AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Chocolate Ice Cream Day 2022: ಕಪ್ಪನ್ನೇ ಮುರಿದು ತಿಂದರೂ ಐಸ್​ಕ್ರೀಮ್ ಕೋಪಗೊಳ್ಳದು!

Stress Free : ‘ಸರಿ. ಮುಂದೆ, ಮತ್ತೆ...’ ಎನ್ನುತ್ತಿರುತ್ತೇನೆ. ಆಕೆಯ ಐಸ್​ಕ್ರೀಮ್​ ಕೂಡ ಮುಗಿದಿರುತ್ತದೆ ಉದ್ವೇಗ, ಹತಾಶೆ, ಕೋಪ ಎಲ್ಲವೂ ಶಮನ. ಏಕೆಂದರೆ stress, pain ಮಾಯವಾಗಿ Endorphins ಹಾರ್ಮೋನು ಬಿಡುಗಡೆ ಆಗಿರುತ್ತದೆ. ಆಗ ಆಕೆಯನ್ನು ಸಂತೈಸುವುದೇ ಬೇಡ,

National Chocolate Ice Cream Day 2022: ಕಪ್ಪನ್ನೇ ಮುರಿದು ತಿಂದರೂ ಐಸ್​ಕ್ರೀಮ್ ಕೋಪಗೊಳ್ಳದು!
ಉಮಾರಾಣಿ ಪೂಜಾರ
ಶ್ರೀದೇವಿ ಕಳಸದ
|

Updated on:Jun 07, 2022 | 12:22 PM

Share

National Chocolate Ice Cream Day 2022: According to John Locke Our mind is tabula rasa. ಅಂದರೆ ನಮ್ಮ ಮನಸ್ಸು ಸ್ವಚ್ಛ ಫಲಕವಿದ್ದಂತೆ. ನಮ್ಮ ಸುತ್ತಮುತ್ತ ನಡೆಯುವ ಹಾಗೂ, ಕೇಳುವ, ಕಾಣಿಸುವ ಎಲ್ಲವೂ ನಮಗೆ ಅರಿವಿಲ್ಲದಂತೆ ಆ ಸ್ವಚ್ಛ ಫಲಕವನ್ನು ಸೇರುತ್ತಿರುತ್ತವೆ. ಆದ್ದರಿಂದ ಋಣಾತ್ಮಕ ಅಂಶ, ವ್ಯಕ್ತಿ,  ನಿರಾಶಾದಾಯಕ ಅಂಶಗಳನ್ನು ದೂರವಿಡಲು ಸಾಧ್ಯವೆ? ಏಕೆಂದರೆ ನಮಗಿರುವುದು ಒಂದೇ ಜೀವನ. ಎಲ್ಲರನ್ನೂ ದೂರವಿಟ್ಟು ದ್ವೀಪದಂತೆ ಬದುಕಲೂ ಆಗದು. ಜೊತೆಜೊತೆಗೇ ಆಗಾಗ ಕೆಲವು ಋಣಾತ್ಮಕ ಮೊಟ್ಟೆಗಳನ್ನು ಎದುರಿಸಲೇಬೇಕಾಗುತ್ತದೆ. ಹೀಗಾದಾಗೆಲ್ಲ ನಾನು ನನ್ನನ್ನು ಕಾಪಾಡಿಕೊಳ್ಳಲು ಇತ್ತೀಚೆಗೆ ಒಂದು ಉಪಾಯ ಕಂಡುಕೊಂಡಿದ್ದೇನೆ. ಅದೇ ಚಾಕೋಲೇಟ್ ಐಸ್ ಕ್ರೀಮ್! ಹೀಗೆ ಆಪ್ತಗೆಳತಿಯರು ಯಾರಾದರೂ ದುಃಖ, ಬೇಸರದಲ್ಲಿದ್ದಾಗ ನನ್ನ ಮಾತುಗಳು ಏನೂ ಅವರಿಗೆ ಸಾಂತ್ವನ ನೀಡುತ್ತಿಲ್ಲ ಎನ್ನಿಸಿದಾಗ ನಾನೂ ಬೇಸರಕ್ಕೊಳಗಾಗುತ್ತಿದ್ದೆ. ಹೀಗೇ ಆದರೆ ಏನು ಪ್ರಯೋಜನ ಎನ್ನಿಸಿ ಮೇಲಿನ ಉಪಾಯಕ್ಕೆ ಶರಣಾದೆ. ದೇಹವನ್ನು ಬಿಟ್ಟು ಮನಸ್ಸಿಲ್ಲ, ಮನಸ್ಸು ಬಿಟ್ಟು ದೇಹವಿಲ್ಲ! ಉಮಾರಾಣಿ ಪೂಜಾರ (Umarani Pujar) 

ಚಾಕೋಲೇಟ್ ಚಾಕ್ಲೇಟ್ ಐಸ್ ಕ್ರೀಮ್ ತಿಂದಾಗ ಎಲ್ಲ ಜಂಜಡಗಳೂ ಗಾವುದ ದೂರ ಓಡುತ್ತವೆ. ಹೀಗೆ ಗೆಳತಿಯರೊಂದಿಗೆ ಐಸ್​ಕ್ರೀಮ್ ತಿನ್ನುತ್ತಾ, ಅವಳ ಬೇಗುದಿ, ಹತಾಶೆ, ನಿರಾಶೆ ಎಲ್ಲವನ್ನೂ ನೋಡುತ್ತಿರುತ್ತೇನೆ. ಕೇಳುತ್ತಿರುತ್ತೇನೆ. ‘ಸರಿ. ಮುಂದೆ, ಮತ್ತೆ…’ ಎನ್ನುತ್ತಿರುತ್ತೇನೆ. ಆಕೆಯ ಐಸ್​ಕ್ರೀಮ್​ ಕೂಡ ಮುಗಿದಿರುತ್ತದೆ ಉದ್ವೇಗ, ಹತಾಶೆ, ಕೋಪ ಎಲ್ಲವೂ ಶಮನವಾಗಿರುತ್ತದೆ. ಆ ಕ್ಷಣಕ್ಕಾದರೂ ಆಕೆಗೆ ಸಮಾಧಾನವಾಗಿರುತ್ತದೆ. ಏಕೆಂದರೆ stress ಹಾಗೂ pain ಎರಡೂ ಮಾಯವಾಗಿ Endorphins ಹಾರ್ಮೋನು ಬಿಡುಗಡೆ ಆಗಿರುತ್ತದೆ. ಆಗ ನಾನು ಆಕೆಯನ್ನು ಸಂತೈಸುವುದೂ ಬೇಡ, ನನ್ನ ಗಂಟಲಿಗೆ ಶ್ರಮ ಕೊಡುವುದೂ ಬೇಡ. ಇದೆಲ್ಲವನ್ನು ಒಂದು ಚಾಕೋಲೇಟ್ ಐಸ್ಕ್ರೀಮ್ ಮಾಡಿಬಿಡುತ್ತದೆ. ಆಮೇಲೆ ಐಸ್ ಕ್ರೀಂ ತಿಂದಾದ ಮೇಲೆ ‘ಏನೋ ಹೇಳ್ತಾ ಇದ್ದೆ’ ಎಂದು ತಿರುಗಿ ಕೇಳಿದರೆ, ಮೊದಲು ಅಳುತ್ತಿದ್ದವಳು ನಂತರ ನಸುನಗುತ್ತಾ ‘ನೀನಿದ್ದೀಯಲ್ಲ ನನ್ನ ಫ್ರೆಂಡು ಬಿಡು, ನಾನಿನ್ಮೇಲೆ ಯಾವುದಕ್ಕೂ ಹೆದರಲ್ಲ’ ಅನ್ನುವುದೆ?! ಹಾಗಾದರೆ ಈ ಕರಾಮತ್ತು ಮಾಡಿದ್ದು ನಾನಾ? ಐಸ್ ಕ್ರೀಮ್ ಆ? ಒಂದು ಕ್ಷಣ ನನಗೆ ಅಚ್ಚರಿ. ಅದಕ್ಕೆ ಎನಿಸುತ್ತದೆ ದೇಹದ ತೂಕ ಹೆಚ್ಚುತ್ತದೆ ಎಂದು ಎಲ್ಲಾ ಆಹಾರವನ್ನು ಬದಿಗೆ ಸರಿಸುವ ಕತ್ರಿನಾ ಕೈಫ್; ಫೇವರಿಟ್ ಡಿಶ್ ಯಾವುದು ಎಂದು ಕೇಳಿದಾಗ ಊಟದ ಹೆಸರನ್ನು ಹೇಳುವುದು ಬಿಟ್ಟು ಐಸ್ ಕ್ರೀಂ ಹೆಸರನ್ನು ಹೇಳುವುದು!

ಇದನ್ನೂ ಓದಿ : National Chocolate Ice Cream Day 2022: ಆ ದಿನ ನಮ್ಮನ್ನು ಕಾಪಾಡಿದ ಪುರಾತನ ಐದರ ನೋಟು

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಇದು ಸ್ಪರ್ಧಾತ್ಮಕ ಯುಗ. ಎಲ್ಲರ ಕಾಲನ್ನು ಎಲ್ಲರೂ ಎಳೆಯುವವರೇ ಹೊರತು ಯಾರೂ ಮೇಲೆ ಏರಲು ಅಂದರೆ ಪ್ರಗತಿ ಸಾಧಿಸಲು ಸಹಾಯ ಮಾಡಲಾರರು. ಹೀಗಿದ್ದಾಗ ಯಾರಿಂದಲೂ ಏನನ್ನು ನಿರೀಕ್ಷೆ ಮಾಡಲೇಬಾರದು. ಚೆನ್ನಾಗಿ ನೆನಪಿಡಬೇಕು ಯಾವುದರ ಮೇಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೇ ಇದ್ದರೆ ಎಂದೆಂದೂ ಹತಾಶೆ ಆಗೋದೇ ಇಲ್ಲ! ಆದರೆ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ಆದರೆ ಚಾಕ್ಲೇಟ್ ಐಸ್ ಕ್ರೀಮ್ ಮೇಲೆ ಇಟ್ಟುಕೊಳ್ಳಿರಿ! ಅದೆಂದೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಯಾರಲ್ಲೂ ನಿಮ್ಮ ನೋವನ್ನು ಹೇಳಿಕೊಳ್ಳದೆ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬಹುದು. ಆದ್ದರಿಂದ ನನಗೆ ಈ ಚಾಕೋಲೇಟ್ ಐಸ್ ಕ್ರೀಮ್ ನೋಡಿದಾಗ ಚಿ. ಉದಯಶಂಕರ್ ಅವರ ಆಡಿಸಿ ನೋಡು ಬೀಳಿಸಿ ನೋಡು ಹಾಡು ನೆನಪಾಗುತ್ತದೆ.

ಏಕೆಂದರೆ ಈ ಯಾಂತ್ರಿಕ ಜಗತ್ತಿನಲ್ಲಿ ‘ಐಸ್ ಕ್ರೀಮ್ ಕಪ್ಪನ್ನೇ ಮುರಿದು ತಿಂದರೂ ಐಸ್ ಕ್ರೀಂ ಕೋಪಗೊಳ್ಳದು!’ ಅದು ಅದಾಗೇ ಕರಗಿ ಥಣ್ಣಗೆ ಖುಷಿ ಕೊಡುತ್ತಲೇ ಇರುತ್ತದೆ!

ಗಮನಿಸಿ : ವಿಶೇಷ ದಿನಗಳ ಸಂದರ್ಭಕ್ಕೆ ನೀವೂ ಕೂಡ ನಿಮ್ಮ ವಿಚಾರ, ಅನುಭವವನ್ನು ಬರೆಯಬಹುದು. ಒಂದು ವಾರ ಮೊದಲು ಸುಮಾರು 300 ಪದಗಳಲ್ಲಿ ನಿಮ್ಮ ಫೋಟೋದೊಂದಿಗೆ ಬರಹ ನಮ್ಮನ್ನು ತಲುಪಲಿ. tv9kannadadigital@gmail.com

Published On - 12:18 pm, Tue, 7 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ