ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ; ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ -ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನಾನೊಬ್ಬ ಕಾರ್ಯಕರ್ತ. ನಾನು ಪಕ್ಷದ ವರಿಷ್ಠರು, ನಾಯಕರ ಬಳಿ ಸ್ವತಂತ್ರವಾಗಿ ಮಾತನಾಡಬಹುದು. ಇಬ್ರಾಹಿಂ ಮಾತನಾಡಿದ್ದು ಎಲ್ಲವು ನಿಮ್ಮ ಮುಂದೆ ಇದೆ. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ ಇದನ್ನ ನಾನು ಒಪ್ಪುತ್ತೇನೆ. ನುಡಿದಂಗೆ ನಡೆದವರ ಜೊತೆ ಮಾತ್ರ ಮಾತನಾಡಬಹುದು.

ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ; ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ -ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:Jun 08, 2022 | 11:36 AM

ಬೆಂಗಳೂರು: ಜೆಡಿಎಸ್​​ ಆಫರ್​ಗೆ ಡಿ.ಕೆ.ಶಿವಕುಮಾರ್​ ಸಾಫ್ಟ್ ಕಾರ್ನರ್​​ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್-JDS ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಆಫರ್ ಬಗ್ಗೆ ಒಲವು ಹೊಂದಿರುವ ಡಿ.ಕೆ.ಶಿವಕುಮಾರ್, ರಾಜಕೀಯ ನಿಂತ ನೀರಲ್ಲ ಎಂಬುದನ್ನ ನಾನು ಒಪ್ಪುತ್ತೇನೆ. ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಪಕ್ಷದಲ್ಲಿ ನಾನೊಬ್ಬನೇ ಏನೂ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಾನೊಬ್ಬ ಕಾರ್ಯಕರ್ತ. ನಾನು ಪಕ್ಷದ ವರಿಷ್ಠರು, ನಾಯಕರ ಬಳಿ ಸ್ವತಂತ್ರವಾಗಿ ಮಾತನಾಡಬಹುದು. ಇಬ್ರಾಹಿಂ ಮಾತನಾಡಿದ್ದು ಎಲ್ಲವು ನಿಮ್ಮ ಮುಂದೆ ಇದೆ. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ ಇದನ್ನ ನಾನು ಒಪ್ಪುತ್ತೇನೆ. ನುಡಿದಂಗೆ ನಡೆದವರ ಜೊತೆ ಮಾತ್ರ ಮಾತನಾಡಬಹುದು. ಮೈತ್ರಿ ಕುರಿತು ನಾನೊಬ್ಬನೇ ಏನು ಮಾತನಾಡಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ನಿರ್ಧಾರಗಳು ಏನೇ ಇರಬಹುದು. ಆದರೆ ಭಾವನಾತ್ಮಕ ವಿಚಾರ ಇದೆ, ಸ್ವಾಭಿಮಾನವೂ ಇದೆ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ನನಗಿಲ್ಲ. ಜಾತ್ಯತೀತ ಶಕ್ತಿ ಅಂತಾನೇ ಸುರ್ಜೇವಾಲ ಮನವಿ ಮಾಡಿದ್ದು ಸುರ್ಜೇವಾಲ ಮಾಡಿರುವ ಮನವಿ ಅದು ಹೈಕಮಾಂಡ್ ಮನವಿ ಎಂದರು. ಇದನ್ನೂ ಓದಿ: Avyaan Dev: ದೇವೇಗೌಡರ ಕುಟುಂಬದ ಕುಡಿಗೆ ನಾಮಕರಣ; ನಿಖಿಲ್​- ರೇವತಿ ಪುತ್ರನ ಹೆಸರು ಇಲ್ಲಿದೆ ನೋಡಿ

ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಗರಂ ಇನ್ನು ಮತ್ತೊಂದು ಕಡೆ ಹೆಚ್ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರಿಗೆ ನಿಜಕ್ಕೂ ಬಿಜೆಪಿ ಸೋಲಬೇಕು ಅಂತಾ ಇದ್ದರೆ ಚುನಾವಣಾ ಪೂರ್ವದಲ್ಲಿ ಚರ್ಚೆ ಮಾಡುತ್ತಿದ್ದರು. ಈ ಬಗ್ಗೆ ಮನವಿ ಮಾಡಬಹುದಿತ್ತು. ಯಾವ ಕಾಂಗ್ರೆಸ್ ನಾಯಕರು ಈ ಬಗ್ಗೆ ಮ‌ನವಿ ಮಾಡಿಲ್ಲ. ಅವರಿಗೆ ಇರುವುದು 22 ಮತ ನಮ್ಮ ಬಳಿ 32 ಮತ ಇದೆ. ಈ ಹಿನ್ನೆಲೆಯಲ್ಲಿ ನಾವು ಅಭ್ಯರ್ಥಿ ಹಾಕಿದ್ದೇವೆ. ದೇವೇಗೌಡರು ಸೋನಿಯಾಗಾಂಧಿಗೆ ಮಾತನಾಡಿದ್ದರು. ಬೆಂಬಲಿಸುವಂತೆ ಮನವಿ ಮಾಡಿದ್ದರು. ನಮ್ಮ ಅಭ್ಯರ್ಥಿ ಯುಪಿಎಗೆ ಸಹಕಾರ ನೀಡಿ ಕೆಲಸ ಮಾಡಿದ್ದರು. ಹೈಕಮಾಂಡ್‌ಗೆ ರಾಜ್ಯದವರು ತಪ್ಪು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜೆಡಿಎಸ್ ಶಾಸಕರ ಮತ ಒಡೆಯುತ್ತೇವೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿಲ್ಲ ಅಂದರೆ ಬಿಜೆಪಿ ಸಹಾ ಮೂರನೇ ಅಭ್ಯರ್ಥಿ ಹಾಕುತ್ತಿರಲಿಲ್ಲ. ದೇವೇಗೌಡರನ್ನು ಮೊದಲು ಬೆಂಬಲಿಸಿದ್ದು ಬಿಜೆಪಿ. ಬಿಜೆಪಿ ಅಭ್ಯರ್ಥಿ ಹಾಕದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಹಾಕಲಿಲ್ಲ ಅಷ್ಟೇ. ಸುರ್ಜೇವಾಲ ಮಾತ್ರ ನನಗೆ ಎರಡನೇ ಮತಕ್ಕೆ ಮನವಿ ಮಾಡಿದರು. ನಮ್ಮ ಎರಡನೇ ಪ್ರಾಶಸ್ತ್ಯ ಮತ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ನಮ್ಮ ಎರಡನೇ ಮತ ನಿಮಗೆ ಹಾಕುತ್ತೇವೆ. ನಿಮ್ಮ ಎರಡನೇ ಮತ ನಮಗೆ ಹಾಕಿ ಅಂತಾ ಕೇಳಿದ್ದೇನೆ. ದೇವೇಗೌಡರು ರಾಜ್ಯಸಭೆಗೆ ಆಯ್ಕೆ ಕಾಂಗ್ರೆಸ್ ಪಾತ್ರ ಏನು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಂಗು ಮಚ್ಚು ತೋರಿಸಿ ಪುಂಡರ ಅಟ್ಟಹಾಸ

Published On - 11:27 am, Wed, 8 June 22