ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನ ಹತ್ಯೆಗೆ ಮುಂದಾದ ಆರೋಪಿ; ಜುಗರಾಜ್ ಜೈನ್ ಹತ್ಯೆ ಪ್ರಕರಣದಲ್ಲಿ ನಾಲ್ವರ ಬಂಧನ
ಕೊಲೆಯಾದ ಜುಗರಾಜ್ ಜೈನ್ ಬಳಿ 15 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಆರೋಪಿ ಬಿಜೋರಾಮ್, ಹಣದ ಆಸೆಗೆ ತನ್ನ ಮಾಲೀಕನನ್ನೆ ಕೊಂದಿದ್ದಾನೆ. ಆದ್ರೆ ಕೊಲೆಯ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದ ಜುಗರಾಜ್ ಜೈನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಹಂತದಲ್ಲಿ ಓರ್ವ ಅರೋಪಿ ಮಾತ್ರ ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದ್ರೆ ತನಿಖಾ ಹಂತದಲ್ಲಿ ನಾಲ್ವರು ಅರೋಪಿಗಳು ಭಾಗಿ ಆಗಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಿಜೋರಾಮ್, ಮಹೇಂದ್ರ, ಪೊರಾನ್, ಓಂಪ್ರಕಾಶ್ ಬಂಧಿತರು.
ಬಂಧಿತರಿಂದ 8.75 ಕೆ.ಜಿ ಚಿನ್ನ, 53 ಲಕ್ಷ ನಗದು, 4 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಬಿಜೋರಾಮ್ ಸೇರಿ ನಾಲ್ವರು ಆರೋಪಿಗಳ ಅರೆಸ್ಟ್ ಆಗಿದ್ದು ಗುಜರಾತ್‌ನ ಅಮೀರ್‌ಗಢ ಚೆಕ್‌ಪೋಸ್ಟ್‌ನಲ್ಲಿ ಬಿಜೋರಾಮ್ ಬಂಧಿಸಲಾಗಿತ್ತು. ಲಾರಿಯಲ್ಲಿ ಅವಿತುಕುಳಿತಿದ್ದ ಉದ್ಯಮಿ ಕೊಲೆ ಆರೋಪಿ ಬಿಜೋರಾಮ್, ಮೇ 25ರಂದು ಕೊಲೆಗೈದು ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದ. ಮತ್ತೊಬ್ಬ ಆರೋಪಿ ಓಂರಾವ್‌ಗಾಗಿ ಪೊಲೀಸರು ಹುಡುಕಾಟುತ್ತಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಖಾರದ ಪುಡಿ ಹಾಕಿ ಕತ್ತು ಹಿಸುಕಿ ವೃದ್ಧನ ಕೊಲೆ ಮಾಡಿದ ಜೊತೆಗಾರ; ನಾಲ್ಕು ಬ್ಯಾಗ್ಗಳಲ್ಲಿ ಚಿನ್ನಾಭರಣ ಕದ್ದು ಪರಾರಿ
ಪತ್ನಿಯ ಕಾಟಕ್ಕೆ ಭಯಾನಕ ಕೃತ್ಯಕ್ಕೆ ಮುಂದಾದ ಬಿಜೋರಾಮ್ ಕೊಲೆಯಾದ ಜುಗರಾಜ್ ಜೈನ್ ಬಳಿ 15 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಆರೋಪಿ ಬಿಜೋರಾಮ್, ಹಣದ ಆಸೆಗೆ ತನ್ನ ಮಾಲೀಕನನ್ನೆ ಕೊಂದಿದ್ದಾನೆ. ಆದ್ರೆ ಕೊಲೆಯ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ. ಆರೋಪಿ ಬಿಜೋರಾಮ್ ಪತ್ನಿ ಹಣ ತರುವಂತೆ ನಿತ್ಯ ಪೀಡಿಸುತ್ತಿದ್ದಳಂತೆ. ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನ ಹತ್ಯೆಗೆ ಬಿಜೋರಾಮ್ ಸಂಚು ರೂಪಿಸಿದ್ದ. ಬಳಿಕ ತನ್ನ ಮಾಲೀಕನನ್ನೆ ಕೊಂದು ಹಣ, ಚಿನ್ನ ಕದ್ದು ಎಸ್ಕೇಪ್ ಆಗಿದ್ದ. ಮೊದಲ ಹಂತದ ತನಿಖೆಯಲ್ಲಿ ಬಿಜೋರಾಮ್ ಮಾತ್ರ ಆರೋಪಿ ಎನ್ನಲಾಗಿತ್ತು. ತನಿಖೆ ಬಳಿಕ ಪ್ರಕರಣದಲ್ಲಿ ಆತನ ಸ್ನೇಹಿತರು ಕೂಡ ಭಾಗಿಯಾಗಿರುವುದು ಪತ್ತೆಯಾಗಿದೆ. ಬಿಜೋರಾಮ್ ಮತ್ತು ಸ್ನೇಹಿತರು ಜುಗರಾಜ್ ಕೊಲೆ ಮಾಡಿ ಬಸ್ ಮೂಲಕ ಚಿತ್ರದುರ್ಗಕ್ಕೆ ಹೋಗಿ ಬಳಿಕ ಕಾರಿನಲ್ಲಿ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿಯಿಂದ ಗೋವಾಗೆ ರೈಲಿನಲ್ಲಿ ತೆರಳಿದ್ದಾರೆ. ಬಿಜೋರಾಮ್, ಮಹೇಂದ್ರ ಗೋವಾದ ಪೊರಾನ್ ರೂಂಗೆ ತೆರಳಿ ಗೋವಾದಲ್ಲಿ ಚಿನ್ನ ಇಟ್ಟು ಹಣದೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದಾರೆ. ಬಳಿಕ ರಾಜಸ್ಥಾನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಈ ಬಗ್ಗೆ ಗುಜರಾತ್ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಹಣ, ಚಿನ್ನ ಬಚ್ಚಿಟ್ಟಿದ್ದ ಬಗ್ಗೆ ಮಾಹಿತಿ ನೀಡಿದ್ರು. ಸದ್ಯ ಎ2 ಆರೋಪಿ ಓಂರಾವ್‌ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಓಂರಾವ್ ಬಳಿ ಅಂದಾಜು 4 ಕೆ.ಜಿ ಚಿನ್ನ ಇರೋ ಮಾಹಿತಿ ಇದೆ. ಈ ಬಗ್ಗೆ ಎ1 ಆರೋಪಿ ಬಿಜೋರಾಮ್ ತನಿಖೆ ವೇಳೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಹಾವೇರಿ: ಲಿಂಗದಹಳ್ಳಿ ಹಿರೇಮಠದಿಂದ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಖ್ಯಾತಿಯ ಸ್ಫಟಿಕಲಿಂಗ ಕಳುವು
Published On - 1:19 pm, Tue, 7 June 22