ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಹಳಿ ತಪ್ಪಿದ 40 ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲು
ಅಸನ್ಸೋಲ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ ರೈಲು ಅತ್ಯಂತ ಕಡಿಮೆ ವೇಗದಲ್ಲಿ ಹೊರಟಿದ್ದರಿಂದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಇಆರ್ ವಕ್ತಾರ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.
ಕೊಲ್ಕತ್ತಾ: 30ರಿಂದ 40 ಜನರಿದ್ದ ಪ್ಯಾಸೆಂಜರ್ ರೈಲು (Passenger Train) ಮಂಗಳವಾರ ಸಂಜೆ ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ (Asansol) ಹಳಿ ತಪ್ಪಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ. ರೈಲು ಹಳಿತಪ್ಪಿದ ಕಾರಣ ಎರಡು ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ರೈಲುಗಳು ವಿಳಂಬಗೊಂಡವು. ವರದಿಗಳ ಪ್ರಕಾರ, ಅಸನ್ಸೋಲ್- ಬೊಕಾರೊ MEMU ರೈಲಿನ ಕಂಪಾರ್ಟ್‌ಮೆಂಟ್‌ನ ನಾಲ್ಕು ಚಕ್ರಗಳು ಅಸನ್ಸೋಲ್ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದವು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಸನ್ಸೋಲ್ ರೈಲು ವಿಭಾಗದ ಡಿಆರ್‌ಎಂ ಪರಮಾನಂದ್ ಶರ್ಮಾ, ಅಸನ್ಸೋಲ್ ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ರೈಲು ಹಳಿತಪ್ಪಿತು. ಈ ಕೋಚ್‌ನಲ್ಲಿ ಸುಮಾರು 30ರಿಂದ 40 ಜನರಿದ್ದರು. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಹಳಿ ತಪ್ಪಿದ ಕಾರಣ ನಾವು ಕೆಲವು ಎಕ್ಸ್‌ಪ್ರೆಸ್ ರೈಲುಗಳನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ಆದರೆ, ಯಾವುದೇ ಗಂಭೀರ ಪರಿಣಾಮ ಬೀರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉಪನಗರ ರೈಲು ಯೋಜನೆಗೆ ಜೂನ್ 20ರಂದು ಶಂಕುಸ್ಥಾಪನೆ ಮಾಡಲಿದ್ದಾರೆ ಪ್ರಧಾನಿ ಮೋದಿ
ಅಸನ್ಸೋಲ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ ರೈಲು ಅತ್ಯಂತ ಕಡಿಮೆ ವೇಗದಲ್ಲಿ ಹೊರಟಿದ್ದರಿಂದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಇಆರ್ ವಕ್ತಾರ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ. ನಿನ್ನೆ ಸಂಜೆ 6.10ಕ್ಕೆ ಪ್ಲಾಟ್‌ಫಾರ್ಮ್‌ನಿಂದ ಹೊರಡುವಾಗ ಅಸನ್ಸೋಲ್-ಬೊಕಾರೊ ಮೆಮು ರೈಲಿನ ಹಿಂದಿನ ಕೋಚ್‌ನ ನಾಲ್ಕು ಚಕ್ರಗಳು ಹಳಿ ತಪ್ಪಿದವು ಎಂದು ಅವರು ಹೇಳಿದ್ದಾರೆ.
WB: Asansol-Bokaro MEMU train derailed shortly after leaving Asansol Railway Station
Around 30-40 people were in this coach; no casualties. We had to stop a few express trains for a while, due to the derailment, but no serious impact: DRM Parmanand Sharma, Asansol Rail Division pic.twitter.com/yiXJRDgP8V
— ANI (@ANI) June 7, 2022
ಇದು ಹೌರಾ- ನವದೆಹಲಿ ಮತ್ತು ಸೀಲ್ದಾ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ತಲಾ ಅರ್ಧ ಗಂಟೆ ವಿಳಂಬಕ್ಕೆ ಕಾರಣವಾಯಿತು. ಚಕ್ರಗಳನ್ನು ಮತ್ತೆ ಹಳಿಗಳಿಗೆ ಹಾಕಿದ ನಂತರ ರೈಲು ಸೇವೆಗಳನ್ನು ರಾತ್ರಿ 7.45ರ ಹೊತ್ತಿಗೆ ಸಾಮಾನ್ಯಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ