ಬರಗೂರು ರಾಮಚಂದ್ರಪ್ಪ ಸಮಿತಿ ಎಡವಟ್ಟು ಬಯಲು: ವೀರ ಯೋಧನ ಪಠ್ಯಕ್ಕೆ ಕೊಕ್
ರೋಹಿತ್ ಚಕ್ರತೀರ್ಥ ಸಮಿತಿ ಬಳಿಕ ಈಗ ಬರಗೂರು ಸಮಿತಿ ಎಡವಟ್ಟು ಬಯಲಾಗಿದ್ದು, ವೀರ ಸೇನಾನಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾಠವನ್ನ ಬರಗೂರು ಸಮಿತಿ ಕೈಬಿಟ್ಟಿದ್ದೆ.
ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ಇನ್ನು ಶಾಂತವಾಗಿಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಬಳಿಕ ಈಗ ಬರಗೂರು ರಾಮಚಂದ್ರಪ್ಪ ಸಮಿತಿಯ ಎಡವಟ್ಟು ಬಯಲಾಗಿದ್ದು, ವೀರ ಸೇನಾನಿಯ ಪಠ್ಯವನ್ನೇ ಬರಗೂರು ಸಮಿತಿ ಕೈಬಿಟ್ಟಿದೆ ಎನ್ನಲಾಗಿತ್ತಿದೆ. ಮುಂಬೈ ದಾಳಿಯ ಉಗ್ರರ ವಿರುದ್ಧ ಹೋರಾಡಿದ್ದ ವೀರ ಯೋಧನ ಪಠ್ಯಕ್ಕೆ ಕೊಕ್ ನೀಡಿದ್ದು, ಬ್ಲಡ್ ಗ್ರೂಪ್ ಪಠ್ಯವನ್ನ ಬರಗೂರು ಸಮಿತಿ ಸೇರ್ಪಡೆಗೊಳಿಸಿದೆ. 8ನೇ ತರಗತಿ ದ್ವಿತೀಯ ಭಾಷೆ ಕನ್ನಡದಲ್ಲಿದ್ದ ಗದ್ಯ ಪಾಠದಲ್ಲಿ ಉನ್ನಿಕೃಷ್ಣನ್ ಬಗ್ಗೆ ಕರಾಳ ರಾತ್ರಿ ಎಂಬ ಹೆಸರಿನ ಪಠ್ಯ ಇತ್ತು. ಮುಂಬೈ ಮೇಲೆ ಉಗ್ರರು ಹೇಗೆ ಅಟ್ಯಾಕ್ ಮಾಡಿದರು. ಉಗ್ರರನ್ನು ಭಾರತೀಯ ಯೋಧರು ಹೇಗೆ ಹೊಡೆದುರುಳಿಸಿದರು, ಉನ್ನಿಕೃಷ್ಣನ್ ಆಪರೇಷನ್ ಹೇಗಿತ್ತು ಎಂಬುದರ ಬಗ್ಗೆ ಪಠ್ಯದಲ್ಲಿ ಉಲ್ಲೇಖಿಸಲಾಗಿತ್ತು. ಮುಡಂಬಡಿತ್ತಾಯ ಸಮಿತಿ ಅಳವಡಿಸಿದ್ದ ಪಠ್ಯ ತೆಗೆದಿದ್ದ ಸಮಿತಿ, ಯಾವ ಕಾರಣಕ್ಕೆ ಪಠ್ಯ ಕೈಬಿಡಲಾಗಿದೆ ಎಂಬ ಬಗ್ಗೆ ವಿವರ ಇಲ್ಲ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಹಳಿ ತಪ್ಪಿದ 40 ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲು
ಈ ಕುರಿತಾಗಿ ಶಿಕ್ಷಣ ಇಲಾಖೆಗೆ ಸಾಹಿತಿ ಬರಗೂರು ಸಮಿತಿ ವಿವರ ನೀಡಿಲ್ಲ ಎನ್ನಲಾಗುತ್ತಿದ್ದು, ರೋಹಿತ್ ಸಮಿತಿ ಮಾಹಿತಿ ಕೇಳಿದಾಗಲೂ ವಿವರಣೆ ನೀಡಿಲ್ಲ. ಈ ಬಗ್ಗೆ ರೋಹಿತ್ ಸಮಿತಿಗೆ ವಿವರಣೆ ನೀಡದ ಶಿಕ್ಷಣ ಇಲಾಖೆ, ಯಾವ ಕಾರಣಕ್ಕಾಗಿ ಮೇಜರ್ ಸಂದೀಪ್ ಪಠ್ಯ ಕೈಬಿಡಲಾಯ್ತು, ಈ ಬಗ್ಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಉತ್ತರಿಸುತ್ತಾರಾ, ಯಾರ ಓಲೈಕೆಗಾಗಿ ಸಂದೀಪ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಯ್ತು, ಪಠ್ಯ ಕೈಬಿಟ್ಟು ವೀರ ಯೋಧನಿಗೆ ಬರಗೂರು ಅವಮಾನ ಮಾಡಿದ್ರಾ ಎನ್ನುವ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಪುಸ್ತಕ ಕೊಡದೆ ಹೋದ್ರು, ಶಿಕ್ಷಕರ ಮೇಲೆ ಒತ್ತಡ ಹಾಕ್ತಿರೋ ಅಧಿಕಾರಿಗಳು
ಪುಸ್ತಕ ಕೊಡದೆ ಹೋದರು ಶಿಕ್ಷಕರ ಮೇಲೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಶಿಕ್ಷಕರ ಲಾಗಿನ್ ಐಡಿಯಲ್ಲಿ ನೂರಕ್ಕೆ ನೂರು ಪುಸ್ತಕ ಕೊಡಲಾಗಿದೆ ಎಂದು ನಮೂದು ಮಾಡುವಂತೆ ಮೇಲಾಧಿಕಾರಿಗಳು ಶಿಕ್ಷಕರಿಗೆ ಒತ್ತಾಯ ಮಾಡುತ್ತಿದ್ದಾರೆ. ಎಲ್ಲ ವಿಷಯಗಳ ಪಠ್ಯ ಪುಸ್ತಕ ಬಂದಿರೋದು ಕೇವಲ ಶೇಕಡಾ 40 ರಷ್ಟು ಮಾತ್ರ. ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಿರೋದನ್ನ ಶಿಕ್ಷಕರು ಲಾಗಿನ್ ಐಡಿಯಲ್ಲಿ ನಮೂದಿಸಬೇಕು. ಕೇವಲ 40% ರಷ್ಟು ವಿತರಣೆಯಾಗಿದ್ದು, ನೂರಕ್ಕೆ ನೂರು ನಮೂದಿಸಿ ಎಂದು ಅಧಿಕಾರಿಗಳು ಹೇಳುತ್ತಿದ್ದು, ಅದಕ್ಕೆ ನಾವು ಜಗ್ಗಿಲ್ಲ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಮೇಲಾಧಿಕಾರಿಗಳ ಮಾತು ಕೇಳಿದರೆ ನಮಗೆ ಶಿಕ್ಷೆ ಆಗತ್ತೆ ಎಂದು ಶಿಕ್ಷಕರು ಹೇಳಿದ್ದು, ಮಕ್ಕಳಿಗೆ ಪುಸ್ತಕ ಕೊಡಲಾರದೆ ನಾವು ಕೊಟ್ಟೀವಿ ಎಂದು ನಮೂದು ಮಾಡೋದು ಎಷ್ಟು ಸರಿ ಎನ್ನುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.