AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಭೇಟಿ ಮಾಡಿ ಪಠ್ಯ ಪರಿಷ್ಕರಣೆ ಸಂಬಂಧ 2 ನಿರ್ಧಾರ ಕೈಗೊಂಡಿದ್ದೇವೆ; ನಮ್ಮ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಜನರ ಮುಂದಿಡುತ್ತೇವೆ -ಸಚಿವ ಬಿ.ಸಿ. ನಾಗೇಶ್

ಸಿಎಂ ಭೇಟಿ ಮಾಡಿ ಎರಡು ನಿರ್ಣಯ ತೆಗೆದುಕೊಂಡಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಏನು ತೆಗೆದು ಪಠ್ಯದಲ್ಲಿ ಸೇರಿಸಿದ್ದಾರೆ? ನಮ್ಮ ಸರ್ಕಾರದಲ್ಲಿ ಏನು ಪಠ್ಯಪುಸ್ತಕ ಪರಿಷ್ಕರಣೆ ಆಗಿದೆ. ಅದೆಲ್ಲವನ್ನೂ ರಾಜ್ಯದ ಜನರ ಮುಂದಿಡುತ್ತೇವೆ.

ಸಿಎಂ ಭೇಟಿ ಮಾಡಿ ಪಠ್ಯ ಪರಿಷ್ಕರಣೆ ಸಂಬಂಧ 2 ನಿರ್ಧಾರ ಕೈಗೊಂಡಿದ್ದೇವೆ; ನಮ್ಮ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಜನರ ಮುಂದಿಡುತ್ತೇವೆ -ಸಚಿವ ಬಿ.ಸಿ. ನಾಗೇಶ್
ಶಿಕ್ಷಣ ಸಚಿವ ಬಿಸಿ ನಾಗೇಶ್
TV9 Web
| Edited By: |

Updated on:Jun 07, 2022 | 12:29 PM

Share

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ ಹಿನ್ನೆಲೆ ರಾಜ್ಯ ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಜೂನ್ 9ರಂದು ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಇನ್ನು ಮತ್ತೊಂದು ಕಡೆ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿ ಆರ್.ಟಿ.ನಗರದ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿರನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿಯಾಗಿದ್ದಾರೆ. ಪಠ್ಯ ಪರಿಷ್ಕರಣೆಗೆ ವಿಪಕ್ಷಗಳು, ಮಠಾಧೀಶರಿಂದ ವಿರೋಧ ಹಿನ್ನೆಲೆ ನಿನ್ನೆ RSS ಮುಖಂಡರೊಂದಿಗೆ ಚರ್ಚೆ ನಡೆಸಿದ್ದ ಶಿಕ್ಷಣ ಸಚಿವರು ಇಂದು ಸಿಎಂಗೆ ಸದ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಸಾಹಿತಿ ಬರಗೂರು ರಾಮಚಂದ್ರಪ್ಪ ಹಲವು ಪಠ್ಯವನ್ನು ತೆಗೆದಿದ್ದಾರೆ. ನಾಡು ನುಡಿ ಮೇಲೆ ಅಭಿಮಾನ ಹುಟ್ಟುವ ಪಾಠಗಳನ್ನೇ ಬರಗೂರು ತೆಗೆದಿದ್ರು. ಸಿದ್ದರಾಮಯ್ಯ ಇದರ ಬಗ್ಗೆ ಉತ್ತರ ಕೊಡಬೇಕಿತ್ತು. ಅದರ ವಿಚಾರಕ್ಕೆ ಸಿದ್ದರಾಮಯ್ಯ ಹೋಗ್ಲೇ ಇಲ್ಲ. ಸಿದ್ದರಾಮಯ್ಯ ಆ ವಿಚಾರದ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: National Chocolate Ice Cream Day 2022: ಕಪ್ಪನ್ನೇ ಮುರಿದು ತಿಂದರೂ ಐಸ್​ಕ್ರೀಮ್ ಕೋಪಗೊಳ್ಳದು!

ಪಠ್ಯ ಪರಿಷ್ಕರಣೆ ಸಂಬಂಧ 2 ನಿರ್ಧಾರ ಕೈಗೊಂಡಿದ್ದೇವೆ ಸಿಎಂ ಭೇಟಿ ಮಾಡಿ ಎರಡು ನಿರ್ಣಯ ತೆಗೆದುಕೊಂಡಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಏನು ತೆಗೆದು ಪಠ್ಯದಲ್ಲಿ ಸೇರಿಸಿದ್ದಾರೆ? ನಮ್ಮ ಸರ್ಕಾರದಲ್ಲಿ ಏನು ಪಠ್ಯಪುಸ್ತಕ ಪರಿಷ್ಕರಣೆ ಆಗಿದೆ. ಅದೆಲ್ಲವನ್ನೂ ರಾಜ್ಯದ ಜನರ ಮುಂದಿಡುತ್ತೇವೆ. ಜನರೇ ಪ್ರಭುಗಳು, ಜನರು ತಪ್ಪು ಅಂದ್ರೆ ಬದಲಾಯಿಸುತ್ತೇವೆ. ಬಸವಣ್ಣನವರ ಬಗ್ಗೆ ಮೊದಲಿನಂತೆಯೇ ಪಠ್ಯದಲ್ಲಿ ಇರಲಿದೆ. ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಅಂಬೇಡ್ಕರ್ರ ಯಾವ ವಿಷಯ ಬಿಡಲಾಗಿದೆ ಅದು ಸೇರ್ಪಡೆ ಮಾಡಲಾಗುತ್ತೆ. ಇಷ್ಟು ಹೇಳಿದ ಮೇಲೂ ರಾಜಕೀಯಗೊಳಿಸುವ ಹುನ್ನಾರ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿಂಧೂ ಸಂಸ್ಕೃತಿಯನ್ನು ತೆಗೆದು ನೆಹರು ಪತ್ರ ಸೇರಿಸಿದ್ದರು. ಈ ಮಣ್ಣು ನಮ್ಮದು ಈ ನಾಡು ನಮ್ಮದು ಪಠ್ಯ ಬರಗೂರು ರಾಮಚಂದ್ರಪ್ಪ ಪಠ್ಯದಿಂದ ತೆಗೆದು ಹಾಕಿದ್ದರು. ಜನರ ಮುಂದೆ ಇಟ್ಟ ಮೇಲೆ ಜನರೇ ತೀರ್ಮಾನ ಮಾಡಲಿ. ಲೋಪ ದೋಷ ಆಗಿದ್ದರೆ ಜನರೇ ಹೇಳಲಿ. ಶಿಕ್ಷಣ ಇಲಾಖೆ ತಜ್ಞರ ಜೊತೆ ಚರ್ಚಿಸಿಯೇ ತೀರ್ಮಾನ ಮಾಡಿದ್ದೇವೆ. ಇನ್ನೊಂದು ವಾರದೊಳಗೆ ಪಬ್ಲಿಕ್ ಡೊಮೇನ್ಗೆ ಹೋಗ್ತಿವಿ ಎಂದರು ಸಚಿವ ಬಿ.ಸಿ.ನಾಗೇಶ್ ಇಳಿಸಿದ್ದಾರೆ. ಇದನ್ನೂ ಓದಿ: DK Shivakumar PC; ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ, ಜೂನ್ 9ರಂದು ಪ್ರತಿಭಟನೆ ಕರೆ ಕೊಟ್ಟ ಡಿಕೆ ಶಿವಕುಮಾರ್

Published On - 12:27 pm, Tue, 7 June 22