಾಶ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮೂವರು ಹೇಗೆ ಒಟ್ಟಿಗೆ ವಾಸಿಸುತ್ತೀರೋ. ನಿನಗೆ ನಾಚಿಕೆಯಾಗುವುದಿಲ್ವಾ, ಇದು ವಿಶೇಷ ಟ್ಯಾಲೆಂಟ್ ಅಂತೆಲ್ಲ ಟ್ರೋಲ್ ಮಾಡುತ್ತಿದ್ದಾರೆ.

ಇನ್​ಸ್ಟಾಗ್ರಾಮ್ ಹಾಗೂ ಯೂಟ್ಯೂಬ್​ನಿಂದಲೇ ಸೋಷಿಯಲ್​ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆಂಧ್ರ ಪ್ರದೇಶ ಮೂಲದ ಅರ್ಮಾನ್ ಮಲಿಕ್, ಇನ್ಸ್ಟಾಗ್ರಾಮ್​ನಲ್ಲಿ 1.5 ಮಿಲಿಯನ್ ಹಾಗು ಯೂಟ್ಯೂಬ್​ನಲ್ಲಿ 2 ಮಿಲಿಯನ್​ ಫಾಲೋರ್ಸ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಒಂದು ಪೋಸ್ಟ್ ಹಾಕಿದ್ದರೆ ಸಾಕು ಲಕ್ಷಾನುಗಟ್ಟಲೇ ಜನರು ವಿವ್ಸ್, ಲೈಕ್ಸ್ ಬರ್ತವೆ. ಆದ್ರೆ, ಇದೀಗ ಅವರೇ ಸಖತ್ ಟ್ರೋಲ್​ ಆಗುತ್ತಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:47 pm, Sun, 11 December 22