Trending: ವಿಜಯದ ಸಂಭ್ರಮದ ವೇಳೆ ತನ್ನ ಪತ್ನಿಗೆ ಗುದ್ದಿದ ಸೈಕ್ಲಿಸ್ಟ್

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಸಂತಸದಲ್ಲಿ ಸೈಕ್ಲಿಸ್ಟ್ ಲೂಯಿಸ್ ಕಾರ್ಲೋಸ್ ಅವರು ಸಂಭ್ರಮಾಚರಣೆ ಮಾಡುತ್ತಾ ಆಕಸ್ಮಿಕವಾಗಿ ತನ್ನ ಪತ್ನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.

Trending: ವಿಜಯದ ಸಂಭ್ರಮದ ವೇಳೆ ತನ್ನ ಪತ್ನಿಗೆ ಗುದ್ದಿದ ಸೈಕ್ಲಿಸ್ಟ್
ಸೈಕ್ಲಿಸ್ಟ್ ಲೂಯಿಸ್ ಕಾರ್ಲೋಸ್ ಚಿಯಾ
Follow us
TV9 Web
| Updated By: Rakesh Nayak Manchi

Updated on:Jun 07, 2022 | 1:43 PM

ಸೈಕ್ಲಿಸ್ಟ್ (cyclist) ಒಬ್ಬರು ಗುರಿ ತಲುಪಿದ ವೇಳೆ ವಿಜಯದ ಸಂಭ್ರಮಾಚರಣೆ ನಡೆಸಿದ್ದಾರೆ. ಈ ಸಂಭ್ರಮಾಚರಣೆ ಅವರ ಪಾಲಿಗೆ ಕ್ಷಣಿಕವಾಗಿ ಪರಿಣಮಿಸಿತು. ಏಕೆಂದರೆ ಸಂಭ್ರಮಾಚರಣೆ ಮಾಡುತ್ತಾ ಸೈಕಲ್​ನಲ್ಲಿ ಬಂದು ಎದುರು ನಿಂತಿದ್ದ ತನ್ನ ಪತ್ನಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್(Video Viral) ಆಗುತ್ತಿದೆ.

ಇದನ್ನೂ ಓದಿ: Trending: ರಂಗಪ್ರವೇಶ ಮಾಡಿದ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್, ಭರತನಾಟ್ಯ ವಿಡಿಯೋ ವೈರಲ್

ಲೂಯಿಸ್ ಕಾರ್ಲೋಸ್ ಚಿಯಾ ವಾರ್ಷಿಕ ಸೈಕ್ಲಿಂಗ್ ರೇಸ್ ವುಲ್ಟಾ ಎ ಕೊಲಂಬಿಯಾದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಮೊದಲ ಸ್ಥಾನವನ್ನು ಪಡೆಯಲು ಯಶಸ್ವಿಯಾದರು. ಇದರ ಸಂತಸದಲ್ಲಿ ಅವರು ಸೈಕಲ್​ನಲ್ಲೇ ಕುಳಿತುಕೊಂಡು ತನ್ನ ಎರಡೂ ಕೈಗಳಿಂದ ಎದೆಗೆ ಹೊಡೆಯುತ್ತಾ ಬಂದಿದ್ದಾರೆ. ಈ ವೇಳೆ ಸೈಕಲ್ ಛಾಯಾಗ್ರಾಹಕರಿದ್ದ ಗುಂಪಿನ ಕಡೆಗೆ ನುಗ್ಗಿದೆ. ಈ ಗುಂಪಿನಲ್ಲಿ ಸೈಕ್ಲಿಸ್ಟ್ ಪತ್ನಿಯೂ ಇದ್ದರು. ಅದರಂತೆ ಸೈಕಲ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಆಕೆ ಪ್ರಜ್ಞಾಹೀನಳಾಗಿದ್ದಾಳೆ.

ಇದನ್ನೂ ಓದಿ: Trending: ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವಿಡಿಯೋ ವೈರಲ್

ಸ್ಥಳೀಯ ವರದಿಗಳ ಪ್ರಕಾರ, ಆಕೆ ವೈದ್ಯಕೀಯ ನಿಗಾದಲ್ಲಿದ್ದು, ತಲೆಯ ಗಾಯಕ್ಕೆ ಹೊಲಿಗೆ ಹಾಕಬೇಕಾಗಿದೆ. ಜಿಯಾ ಕೊಲಂಬಿಯಾ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಲೂಯಿಸ್, “ನಾನು ಬ್ರೇಕ್ ಹಾಕಲು ಯತ್ನಿಸಿದೆ, ಆದರೂ ಸೈಕಲ್ ನಿಂತಿಲ್ಲ. ಆರಂಭದಲ್ಲಿ ನಾನು ಆಕೆ ಇನ್ನೊಬ್ಬ ವ್ಯಕ್ತಿಯಾಗಿರಬಹುದು ಎಂದು ಅಂದುಕೊಂಡಿದ್ದೆ. ನಂತರವೇ ಆಕೆ ನನ್ನ ಪತ್ನಿ ಎಂದು ತಿಳಿಯಿತು. ಅವಳು ಯಾಕೆ ದಾರಿಯಿಂದ ಹೊರಬರಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದರು.

ಈ ಹಿಂದೆ ಯುಎಸ್​ನ ಕ್ಯಾಲಿಫೋರ್ನಿಯಾದಲ್ಲಿ ಆಫ್-ರೋಡ್ ರೇಸ್ ಈವೆಂಟ್‌  ನಡೆದಿತ್ತು. ಈ ಸೈಕ್ಲಿಂಗ್ ಸ್ಪರ್ಧೆ ವೇಳೆ ಕೋಪಗೊಂಡ ಗೂಳಿಯೊಂದು ಸೈಕ್ಲಿಸ್ಟ್​ನನ್ನು ಸೈಕಲ್ ಸಹಿತ ಎಸೆದಿದೆ. ಇದು ನಂತರ ಗೊಂದಲಕ್ಕೂ ಕಾರಣವಾಗಿತ್ತು.  ಟೋನಿ ಇಂದರ್‌ಬಿಟ್ಜಿನ್ ಎಂಬ ಸೈಕ್ಲಿಸ್ಟ್ ಆರಂಭದಲ್ಲಿ ಗೂಳಿಯನ್ನು ಹಸು ಎಂದು ತಪ್ಪಾಗಿ ಗ್ರಹಿಸಿದ್ದನು. ಹತ್ತಿರ ಹೋಗುತ್ತಿದ್ದಂತೆ  ಗೂಳಿ ಕೋಪಗೊಂಡು ದಾಳಿ ನಡೆಸಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Tue, 7 June 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?