AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar PC; ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ, ಜೂನ್ 9ರಂದು ಪ್ರತಿಭಟನೆ ಕರೆ ಕೊಟ್ಟ ಡಿಕೆ ಶಿವಕುಮಾರ್

ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಅವರು ಹುಟ್ಟಿದ ಊರು ಎಲ್ಲಾ ತೆಗೆದುಹಾಕಿದರೆ ಇದಕ್ಕಿಂತ ಇನ್ನೇನು ಬೇಕು. ಸಂವಿಧಾನದ ಹೆಸರಲ್ಲಿ ಸರ್ಕಾರ ನಡೆಸ್ತಾ ಇದ್ದಾರೆ. ಇದು ಅಂಬೇಡ್ಕರ್ ಗೆ ಮಾಡಿದ ಅವಮಾನ ಅಲ್ಲ, ಇಡೀ ಭಾರತ ಭೂಮಿಗೆ ಮಾಡಿದ ಅವಮಾನ. ಅವರು ಈ ದೇಶದ ಆಸ್ತಿ.

DK Shivakumar PC; ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ, ಜೂನ್ 9ರಂದು ಪ್ರತಿಭಟನೆ ಕರೆ ಕೊಟ್ಟ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​
TV9 Web
| Updated By: ಆಯೇಷಾ ಬಾನು|

Updated on:Jun 07, 2022 | 12:18 PM

Share

ಬೆಂಗಳೂರು: ಕುವೆಂಪು ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದರು. ಪಠ್ಯಪುಸ್ತಕ ಪರಿಷ್ಕರಣೆ(Textbook Revision Controversy) ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಸ್ವಾಮೀಜಿಗಳು, ಹಿರಿಯರು, ಸಾಹಿತಿಗಳು ಕೂಡ ಧ್ವನಿ ಎತ್ತಿದ್ದಾರೆ. ಅವರೆಲ್ಲರ ಧ್ವನಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತೆ. ಪಠ್ಯದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ ರಾಜ್ಯದ ವರವೋ ಶಾಪವೋ ಅರ್ಥ ಆಗ್ತಿಲ್ಲ. ನಾವೆಲ್ಲ ನೆಮ್ಮದಿಯಿಂದ ಬದುಕ್ತಿದ್ದೇವೆ. ಕರ್ನಾಟಕದಲ್ಲಿ ಬದುಕು ವರವೋ ಶಾಪವೋ ಗೊತ್ತಾಗ್ತಾ ಇಲ್ಲ. ಇದು ಶಾಂತಿಯ ತೋಟ ಅಂತಾ ಹಿರಿಯರು ಕರೆದಿದ್ದಾರೆ. ಕುವೆಂಪು ಎಲ್ಲಾ ಜನಾಂಗಕ್ಕೂ ಕೂಡ ವಿಶ್ವಮಾನವ ತತ್ವ ಬೋದನೆ ಮಾಡಿ ಶಾಂತಿಯ ತೋಟ ಅಂದಿದ್ದಾರೆ. ಈಗ ಪರಿಷ್ಕರಣ ನೆಪದಲ್ಲಿ ಮಕ್ಕಳ ಪಠ್ಯಪುಸ್ತಕದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡಿತಾ ಇದೆ. ಮೊದಲ ಬಾರಿ ಪೀಠಾಧಿಪತಿಗಳು, ಸಂಘಟನೆಗಳು ರಾಜಕೀಯ ಮುಖಂಡರು ಹೊರತು ಪಡಿಸಿ ಅನೇಕರು ಸರ್ಕಾರದ ವಿರುದ್ಧ ಮನವಿಯನ್ನ ಎತ್ತಿದ್ದಾರೆ. ಇದನ್ನೂ ಓದಿ: ಕೆ ಅರ್ ಪೇಟೆ ಆರೆಸ್ಸೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚೆಡ್ಡಿ ಕಳಿಸುವ ಅಭಿಯಾನ ಮುಂದುವರಿಸಿದ್ದಾರೆ

ನಾನು, ಮುರುಗಾ ಶ್ರೀ, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ, ಪಂಚಮಸಾಲಿ, ಸಾಣೆಹಳ್ಳಿ ಶ್ರೀ, ಯಾರ್ಯಾರು ದನಿ ಎತ್ತಿದ್ದಾರೋ ಅವರಿಗೆ ಕಾಂಗ್ರೆಸ್ ಪಕ್ಷ ಅವರ ಪಾದಗಳಿಗ ನಮಸ್ಕಾರ ಹೇಳಿ ಅವರ ದನಿಯ ಜೊತೆ ನಮ್ಮ ದನಿ ಸೇರಿಸ್ತೇವೆ. ಇಂತಹ ಹಿರಿಯರು ಸಾಹಿತಿಗಳಿಗೆ ರಾಜಕಾರಣ ಏಕೆ ಬೇಕು ಅಂತಿರಾ? ಆದ್ರೆ ಅವರು ವಿದ್ಯಾ ಸಂಸ್ಥೆ ನಡೆಸ್ತಾ ಇದ್ದಾರೆ. ಸರ್ಕಾರ ಮಾಡದ ಕೆಲಸ ಅವರು ಮಾಡ್ತಾ ಇದ್ದಾರೆ. ಮಕ್ಕಳಿಗೆ ವಿದ್ಯಾದಾನ ಮಾಡ್ತಾ ಇದಾರೆ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಅವರು ಹುಟ್ಟಿದ ಊರು ಎಲ್ಲಾ ತೆಗೆದುಹಾಕಿದರೆ ಇದಕ್ಕಿಂತ ಇನ್ನೇನು ಬೇಕು. ಸಂವಿಧಾನದ ಹೆಸರಲ್ಲಿ ಸರ್ಕಾರ ನಡೆಸ್ತಾ ಇದ್ದಾರೆ. ಇದು ಅಂಬೇಡ್ಕರ್ ಗೆ ಮಾಡಿದ ಅವಮಾನ ಅಲ್ಲ, ಇಡೀ ಭಾರತ ಭೂಮಿಗೆ ಮಾಡಿದ ಅವಮಾನ. ಅವರು ಈ ದೇಶದ ಆಸ್ತಿ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಮ್ಮ ಸಂವಿಧಾನವನ್ನ ಬೇರೆ ಬೇರೆ ದೇಶಗಳು ಅಳವಡಿಸಿಕೊಂಡಿದ್ದಾರೆ. ನಿಜ ಸಮಿತಿ ಇತ್ತು. ಆದರೆ ನಾವೆಲ್ಲ ಅವರಿಗೆ ಗೌರವ ಕೊಡ್ತಾ ಇದ್ವಿ . ಗಾಂಧಿಜಿಗೆ ಫಾದರ್ ಆಫ್ ನೇಷನ್ ಅನ್ನೋದು ತೆಗೆಯೋದು ಸಾಧ್ಯನಾ. ಅಂಬೇಡ್ಕರ್ ಅವರಿಗೆ ಸಂವಿಧಾನ ಶಿಲ್ಪಿ ಅನ್ನೋದು ತೆಗೆದು ಹಾಕಲು ಸಾಧ್ಯನಾ? ಸಿಎಂ ಕೇವಲ ಬಸವಣ್ಣರ ವಿಚಾರವನ್ನ ಮಾತ್ರ ನೋಡ್ತಿವಿ. ಚೂರು ಬದಲಾಯಿಸ್ತಿವಿ ಅಂತಾರೆ. ಸಿಎಂ ಕೇವಲ ಒಂದು ರಾಜಕೀಯ ಪಕ್ಷದ ಸಿಎಂ ಅಲ್ಲ. ನೀವು ನಿಮ್ಮ ರಾಷ್ಟ್ರೀಯ ಶಿಕ್ಷಣ ಪಾಲಿಸಿ ಮಾಡಿದ್ದೀರಿ. ಅದು ನಾಗಪುರ ಪಾಲಿಸಿ. ನೀವು ಇಟ್ಕೋಳಿ ಅದನ್ನ ನಮಗೇನು ಪ್ರಾಬ್ಲಂ ಇಲ್ಲ. ಆದರೆ ರಾಷ್ಟ್ರೀಯ ಶಿಕ್ಷಣ ಪಾಲಿಸಿ ಆಗಲು ಸಾಧ್ಯವಿಲ್ಲ. ಬಸವಣ್ಣನ ಜನಿವಾರದ ಬಗ್ಗೆನೂ ಮಾತನಾಡ್ತಿರಲ್ಲ. ಅದು ಪವಿತ್ರವಾದ ದಾರ. ಅದರಲ್ಲೂ ವಿಷ ಬೀಜ ಬಿತ್ತುತ್ತಿರಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಧರ್ಮದ ವಿಚಾರದಲ್ಲಿ ತಿರುಚಿ ಅಭಿಪ್ರಾಯ ಬರುವಂತೆ ಮಾಡ್ತಿರಿ. ಕುವೆಂಪು ಅವರ ವಿಚಾರದಲ್ಲಿ ಕನ್ನಡಕ್ಕೆ ಮೊದಲ ಜ್ಙಾನಪೀಠ ತಂದುಕೊಟ್ಟವರಿಗೆ ಲಘುವಾಗಿ ಮಾತನಾಡುವುದು ಬಿಜೆಪಿ ಮನಸ್ಥಿತಿ ಸರಿ ಇಲ್ಲ. ಭಗತ್ ಸಿಂಗ್ ಯುವಕರಿಗೆ ಸ್ಪೂರ್ತಿ. ಅವರ ವಿಚಾರ ಕೈ ಬಿಡ್ತಾರೆ. ನಾರಾಯಣ‌ಗುರು ಸ್ತಬ್ದ ಚಿತ್ರ ಕೈ ಬಿಟ್ರಿ. ಈಗ ಪಠ್ಯದಿಂದ ಕೈ ಬಿಟ್ಟಿದ್ದೀರಿ. ಅದರಿಂದ ಏನು ತೊಂದರೆ ಆಗುತ್ತೆ ಅಂತಾ ಹೇಳ ಬೇಕು. ಧಾರ್ಮಿಕ ಚಳುವಳಿ ಮಾಡಿದ ನಾರಾಯಣ ಗುರು, ವಿವೇಕಾನಂದ, ಪೆರಿಯರ್ ವಿಚಾರಕ್ಕೆ ಕತ್ತರಿ ಹಾಕಿ ತಿರುಚಿದ್ದಾರೆ. ಸಾವಿತ್ರಿ ಬಾಯಿ ಪುಲೆ, ಭಕ್ತಿ ಮತ್ತು ಸೂಫಿ ಪಂತ ತೆಗೆಯಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಶುರುವಾಯ್ತು ಕೊರೊನಾ 4ನೇ ಅಲೆ ಆತಂಕ! ಮಾರ್ಗಸೂಚಿ ಜಾರಿಗೆ ತಜ್ಞರ ಸಲಹೆ

ರಾಜ್ಯ ಸರ್ಕಾರದ ನಡೆ ಖಂಡಿಸಿ ಪಕ್ಷದ ವತಿಯಿಂದ ಪ್ರತಿಭಟನೆ ಯಾರ್ಯಾರು ಪಠ್ಯ ಪುಸ್ತಕದ ವಿರುದ್ದ ದನಿ ಎತ್ತಿದ್ದಾರೆ ಅವರಿಗೆ ಬೆಂಬಲ ನೀಡೋದು ನಮ್ಮ ಕರ್ತವ್ಯ. ಜೂನ್ 9 ರಂದು ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಬೆಳಿಗ್ಗೆ 10ಕ್ಕೆ ಪ್ರತಿಭಟನೆ ಮಾಡ್ತೇವೆ. ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ ಹಿನ್ನೆಲೆ ರಾಜ್ಯ ಸರ್ಕಾರದ ನಡೆ ಖಂಡಿಸಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತೆ. ಜೂನ್ 9ರಂದು ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತೇವೆ. ಪಕ್ಷದ ಸಂಸದರು, ಶಾಸಕರು, ಎಂಎಲ್​ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

Published On - 11:48 am, Tue, 7 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ