ಬೆಂಗಳೂರು ಉಪನಗರ ರೈಲು ಯೋಜನೆಗೆ ಜೂನ್ 20ರಂದು ಶಂಕುಸ್ಥಾಪನೆ ಮಾಡಲಿದ್ದಾರೆ ಪ್ರಧಾನಿ ಮೋದಿ
ಯೋಜನೆಯ ಅಂದಾಜು ವೆಚ್ಚ ರೂ. 15,767 ಕೋಟಿ. ಬೆಂಗಳೂರಿನಲ್ಲಿ ಸುಮಾರು 64 ನಿಲ್ದಾಣಗಳನ್ನು ಹೊಂದುವ ನಿರೀಕ್ಷೆಯಿರುವ ರೈಲು ನೆಟ್ವರ್ಕ್ ಗೆ ಕೇಂದ್ರ ಸರ್ಕಾರವು 149.348 ಕಿಲೋಮೀಟರ್‌ಗಳನ್ನು ಅನುಮೋದಿಸಿದೆ.
ಬೆಂಗಳೂರು: ₹15,000 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 20 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಬೆಂಗಳೂರು ಉಪನಗರ ರೈಲು ಯೋಜನೆ (BSRP) ಅನ್ನು 2020 ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಅನುಮೋದಿಸಿತ್ತು. ಆದರೆ ನಿರ್ಧರಿಸಿದ ಕಾರಿಡಾರ್‌ಗಳಲ್ಲಿ ಕೆಲಸಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಪ್ರಧಾನಿಯವರ ಆಗಮನಕ್ಕಾಗಿ ಕಾಯುತ್ತಿದೆ ಎಂದು ಹೇಳಲಾಗುತ್ತದೆ. ಯೋಜನೆಯ ಅಂದಾಜು ವೆಚ್ಚ ರೂ. 15,767 ಕೋಟಿ. ಬೆಂಗಳೂರು ಉಪನಗರ ರೈಲು ಯೋಜನೆ ಅನ್ನು 2020 ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಅನುಮೋದಿಸಿತ್ತು. ಆದರೆ ನಿರ್ಧರಿಸಿದ ಕಾರಿಡಾರ್‌ಗಳಲ್ಲಿ ಕೆಲಸಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಪ್ರಧಾನಿಯವರ ಆಗಮನಕ್ಕಾಗಿ ಕಾಯುತ್ತಿದೆ ಎಂದು ಹೇಳಲಾಗುತ್ತದೆ. ಯೋಜನೆಯ ಅಂದಾಜು ವೆಚ್ಚ ರೂ. 15,767 ಕೋಟಿ. ಬೆಂಗಳೂರಿನಲ್ಲಿ ಸುಮಾರು 64 ನಿಲ್ದಾಣಗಳನ್ನು ಹೊಂದುವ ನಿರೀಕ್ಷೆಯಿರುವ ರೈಲು ನೆಟ್ವರ್ಕ್ ಗೆ ಕೇಂದ್ರ ಸರ್ಕಾರವು 149.348 ಕಿಲೋಮೀಟರ್‌ಗಳನ್ನು ಅನುಮೋದಿಸಿದೆ. ಈ ಯೋಜನೆಯು 2026 ರ ಗಡುವನ್ನು ಹೊಂದಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ‘ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಸೌಕರ್ಯಗಳೊಂದಿಗೆ ಬೃಹತ್ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಅಭಿವೃದ್ಧಿಗಾಗಿ ನನ್ನೊಂದಿಗೆ ಸಚಿವರ ಮತ್ತು ಶಾಸಕರ ದಕ್ಷ ತಂಡ ಕೆಲಸ ಮಾಡುತ್ತಿದೆ, ಅತ್ಯಾಧುನಿಕ ಸೌಕರ್ಯಗಳೊಂದಿಗೆ ಅತ್ಯುತ್ತಮ ಬೆಂಗಳೂರು ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದ ತಮ್ಮ ಸರ್ಕಾರದ ದೃಷ್ಟಿಯನ್ನು ಉಲ್ಲೇಖಿಸಿದ ಬೊಮ್ಮಾಯಿ, ಬೆಂಗಳೂರು ಅಂತರಾಷ್ಟ್ರೀಯ ನಗರ ಆಗಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಗರೋತ್ಥಾನ ಯೋಜನೆಯಡಿ ಮೂಲಸೌಕರ್ಯ ಯೋಜನೆಗಳಿಗೆ ₹6,000 ಕೋಟಿ ವಿನಿಯೋಗಿಸಲಾಗಿದೆ.
ಪ್ರಮುಖ ಮಳೆ ನೀರು ಚರಂಡಿಗಳನ್ನು ಅಭಿವೃದ್ದಿಪಡಿಸಲು, ಮೆಟ್ರೋ, ಉಪನಗರ ರೈಲು, 12 ಸಿಗ್ನಲ್ ಮುಕ್ತ ಕಾರಿಡಾರ್ ಮತ್ತು ಇತರ ಯೋಜನೆಗಳನ್ನು ₹ 1,500 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತದೆ.
ರಾಜ್ಯದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:31 pm, Tue, 7 June 22