ಅಗತ್ಯ ವಸ್ತು, ತರಕಾರಿ ಹೇರಿಕೊಂಡು ಗುವಾಹಟಿಯಿಂದ ಮಣಿಪುರ ತಲುಪಿದ ಮೊದಲ ಗೂಡ್ಸ್ ರೈಲು; ವಿಡಿಯೊ ಟ್ವೀಟ್ ಮಾಡಿದ ಅಶ್ವಿನಿ ವೈಷ್ಣವ್
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರರು ಈ ರೈಲು ಖೋಂಗ್ಸಾಂಗ್ ರೈಲು ನಿಲ್ದಾಣವನ್ನು ತಲುಪುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ, ಈಶಾನ್ಯ ಗಡಿ ರೈಲ್ವೆಯ ಮಿಶ್ರ ಸರಕು ರೈಲು ಅಗತ್ಯ ವಸ್ತುಗಳನ್ನು (ಆಲೂಗಡ್ಡೆ, ಅಕ್ಕಿ, ಸಕ್ಕರೆ, ಈರುಳ್ಳಿ ಮತ್ತು ಇತರ ಆಹಾರ ಉತ್ಪನ್ನಗಳು) ಹೊತ್ತು ಮಣಿಪುರದ ಖೋಂಗ್ಸಾಂಗ್ ನಿಲ್ದಾಣಕ್ಕೆ ತಲುಪಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮೆಂಗ್ಲಾಂಗ್ ಜುಲೈ 24: ಗುವಾಹಟಿಯಿಂದ (Guwahati) ಮೊದಲ ಗೂಡ್ಸ್ ರೈಲು ಸೋಮವಾರ ಮಣಿಪುರದ (Manipur) ತಮೆಂಗ್ಲಾಂಗ್ ಜಿಲ್ಲೆಯ ಖೊಂಗ್ಸಾಂಗ್ (Khongsang Railway Station)ರೈಲು ನಿಲ್ದಾಣವನ್ನು ತಲುಪಿದೆ. ಇದು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಆಲೂಗಡ್ಡೆ, ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರರು ಈ ರೈಲು ಖೋಂಗ್ಸಾಂಗ್ ರೈಲು ನಿಲ್ದಾಣವನ್ನು ತಲುಪುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ, ಈಶಾನ್ಯ ಗಡಿ ರೈಲ್ವೆಯ ಸರಕು ರೈಲು ಅಗತ್ಯ ವಸ್ತುಗಳನ್ನು (ಆಲೂಗಡ್ಡೆ, ಅಕ್ಕಿ, ಸಕ್ಕರೆ, ಈರುಳ್ಳಿ ಮತ್ತು ಇತರ ಆಹಾರ ಉತ್ಪನ್ನಗಳು) ಹೊತ್ತು ಮಣಿಪುರದ ಖೋಂಗ್ಸಾಂಗ್ ನಿಲ್ದಾಣಕ್ಕೆ ತಲುಪಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.
In a first, North East Frontier Railway’s mixed freight train carrying essential commodities (potato, rice, sugar, onion and other food products) reached Khongsang station in Manipur. pic.twitter.com/2SVaiRcsX8
— Ashwini Vaishnaw (@AshwiniVaishnaw) July 24, 2023
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕೂಡ ಈ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು “ಇಂದು ಖೋಂಗ್‌ಸಾಂಗ್ ರೈಲು ನಿಲ್ದಾಣದಲ್ಲಿ ಉದ್ಘಾಟನಾ ಗೂಡ್ಸ್ ರೈಲಿನ ಮಹತ್ವದ ಆಗಮನವನ್ನು ವೀಕ್ಷಿಸಲು ಸಂತೋಷವಾಗಿದೆ.” ಈ ಬೆಳವಣಿಗೆಯು ಮಣಿಪುರದ ಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಅದರ ಜತೆಗೆ ಸರಕುಗಳು ಮತ್ತು ಅಗತ್ಯ ವಸ್ತುಗಳ ತ್ವರಿತ ಸಾಗಣೆಯ ಭರವಸೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
Delighted to witness the momentous arrival of the inaugural goods train at Khongsang Railway Station today. This development heralds a plethora of opportunities for the people of Manipur, promising expedited transportation of goods and essential commodities.
The seamless… pic.twitter.com/Exewu7mmJt
— N.Biren Singh (@NBirenSingh) July 24, 2023
ಜಿರಿಬಾಮ್-ಇಂಫಾಲ್ ಹೊಸ ಮಾರ್ಗದ ಯೋಜನೆಯಡಿಯಲ್ಲಿ ಖೊಂಗ್ಸಾಂಗ್ ನಿಲ್ದಾಣವನ್ನು 2022 ರಲ್ಲಿ ಕಾರ್ಯ ನಿರ್ವಹಿಸಲಾಗಿತ್ತು.
ಆದಾಗ್ಯೂ, ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ನಂತರ ಈ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಜೂನ್ 1 ರಂದು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖೋಂಗ್‌ಸಾಂಗ್‌ನಲ್ಲಿ ತಾತ್ಕಾಲಿಕ ರೈಲು ನಿಲ್ದಾಣವನ್ನು ಕೆಲವೇ ದಿನಗಳಲ್ಲಿ ಜನರ ಸಂಚಾರ ಮತ್ತು ಸರಕುಗಳ ಸಾಗಣೆಗಾಗಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ: ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ; ಮುಂಗಾರು ಅಧಿವೇಶದಲ್ಲಿ ಮಣಿಪುರ ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ
ವ್ಯಾಪಾರಸ್ಥರ ಯಾವುದೇ ಪ್ರಶ್ನೆಗಳಿಗೆ ಮಾರ್ಕೆಟಿಂಗ್ ಇನ್ಸ್‌ಪೆಕ್ಟರ್ ದಿನದ 24 ಗಂಟೆಯೂ ಲಭ್ಯವಿರುತ್ತಾರೆ ಎಂದು ಎನ್‌ಎಫ್‌ಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೇ ಹೇಳಿದರು. ಇವರ ಪ್ರಕಾರ ಮಣಿಪುರ ಮೂಲದ ಎಲ್ಲಾ ವ್ಯಾಪಾರಿಗಳು ಪ್ರತಿದಿನ ಖೋಂಗ್‌ಸಾಂಗ್ ನಿಲ್ದಾಣದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಅಗತ್ಯ ಸರಕುಗಳನ್ನು ಕಾಯ್ದಿರಿಸಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 pm, Mon, 24 July 23