ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್

ಚಾಮರಾಜಪೇಟೆಯಲ್ಲಿ ವೃದ್ದ ಜುಗುರಾಜ್ ಕೊಲೆ ಆರೋಪಿ ಕತೆ ಇದು. ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡವನು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ಆದರೆ ಕೊಲೆ ಕೇಸ್​ನಲ್ಲಿ ಅಂದರ್ ಆಗಿದ್ದಾನೆ.

ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ: ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್
ಪೂರನ್ ರಾಮ್ ದೇವಾಸಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 08, 2022 | 7:03 AM

ಬೆಂಗಳೂರು: ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡವನು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ನಾಲ್ಕು ವರ್ಷದಿಂದ ಗ್ಯಾಂಗ್​ ಸ್ಟಾರ್ ಆಗಬೇಕು ಅಂದುಕೊಂಡಿದ್ದ. ಅದ್ರಂತೆ ದೊಡ್ಡ ದೊಡ್ಡ ಡಾನ್​ಗಳ ಪರಿಚಯವೂ ಮಾಡಿಕೊಂಡಿದ್ದ. ಆದರೆ ಮಾಡಿದ ಮೊದಲ ಪ್ರಯತ್ನದಲ್ಲೇ ಕೊಲೆ ಕೇಸ್​ನಲ್ಲಿ ಅಂದರ್ ಆಗಿದ್ದಾನೆ. ಇದು ಗ್ಯಾಂಗ್ ಸ್ಟಾರ್ ಆಗಬೇಕು ಅಂದುಕೊಂಡವನ ಇಂಟರೆಸ್ಟಿಂಗ್ ಸ್ಟೋರಿ. ಚಾಮರಾಜಪೇಟೆಯಲ್ಲಿ ವೃದ್ದ ಜುಗುರಾಜ್ ಕೊಲೆ ಆರೋಪಿ ಕತೆ ಇದು. ಪೂರನ್ ರಾಮ್ ದೇವಾಸಿ ಎಂಬಾತನ ಕಥೆ. ಪೂರನ್ ಗೋವಾದಲ್ಲಿ ಹಾರ್ಡ್ ವೇರ್​ಶಾಪ್ ಇಟ್ಟುಕೊಂಡಿದ್ದ. ತಿಂಗಳಾದ್ರೆ ಸಾಕು ಕೈತುಂಬಾ ಹಣ ಬರ್ತಾ ಇತ್ತು, ಆದ್ರೂ ಗ್ಯಾಂಗ್ ಸ್ಟಾರ್ ಆಗಬೇಕೆಂಬ ಆಸೆ.

ತನ್ನ ಆಸೆಯಂತೆ ಗನ್ ತಗೊಂಡು ಗ್ಯಾಂಗ್ ಸ್ಟಾರ್ ಶೋ ಅಪ್ ಕೊಡುತ್ತಿದ್ದ. ಆತ ಶೋ ಅಪ್ ಕೊಡುತ್ತಿದ್ದ ವಿಡಿಯೋಗಳು ಲಭ್ಯವಾಗಿವೆ. ಸದ್ಯ ಗ್ಯಾಂಗ್ ಸ್ಟಾರ್ ಷೋ ಅಪ್ ಪೂರನ್​ನ್ನು ಚಾಮರಾಜಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋಟಿಗಟ್ಟಲೇ ಚಿನ್ನ ಕದ್ದಿದೇ ಫ್ಲ್ಯಾನ್ ಓಕೆ ಅಂದಿದ್ದ ಪೂರನ್, ಆದರೆ ಕದ್ದ ಚಿನ್ನ ನನ್ನ ಬಳಿಯೇ ಕೊಡಿ ಅಂತ ಬೇಡಿಕೆ ಇಟ್ಟಿದ್ದ. ಪೂರನ್ ಬೇಡಿಕೆಯಂತೆ 8.75 ಕೆ.ಜಿ ಚಿನ್ನವನ್ನು ಬಿಜುರಾಮ್ ಕೊಟ್ಟಿದ್ದ. ಸದ್ಯ ಗ್ಯಾಂಗ್ ಸ್ಟಾರ್ ಅಂತ ಆಸೆಗೆ ಕೊಲೆ ಕೇಸಲ್ಲಿ ಪೂರನ್ ಫಿಟ್ ಆಗಿದ್ದು, ಚಾಮರಾಜಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಆರೋಪಿ ಪತ್ತೆಗಾಗಿ ಬಲೆ ಬೀಸಿದ ಪೊಲೀಸ್​

ಚಾಮರಾಜಪೇಟೆಯಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಯಾವಾಗಲೂ ಮೃತ ಜುಗರಾಜ್ ಜೊತೆ ಇರುತ್ತಿದ್ದ ಆರೋಪಿ ಬಿಜುರಾಮ್ ಮೇ 24ರ ರಾತ್ರಿ 10.30ರ ಸುಮಾರಿಗೆ ಜುಗರಾಜ್ ಕೊಲೆ ಮಾಡಿದ್ದಾಗಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ:  Moto G82 5G: ಭರ್ಜರಿ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ: ಭಾರತದಲ್ಲಿ ಮೋಟೋ G82 ಸ್ಮಾರ್ಟ್‌ಫೋನ್‌ ಬಿಡುಗಡೆ

ಎರಡನೇ ಮಗ ಆನಂದ್, ಆತನ ಸೊಸೆ ಮತ್ತು ಜುಗರಾಜ್ ಮೂರು ಜನ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತಿದ್ರು. ಬ್ಯುಸಿನೆಸ್ನ ಎಲ್ಲಾ ವ್ಯವಹಾರ ಮೃತ ಜುಗರಾಜ್ ನೋಡಿಕೊಳ್ತಿದ್ದ. ಆತನ ಬಳಿಯೇ ಲಾಕರ್ ಗಳಿರ್ತಿದ್ವು. ಆರೋಪಿ ಬಿಜರಾಮ್ ವೃದ್ದನನ್ನ ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗೋದು, ಬರೋದು ಮಾಡ್ತಿದ್ದ. ಅದರಂತೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಅಪಾರ್ಟ್ಮೆಂಟ್ ಗೆ ಬಿಡೋಕೆ ಹೋಗಿ ಕೃತ್ಯ ಎಸಗಿದ್ದಾನೆ. ವೃದ್ಧನ ಕೈ ಹಿಂದೆ ಕಟ್ಟಿ ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮನೇಲಿರೋ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ನಾಲ್ಕು ಬ್ಯಾಗ್ಗಳಲ್ಲಿ ಚಿನ್ನಾಭರಣಗಳನ್ನ ತುಂಬಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಚಿನ್ನಾಭರಣಗಳನ್ನ ತೆಗೆದುಕೊಂಡು ಹೋಗೋಕಾಗದೆ 25kg ಬೆಳ್ಳಿ ಅಪಾರ್ಟ್ಮೆಂಟ್ ನಲ್ಲೇ ಬಿಟ್ಟೋಗಿದ್ದಾನೆ. ಸದ್ಯ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada