ಬಡ ಮಕ್ಕಳ ಕಲಿಕೆಗಾಗಿ ‘ಕೇರ್ ಮೋರ್’ ಫೌಂಡೇಷನ್​ನಿಂದ ವಿನೂತನ ಅಭಿಯಾನ; ಮರು ಬಳಕೆ ಮರು ಉಪಯೋಗದಡಿ ನೆರವಾಗುತ್ತಿದೆ ಸಂಸ್ಥೆ

Care More Foundation | Samyukta Hornad: ಬೆಂಗಳೂರಿನ ಸಿನಿಮಾ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವ ಜನರು ಭಾಗಿಯಾಗಿರುವ ಸಂಸ್ಥೆ ‘ಕೇರ್ ಮೋರ್ ಫೌಂಡೇಶನ್’. ಈ ಸಂಸ್ಥೆ ಇದೀಗ ಹೊಸದೊಂದು ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದೆ.

ಬಡ ಮಕ್ಕಳ ಕಲಿಕೆಗಾಗಿ ‘ಕೇರ್ ಮೋರ್’ ಫೌಂಡೇಷನ್​ನಿಂದ ವಿನೂತನ ಅಭಿಯಾನ; ಮರು ಬಳಕೆ ಮರು ಉಪಯೋಗದಡಿ ನೆರವಾಗುತ್ತಿದೆ ಸಂಸ್ಥೆ
‘ಕೇರ್ ಮೋರ್ ಫೌಂಡೇಶನ್’ ತಂಡ
Follow us
TV9 Web
| Updated By: shivaprasad.hs

Updated on: Jun 07, 2022 | 1:21 PM

‘ಕೇರ್ ಮೋರ್’ ಫೌಂಡೇಶನ್ (Care More Foundation) ಈ ಹೆಸರಿನ ಸಂಸ್ಥೆಯನ್ನ ನೀವೀಗಾಗಲೇ ಕೇಳಿರುತ್ತೀರಿ. ಪರಿಸರ ಪ್ರೇಮಿಗಳ ತಂಡವೊಂದು ಮನಸಾರೆ ಸೇರಿ ಪ್ರಕೃತಿಗೆ ಪೂರಕವಾದಂತಹ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಮೆಚ್ಚುಗೆ ಗಳಿಸಿಕೊಂಡಿರುವ ಸಂಸ್ಥೆ ಇದು. ಇದರಲ್ಲಿ ಬೆಂಗಳೂರಿನ (Bengaluru) ಸಿನಿಮಾ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವ ಜನರು ಭಾಗಿಯಾಗಿದ್ದಾರೆ. ಈ ಸಂಸ್ಥೆ ಇದೀಗ ಹೊಸದೊಂದು ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಹೌದು ಜೂನ್ ತಿಂಗಳು ಅಂದ್ರೆ ಶಾಲೆಗಳ ಆರಂಭ. ಕೆಲವು ಮಕ್ಕಳು ಸಮವಸ್ತ್ರ ಧರಿಸಿ, ಪುಸ್ತಕಗಳನ್ನು ತುಂಬಿದ ಬ್ಯಾಗ್ ಹೊತ್ತು ಶಾಲೆಯೆಡೆಗೆ ಮುಖ ಮಾಡಿದ್ರೆ, ಇನ್ನು ಕೆಲವು ಮಕ್ಕಳು ಶಾಲೆಗೆ ಹೋಗಿ ಕಲಿಯೋಣವೆಂದರೆ ಮನೆಯಲ್ಲಿನ ಬಡತನವೇ ಅಡ್ಡಗೋಡೆಯಾಗಿ ನಿಂತಿರುತ್ತೆ. ಶಾಲೆಯಲ್ಲಿ ನೀಡೋ ಪುಸ್ತಕಗಳ ಹೊರಲು ಬ್ಯಾಗ್ ಖರೀದಿಸಲಾಗದ ಪರಿಸ್ಥಿತಿ ಎಷ್ಟೋ ಮನೆಗಳಲ್ಲಿವೆ. ಅಂಥವರಿಗೆ ನೆರವಾಗಲು ಈ ಬಾರಿ ಕೇರ್ ಮೋರ್ ಫೌಂಡೇಶನ್ ಪಣತೊಟ್ಟಿದೆ.

ಇದೀಗ ಮರು ಬಳಕೆ ಮರು ಉಪಯೋಗ ಎಂಬ ಕಾನ್ಸೆಪ್ಟಿನಡಿಯಲ್ಲಿ ಬಡ ಮಕ್ಕಳಿಗೆ ನೆರವಾಗುವಂಥಾ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾಗಿ ಬಡ ಮಕ್ಕಳಿಗೆ ನೆರವಾಗುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿದೆ. ಹಾಗಾದರೆ ಇಂಥದ್ದೊಂದು ಸಾರ್ಥಕ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆಂಬ ಪ್ರಶ್ನೆ ಎದುರಾಗೋದು ಸಹಜ. ಅದಕ್ಕೂ ಸಲೀಸಾದ ಮಾರ್ಗಗಳನ್ನೇ ಈ ಫೌಂಡೇಶನ್ ಮಾಡಿದೆ. ಹೌದು, ನಿಮ್ಮ ಮನೆಯಲ್ಲಿ ಬಳಸದೇ ಹಾಗೇ ಇಟ್ಟಿರುವ ಮಕ್ಕಳ ಶಾಲಾ ಬ್ಯಾಗುಗಳಿದ್ದರೆ ಅವುಗಳನ್ನು ಸದರಿ ಫೌಂಡೇಷನ್ನಿಗೆ ದಾನ ಮಾಡುವಂತೆ ವಿನಂತಿಸಲಾಗಿದೆ. ದಿನಾಂಕ 05.06.22 ರಿಂದ 20.06.22ರ ವರೆಗೂ ಬ್ಯಾಗುಗಳನ್ನು ದಾನವಾಗಿ ನೀಡಲು ಅವಕಾಶವಿದೆ. ಬ್ಯಾಗ್​ಗಳನ್ನು ದಾನ ಮಾಡಲು ಇಚ್ಛಿಸುವವರು CareMore Foundation@Caremorefdn ಅನ್ನು ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್​ನಲ್ಲಿ ತೆರೆದು ಮಾಹಿತಿ ಪಡೆದುಕೊಂಡು ಈ ಅಭಿಯಾನಕ್ಕೆ ಕೈ ಜೋಡಿಸಬಹುದಾಗಿದೆ.

ಇದನ್ನೂ ಓದಿ
Image
Meghana Raj: ಚಿರು ಅಗಲಿ ಎರಡು ವರ್ಷ; ಭಾವನಾತ್ಮಕ ಪೋಸ್ಟ್ ಮೂಲಕ ಪತಿಯನ್ನು ಸ್ಮರಿಸಿದ ಮೇಘನಾ​
Image
Singer KK: ಕೆಕೆ ಹಾಡಿದ್ದ ಕೊನೆಯ ಹಾಡು ರಿಲೀಸ್; ನೆಚ್ಚಿನ ಗಾಯಕನ ಗೀತೆಯನ್ನು ಕೇಳಿ ಭಾವುಕರಾದ ಅಭಿಮಾನಿಗಳು
Image
ಎರಡು ಶೇಡ್​ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ
Image
Ashika Ranganatha: ಕ್ಯೂಟ್​ ಫೋಟೋಶೂಟ್​ನಲ್ಲಿ ಮಿಂಚಿದ ಆಶಿಕಾ ರಂಗನಾಥ್

ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚೆಚ್ಚು ಯುವ ಸಮೂಹವನ್ನು ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ‘ಕೇರ್ ಮೋರ್’ ಫೌಂಡೇಶನ್ ಕಾರ್ಯೋನ್ಮುಖವಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿ ಸಾಕಷ್ಟು ಪರಿಸರ ಕಾಳಜಿ ಪರ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದೆ. ಸಂಯುಕ್ತಾ ಹೊರನಾಡು ಅವರಂಥಾ ಯುವ ನಟಿಯರು ಇದರಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಪರಿಸರ ಪ್ರೇಮ ಮೆರೆಯುತ್ತಾ ಯುವಕರನ್ನೆಲ್ಲ ಅದರತ್ತ ಉತ್ತೇಜಿಸುತ್ತಿದ್ದಾರೆ. ಇದೀಗ ಸಮರ್ಥವಾದ ಪರಿಸರ ಪ್ರೇಮಿ ಬಳಗವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಾರ್ಯಕ್ರಮಗಳ ಮೂಲಕ ಪರಿಸರ ಜಾಗೃತಿ ಮೂಡಿಸುವ ಧ್ಯೇಯವನ್ನು ಈ ಸಂಸ್ಥೆ ಹೊಂದಿದೆ. ಅದರ ಭಾಗವಾಗ ಈ ಬ್ಯಾಗ್ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕೆಂಬುದು ಈ ಸಂಸ್ಥೆಯ ಆಶಯವಾಗಿದೆ.

ಸಂಯುಕ್ತಾ ಹೊರನಾಡು ಈ ಬಗ್ಗೆ ಹಂಚಿಕೊಂಡಿರುವ ಟ್ವೀಟ್:

ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ತಮ್ಮ ಪರಿಚಯಸ್ಥರು, ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಸ್ಥರು ಎಲ್ಲರನ್ನೂ ಪಾಲ್ಗೊಳ್ಳಲು ಪ್ರೇರೇಪಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ‘ಕೇರ್ ಮೋರ್’ ಫೌಂಡೇಶನ್ ಕಡೆಯಿಂದ ವಿನಂತಿಸಿಕೊಳ್ಳಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ