ಮಣಿಪುರ ಘಟನೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧ, ಯಾರೂ ಪಲಾಯನ ಮಾಡಬಾರದು ಎಂದು ವಿಪಕ್ಷಗಳಿಗೆ ಮನವಿ ಮಾಡಿದ ಅನುರಾಗ್ ಠಾಕೂರ್

ಮಣಿಪುರ ಘಟನೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ. ಆದ್ರೆ, ಸೂಕ್ಷ್ಮ ವಿಷಯಗಳಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.

ಮಣಿಪುರ ಘಟನೆ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧ, ಯಾರೂ ಪಲಾಯನ ಮಾಡಬಾರದು ಎಂದು ವಿಪಕ್ಷಗಳಿಗೆ ಮನವಿ ಮಾಡಿದ ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್
Follow us
ರಮೇಶ್ ಬಿ. ಜವಳಗೇರಾ
|

Updated on:Jul 23, 2023 | 6:13 PM

ನವದೆಹಲಿ, (ಜುಲೈ 23): ಮಣಿಪುರದಲ್ಲಿ(Manipur) ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದು ದೇಶವನ್ನೇ ತಲ್ಲಣಗೊಳಿಸಿದೆ. ಈ ಹೀನಾತಿ ಹೀನ ಕೃತ್ಯವನ್ನ ಯಾರೂ ಕ್ಷಮಿಸುವುದಕ್ಕೆ ಸಾಧ್ಯವಿಲ್ಲ. ಮಹಿಳೆಯರಿಗೆ ಮಾಡಿದ ಅಪಮಾನವನ್ನ ಸಹಿಸುವುದಕ್ಕೆ ಸಾಧ್ಯವಿಲ್ಲ. ಆದ್ರೆ, ಪೈಶಾಚಿಕ ಕೃತ್ಯದಲ್ಲಿ ರಾಜಕೀಯ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಲೋಕಸಭೆ ವಿಪಕ್ಷಗಳ ಗದ್ದಲ ಎಬ್ಬಿಸಿವೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್(Anurag Thakur), ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದು ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸ್ಮೃತಿ ಇರಾನಿಗೆ ‘ಫೇಲ್’ ಎಂದು ರಿಪೋರ್ಟ್ ಕಾರ್ಡ್ ನೀಡಿದ ಕಾಂಗ್ರೆಸ್; ಈ ಎರಡರಲ್ಲಿ ನೀವು ಸ್ಕೋರ್ ಮಾಡುತ್ತೀರಿ ಎಂದು ಕೇಂದ್ರ ಸಚಿವೆ ತಿರುಗೇಟು

ನವದೆಹಲಿಯಲ್ಲಿ ಇಂದು (ಜುಲೈ 23) ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಣಿಪುರದಲ್ಲಿ ಸದ್ಯದ ಸ್ಥಿತಿಗತಿ ಕುರಿತು ಚರ್ಚೆ ನಡೆಸಲು ವಿಪಕ್ಷಗಳನ್ನು ಕೈ ಮುಗಿದು ಕೇಳಿಕೊಳ್ಳೇನೆ. ಆದ್ರೆ, ಪ್ರಕರಣವನ್ನು ರಾಜಕೀಯಗೊಳಿಸಬಾರದು. ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಣಿಪುರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಸದನಲ್ಲಿ ಧನಾತ್ಮಕ ಚರ್ಚೆ ನಡೆಯಬೇಕು. ಆದ್ರೆ, ಚರ್ಚೆಯಿಂದ ಯಾರೂ ಪಲಾಯನ ಮಾಡಬಾರದರು ಎಂದು ವಿರೋಧ ಪಕ್ಷಗಳಿಗೆ ಕೈಗಿಮುಗಿದು ಕೇಳಿಕೊಳ್ಳುತ್ತೇನೆ ಅಂತ ಪರೋಕ್ಷವಾಗಿ ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

ಇನ್ನು ಮಣಿಪುರದ ಪ್ರಕರಣದ ಕುರಿತು ಪ್ರತಿಪಕ್ಷಗಳ ಒಕ್ಕೂಟವು ಸೋಮವಾರ (ಜುಲೈ 24) ಸಂಸತ್ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲು ತೀರ್ಮಾನಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಮಾರ್ದನಿಸಿದ್ದು, ಪ್ರತಿಪಕ್ಷಗಳು ಈ ಬಗ್ಗೆ ಚರ್ಚೆಗೆ ಪಟ್ಟು ಹಿಡಿದು ಗದ್ದಲ ಎಬ್ಬಿಸಿದ್ದವು. ಇನ್ನು ಪ್ರಧಾನಿ ಮೋದಿ ಮಣಿಪುರ ಘಟನೆ ಹೆಚ್ಚು ಬಗ್ಗೆ ಮಾತನಾಡಿದರಿವುದಕ್ಕೆ ಸೋನಿಯಾ ಗಾಂಧಿ ವ್ಯಕ್ತಪಡಿಸಿದ್ದು, ಮಹಿಳೆಯರನ್ನು ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಲಾಗಿದೆ. 77 ದಿನಗಳಿಂದ ದಂಗೆ ನಡೀತಿದ್ರೂ. ಮೋದಿ ಯಾವುದೇ ಹೇಳಿಕೆ ನೀಡಿಲ್ಲ. ಮಹಿಳೆಯ ವಿಡಿಯೋ ವೈರಲ್ ಆದ್ಮೇಲೆ ನಿನ್ನೆ ಮಾತನಾಡಿದ್ದಾರೆ, ಆ ಹೇಳಿಕೆಯಲ್ಲೂ ಅವರು ರಾಜಕೀಯ ಬೆರೆಸಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದರು. ಅತ್ತ ಬಿಜೆಪಿ ನಾಯಕರು ನಾವು ಚರ್ಚೆಗೆ ಸಿದ್ಧವಿದ್ದರೂ ಪ್ರತಿಪಕ್ಷಗಳು ವಿನಾಕಾರಣ ಗಲಾಟೆ ಮಾಡುತ್ತಿವೆ ಎಂದು ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇನ್ನು ಶುಕ್ರವಾರ ವಿಪಕ್ಷಗಳ ಒತ್ತಾಯದ ನಡುವೆಯೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಉತ್ತರ ಹೇಳಲು ಮುಂದಾಗಿದ್ದರು. ಆದ್ರೆ ಪಟ್ಟು ಬಿಡದ ವಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ದರು. ರಾಜ್ಯಸಭೆಯಲ್ಲೂ ಇದೇ ವಿಚಾರ ಗದ್ದಲಕ್ಕೆ ಕಾರಣವಾಯ್ತು. ಹೀಗಾಗಿ ಎರಡು ಸದನಗಳನ್ನ ಸೋಮವಾರಕ್ಕೆ (ಜುಲೈ 24) ಮೂಂದೂಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sun, 23 July 23