Delhi: 18 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಸಾವು

18 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಶೇಖ್ ಸಹದತ್, ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Delhi: 18 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಸಾವು
ಶೇಖ್ ಸಹಾದತ್Image Credit source: India Today
Follow us
ನಯನಾ ರಾಜೀವ್
|

Updated on: Jul 23, 2023 | 3:57 PM

18 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಶೇಖ್ ಸಹದತ್, ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಾಯುವ್ಯ ದೆಹಲಿಯ ನೇತಾಜಿ ಸುಭಾಷ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಶೇಖ್​ ಸಹದತ್​ನನ್ನು ಇರಿಸಲಾಗಿತ್ತು. ಆತ ವಾಯುವ್ಯ ದೆಹಲಿಯ ಜಹಾಂಗೀರಪುರಿ ನಿವಾಸಿಯಾಗಿದ್ದ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇತರ ನಾಲ್ವರನ್ನು ಬಂಧಿಸಲಾಗಿತ್ತು.

ಆತನ ಮೇಲೆ 18 ಕ್ರಿಮಿನಲ್ ಪ್ರಕರಣಗಳಿದ್ದವು, ತನಿಖೆಯ ಸಲುವಾಗಿ ಆತನನ್ನು ಒಂದು ದಿನ ಪೊಲೀಸ್​ ಕಸ್ಟಡಿಗೆ ನೀಡಲಾಗಿತ್ತು.ಪ್ರಕರಣದ ಇತರೆ ಆರೋಪಿಗಳು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜುಲೈ 22 ರಂದು ಆತನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅದೇ ರಾತ್ರಿ ಲಾಕಪ್‌ನಲ್ಲಿ ಇರಿಸಲಾಯಿತು.

ಮತ್ತಷ್ಟು ಓದಿ: ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್

ಭಾನುವಾರ ಬೆಳಗ್ಗೆ ಆತ ವೇಗವಾಗಿ ಉಸಿರಾಡುತ್ತಿದ್ದುದನ್ನು ಕರ್ತವ್ಯದಲ್ಲಿದ್ದ ಸೆಂಟ್ರಿ ಗಮನಿಸಿದ್ದಾರೆ, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ತಕ್ಷಣ ಆತನನ್ನು ಬಿಎಸ್‌ಎ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ