AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Environment : ಬಲಶಾಲಿ ಬದುಕುತ್ತಾನೆ, ದುರ್ಬಲ ಇಲ್ಲವಾಗುತ್ತಾನೆ

Plant a tree : ತಿಂಗಳ ಹಿಂದೆ ನೆಟ್ಟ ಪುಟ್ಟ ದಾಸವಾಳ ಗಿಡ; ಚಹ ಸೋಸಿ ಉಳಿದ ಚಹಾಪುಡಿಯನ್ನು ಗೊಬ್ಬರದಂತೆ ಹಾಕಲು ಹೋದಾಗ, ಪುಟ್ಟ ಮಗುವಿನಂತೆ ಮಾತನಾಡಿಸುತ್ತದೆ. ಸುಳಿಗಾಳಿಗೆ ಹಾಯಾಗಿ ಅಲುಗಾಡಿ, ನಗೆಬೀರುತ್ತದೆ.

Environment : ಬಲಶಾಲಿ ಬದುಕುತ್ತಾನೆ, ದುರ್ಬಲ ಇಲ್ಲವಾಗುತ್ತಾನೆ
ಕಲೆ : ಜಬೀವುಲ್ಲಾ ಎಂ. ಅಸದ್
TV9 Web
| Updated By: ಶ್ರೀದೇವಿ ಕಳಸದ|

Updated on: Apr 21, 2022 | 12:52 PM

Share

Environment : ಪರಿಸರ ಎಂಥದೋ ಅಮೂರ್ತವನ್ನು ಹುದುಗಿಸಿಟ್ಟುಕೊಂಡಿದೆ. ಕೆಲವೊಮ್ಮೆ ಗಿಡಮರಗಳು ದೈವಿಕ ಸ್ವರೂಪಗಳಾಗಿ ಕಾಣುತ್ತವೆ. ತಿಂಗಳ ಹಿಂದೆ ನೆಟ್ಟ ಪುಟ್ಟ ದಾಸವಾಳ ಗಿಡ; ಚಹ ಸೋಸಿ ಉಳಿದ ಚಹಾಪುಡಿಯನ್ನು ಗೊಬ್ಬರದಂತೆ ಹಾಕಲು ಹೋದಾಗ, ಪುಟ್ಟ ಮಗುವಿನಂತೆ ಮಾತನಾಡಿಸುತ್ತದೆ. ಸುಳಿಗಾಳಿಗೆ ಹಾಯಾಗಿ ಅಲುಗಾಡಿ, ನಗೆಬೀರುತ್ತದೆ. ಮರಗಳನ್ನು ಕಡಿದು, ಅರಣ್ಯವನ್ನು ಇಲ್ಲವಾಗಿಸಿ, ಕಾರ್ಖಾನೆ, ಕಟ್ಟಡ ಕಟ್ಟಿದರೆ ದೇಶ ಮುಂದುವರೆಯುತ್ತದೆ ಎಂಬುದು ಶುದ್ಧ ಸುಳ್ಳು. ಯಾವುದೇ ದೇಶದ ಪ್ರಗತಿ, ಆ ದೇಶದ ಅರಣ್ಯ ಸಂಪತ್ತನ್ನು ಅವಲಂಬಿಸಿರುತ್ತದೆಂಬುದು ಅಷ್ಟೇ ನಿಜ. ಹೀಗೆಯೇ ಮುಂದುವರೆದರೆ, ವಿಷಮ ಸ್ಥಿತಿ ಎದುರಾಗುತ್ತದೆ. ಮನೆಗೊಂದು ಕೆಜಿ ಆಮ್ಲಜನಕ ತಂದು, ಗುದ್ದಾಡಿ ಉಸಿರಾಡಬೇಕಾಗುತ್ತದೆ. ಡಾರ್ವಿನ್​ನ ನಿಯಮದಂತೆ. ಬಲಶಾಲಿ ಬದುಕುತ್ತಾನೆ. ದುರ್ಬಲ ಇಲ್ಲವಾಗುತ್ತಾನೆ. ಈಗೇನು ಕಡಿಮೆ ವಿಷಮ ಸ್ಥಿತಿ ಎದುರಾಗಿದೆಯೇ? ಉಮಾರಾಣಿ ಪೂಜಾರ್, ಲೇಖಕಿ (Umarani Pujar)

ಕಾಡುಕಡಿತದ ಅನರ್ಥದಿಂದಾಗಿ ಪ್ರಪಂಚದ ಕೆಲವು ಭಾಗದ ಭೂಮಿ ಬಂಜರಾಗುತ್ತಿದೆ. ಅರಣ್ಯದ ಶೇಕಡಾ ತೊಂಬತ್ತರಷ್ಟು ಭಾಗ ಭೂಮಿಯ ಮೇಲ್ಭಾಗದಲ್ಲಿದ್ದೂ, ಉಳಿದ ಭಾಗ ಭೂಮಿಯ ಆಳದಲ್ಲಿರುತ್ತದೆ. ಆಳದಲ್ಲಿ ಬಹುಭಾಗ ಏಕಕೋಶಿಯ ಜೀವಿಗಳಿದ್ದೂ, ಅವು ಬರಿಗಣ್ಣಿಗೆ ಕಾಣಲಾರವು. ಅವುಗಳನ್ನು ನೋಡಲು ಸೂಕ್ಷ್ಮದರ್ಶಕ ಯಂತ್ರದ ಸಹಾಯ ಬೇಕು. ಕೆಲವು ಜೀವಿಗಳು ಸಾರಜನಕವನ್ನು ಬೇರುಗಂಟುಗಳ ಮೂಲಕ ಸಸ್ಯರಾಶಿಗೆ ಒದಗಿಸುತ್ತವೆ. ಅನೇಕ ಏಕಾಣು ಜೀವಿಗಳು ಮಣ್ಣನ್ನು ಫಲವತ್ತಾಗಿಡಲು ಸಹಕರಿಸುತ್ತವೆ. ಆದರೆ ನಗರೀಕರಣದಿಂದಾಗಿ ಮನೆಗಳನ್ನು ನಿರ್ಮಿಸಲು, ರಸ್ತೆ ಅಗಲೀಕರಣ ಹಾಗೂ ಕಾರ್ಖಾನೆಗಳನ್ನು ನಿರ್ಮಿಸಲು ಕಾಡುಗಳನ್ನು ಕಡಿಯುತ್ತಿರುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತಿದೆ.

ಮಣ್ಣಿನ ಸವಕಳಿ, ಮಣ್ಣಿನ ಶಕ್ತಿಯನ್ನು ಕುಂದಿಸುತ್ತದೆ. ನದಿಗಳಲ್ಲಿ ಕೊರಕಲನ್ನು ಉಂಟು ಮಾಡುತ್ತದೆ. ಭೂಮಿ ಬಂಜರಾಗುತ್ತಿದೆ. ಪ್ರಪಂಚದ ಅನೇಕ ನಾಗರಿಕತೆಗಳು ನದಿ ತೀರದಲ್ಲಿ ಹಾಗೂ ಸಂಪದ್ಭರಿತ ವನ್ಯ ಸಂಕುಲದ ಮಧ್ಯ ರೂಪುಗೊಂಡಿವೆ. ವನ್ಯಸಂಕುಲ ನಾಗರಿಕತೆಗಳ ಅಗ್ರಗಾಮಿಯಾಗಿದೆ. ಅರಣ್ಯಗಳು ಹಾಗೂ ಅವುಗಳಿಂದ ದೊರಕುವ ವಸ್ತುಗಳು ಮಾನವನಿಗೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ. ಆದ್ದರಿಂದಲೇ ಅರಣ್ಯಗಳನ್ನು ‘ಹಸಿರು ಚಿನ್ನ’ ಎಂದುಕರೆಯಲಾಗುತ್ತದೆ.

ನಗರಪ್ರದೇಶಗಳಲ್ಲಿ ಹಸಿರು ವಲಯಗಳನ್ನು ಅಭಿವೃದ್ಧಿಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳ ಮೂಲಕ ಅರಣ್ಯಗಳ ಬಗೆಗೆ ಹಾಗೂ ಅವುಗಳ ಸಂರಕ್ಷಣೆಯ ಬಗೆಗೆ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿಗಳನ್ನು ನೀಡಬೇಕು. ಯುನೆಸ್ಕೊ ಮಾನವ ಮತ್ತು ಜೈವಿಕ ಸಂರಕ್ಷಣಾ ಪಟ್ಟಿಯ ಪ್ರಕಾರ ಭಾರತದ ಎಂಟು ಸಂರಕ್ಷಣಾ ವಲಯಗಳು, ಪ್ರಪಂಚದ ಸಂರಕ್ಷಣಾವಲಯ ಜಾಲಗಳ ಭಾಗಗಳಾಗಿವೆ.

ಅರಣ್ಯಗಳು ಮತ್ತು ನಾಗರೀಕತೆಯ ನಡುವೆ ಅವಿನಾಭಾವ ಸಂಬಂಧವಿದೆ. ಸಮೃದ್ಧ ಅರಣ್ಯ ಸಂಪನ್ಮೂಲಗಳು, ದೇಶದ ಸಮೃದ್ಧತೆಯ ದ್ಯೋತಕ. ಅರಣ್ಯಗಳು ಜೈವಿಕ ವೈವಿಧ್ಯತೆ ಮತ್ತು ಜೈವಿಕ ಪರಿಸರದ ಸಮತೋಲನ ಕಾಪಾಡುವುದರ ಜೊತೆಗೆ ಕೃಷಿ ಮತ್ತು ಕೈಗಾರಿಕೆಯ ಉತ್ಪಾದನೆಯನ್ನು ದ್ವಿಗುಣಗೊಳಿಸುತ್ತವೆ. ಮುಖ್ಯವಾಗಿ ಮಾಲಿನ್ಯರಹಿತ ಪರಿಸರವನ್ನು ನಿರ್ಮಿಸುತ್ತವೆ.

ಉಮಾರಾಣಿ ಪೂಜಾರ್ ಕವನ : Dharwad: ಮಾನವ ಜಾತಿ ತಾನೊಂದೆ ವಲಂ; ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ, ಈಗ ಹುಸಿನಗೆ

ಪರಿಸರಕ್ಕೆ ನಾವು ಏನು ಕೊಡುತ್ತೇವೆಯೋ ಅದು ನಮಗೆ ಅದನ್ನೇ ತಿರುಗಿಸಿ ನೀಡುತ್ತದೆ. ಎಷ್ಟೋ ವನ್ಯ ಪ್ರಾಣಿಗಳು ಹುಲಿ, ಸಿಂಹ, ಲಯನ್ ಟೈಲ್ಡ್ ಮೆಕಾಕಾ, ಕಾಳಿಂಗ ಸರ್ಪ, ಗುಬ್ಬಚ್ಚಿಗಳು, ಗಿಳಿ, ಗೊರವಂಕ, ಪಿಕಲಾರಗಳ ಜೀವಪ್ರಭೇಧ ನಶಿಸಿ ಹೋಗುತ್ತಿದೆ. ಅಳಿವಿನಂಚಿನಲ್ಲಿದೆ. ಚಿಲಿ ಪಿಲಿ ಗುಟ್ಟುತ್ತಿದ್ದ ಸಂತುಷ್ಟ ಮನೆಗುಬ್ಬಿಯ ಸಂತತಿ ಮೊಬೈಲಿನ ಆರ್ಭಟದಿಂದಾಗಿ ಸಂಪೂರ್ಣ ನಾಶವಾಗಿ ಹೋಗಿವೆ. ರೈತಮಿತ್ರ ಕಳ್ಳಿಪೀರ ಪಕ್ಷಿಯ ಸಂತತಿ ಕೂಡಾ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಲಿದೆ. ಎಷ್ಟೋ ಬಗೆಯ ಔಷಧಿಯ ಸಸ್ಯಾಗಳು ಕೂಡಾ ನಾಶವಾಗಿವೆ ಹಾಗೂ ಆಗುತ್ತಲಿವೆ. ಹಿಮಾಲಯ ಹಾಗೂ ಪಶ್ಚಿಮ ಘಟ್ಟಗಳು ಅಪ್ರತಿಮ ವನ್ಯ ಪ್ರಾಣಿ ಹಾಗೂ ಸಸ್ಯ ಸಂಕುಲದ ಆಗರವಾಗಿದ್ದರೂ ಸಹಿತ ಅಲ್ಲಿನ ಹಲವು ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲದ ಜೀವಪ್ರಬೇಧಗಳು ಅಳಿವಿನಂಚಿನಲ್ಲಿವೆ.

ಪ್ರಕೃತಿಯು ನಳನಳಿಸುವುದು ಗುಡುಗಿನಿಂದಲ್ಲ,ಮಳೆಯಿಂದ. ಹಾಗೆಯೇ ಪ್ರಕೃತಿಯನ್ನು ಪೂಜಿಸಿದರೆ, ಪೋಷಿಸಿದರೆ ಅದು ಸಕಲ ಜೀವಸಂಕುಲವನ್ನು ಪೊರೆದು ಕಾಪಾಡುತ್ತದೆ. ಆದ್ದರಿಂದಲೇ ನಮ್ಮ ಪೂರ್ವಜರು ಶಿಲೆಯಾದಿಯಾಗಿ, ನದಿ, ವೃಕ್ಷ, ಪರ್ವತಗಳನ್ನೂ ಪೂಜಿಸಿದರು. ಆದರೆ ಪರಿಸರವನ್ನು ಅಸಡ್ಡೆಯಾಗಿ ಕಂಡು ಪರಿಸರದ ಅವನತಿಗೆ ಕಾರಣವಾದರೆ ಪರಿಸರ ತನ್ನ ವಿರಾಡ್ರೂಪವನ್ನು ತೋರಿಸುತ್ತದೆ. ಜಲ ಮಾಲಿನ್ಯ, ಮಣ್ಣು ಮಾಲಿನ್ಯ, ವಿಕಿರಣ ಮಾಲಿನ್ಯ, ಶಬ್ದ ಮಾಲಿನ್ಯ, ವಿಕಿರಣ ಮಾಲಿನ್ಯಗಳಿಂದ ಪರಿಸರ ಹಾಳುಗೆಡವಿದ ಪರಿಣಾಮ ನೆರೆಹಾವಳಿ, ಜಲ ಪ್ರಳಯ, ಜ್ವಾಲಾಮುಖಿ, ಭೂಕಂಪ, ಭಯಂಕರ ವೈರಸ್ಗಳ ಭೀತಿ ತಲೆದೋರಿದೆ.

ಮಹಾನಗರಗಳಲ್ಲಿ, ಪ್ಲಾಸ್ಟಿಕ್ ಹಾಗೂ ಕಾರ್ಖಾನೆಯ ತ್ಯಾಜ್ಯ ಇತ್ಯಾದಿ, ದಿನೇ ದಿನೇ ಹೆಚ್ಚಾಗಿ ಸಂಗ್ರಹಣೆಯಾಗಿ, ಭೂಮಿಯಲ್ಲಿ ಸೇರಿ ಹೋಗಿ ಮಣ್ಣು ಮಲಿನಗೊಳ್ಳುತ್ತಿದೆ.ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದವುಗಳು ಮಣ್ಣು ನೀರು ಗಾಳಿಯನ್ನು ಸೇರಿಕೊಂಡು ಭೂಮಿಯ ಮೇಲೆ ವಾಸಿಸುತ್ತಿರುವ ಪ್ರಾಣಿ ಹಾಗೂ ಸಸ್ಯ ಸಂಕುಲದ ಮೇಲೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರ್ಕಾರ ಹಾಗೂ ಇನ್ನೂ ಮುಂತಾದ ಸಂಸ್ಥೆಗಳು ಇವುಗಳ ಜವಾಬ್ದಾರಿಯನ್ನು ತೆಗೆದುಕೊಂಡು ಸೂಕ್ತ ರೀತಿಯಲ್ಲಿ ವಿಲೇವಾರಿ ಹಾಗೂ ಮರುಬಳಕೆಯನ್ನು ಮಾಡಿ ಪರಿಸರಕ್ಕೆ ಇವುಗಳಿಂದ ಹಾನಿಯಾಗದಂತೆ ಪರಿಸರದ ರಕ್ಷಣೆಗೆ ಮುಂದಾಗಬೇಕು. ಕಸದಿಂದ ರಸ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಅನುಪಯುಕ್ತ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಉಪಯುಕ್ತ ವಸ್ತುಗಳನ್ನಾಗಿ ಮಾಡಬೇಕು.ಇದರಿಂದ ಪರಿಸರದ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.

ಸಾಕಷ್ಟು ಪ್ರಭೇಧದ ಗಿಡಮರಗಳನ್ನು ಬೆಳೆಸಲು ಜನತೆ ಮುಂದಾಗಬೇಕು. ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೊಲ ಹಾಗೂ ತೋಟಗಳಲ್ಲಿ ಕಡಿಮೆ ರಾಸಾಯನಿಕ ಬಳಕೆ ಮಾಡಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಪರಿಸರ ಸಂರಕ್ಷಣೆ ಯೋಜನೆಯಲ್ಲಿ ಜನರೆಲ್ಲಾ ಪಾಲ್ಗೊಳ್ಳಬೇಕು. ಕಸ ಹಾಗೂ ಕೈಗಾರಿಕಾ ತ್ಯಾಜ್ಯವಸ್ತುಗಳ ಸಂಸ್ಕರಣೆ ಯನ್ನು ಮಾಡಿ, ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಬೇಕು. ನೀರನ್ನು ಜೀವಜಲವೆಂದು ತಿಳಿಯಬೇಕು. ಪೋಲು ಮಾಡಬಾರದು.ಮಳೆ ನೀರುಕೊಯ್ಲು, ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಬೇಕು.ಆಡಂಬರಕ್ಕೆ ಅವಕಾಶ ಕೊಡದೇ ಮಾನವನು ಸರಳ ಹಾಗೂ ಸ್ವಚ್ಛ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಪೆಟ್ರೋಲ್, ಡೀಸೆಲ್ ನಿಂದಾಗಿ ಪ್ರಾಣವಾಯು ಕಲುಷಿತವಾಗಿದೆ. ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ. ಈ ಇಂಧನಗಳ ಬದಲಾಗಿ ನವೀಕರಣ ಮೂಲ ಸೌರಶಕ್ತಿ, ಜೈವಿಕಇಂಧನ ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕು. ಅರಣ್ಯವನ್ನು ಬೆಳೆಸಿ ಉಳಿಸುವಲ್ಲಿ ಯುವಜನತೆ ಮುಂದಾಗಬೇಕು. ಸಾವಯವ ಗೊಬ್ಬರಕ್ಕೆ ಪ್ರಧಾನ್ಯ ನೀಡಬೇಕು. ವಿದ್ಯುತ್ ಶಕ್ತಿಯನ್ನು ಅತಿಯಾಗಿ ಬಳಸದೇ ಸೌರಶಕ್ತಿ ಅಂದರೆ ಸೋಲಾರನ್ನು ಬಳಸಬೇಕು. ಆದಷ್ಟು ಮರಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು.

ಇದನ್ನೂ ಓದಿ : Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ